Big Breaking: ಇಡೀ ದೇಶವೇ ಲಾಕ್ ಡೌನ್, ಮೋದಿ ಘೋಷಣೆ
ಕಿಲ್ಲರ್ ಕೊರೋನಾ ವೈರಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಜನತಾ ಕರ್ಫ್ಯೂ ಕರೆ ಕೊಟ್ಟಿದ್ದರು. ಇದಕ್ಕೆ ದೇಶದಲ್ಲಿ ಅಭೂತ ಪೂರ್ವವಾಗಿ ಬೆಂಬಲ ವ್ಯಕ್ತವಾಗಿತ್ತು. ಇದೀಗ ಮೋದಿ ಇಂದು (ಮಂಗಳವಾರ) ಮತ್ತೊಂದು ಕರೆ ಕೊಟ್ಟಿದ್ದಾರೆ.
ನವದೆಹಲಿ, (ಮಾ.24): ಇಂದು ಮತ್ತೆ ಕೊರೊನಾ ಕುರಿತು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ. ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದೆ. ಜನರು ಅದಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದೀಗ ದೇಶವನ್ನ ಲಾಕ್ ಡೌನ್ ಮಾಡುವುದು ಅನಿರ್ವಾವಾಗಿದೆ ಎಂದು ಹೇಳಿದರು.
ಕೊರೋನಾ ವೈರಸ್ ನಿಯಂತ್ರಣಕ್ಕೆ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ರಾತ್ರಿ 12ಗಂಟೆಯಿಂದ ಏಪ್ರಿಲ್ 14ರ ವರಗೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದರು.
ಕೊರೋನಾ ವೈರಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
* ಸಾಮಾಜಿಕ ಅಂತರವನ್ನ ಎಲ್ಲರೂ ಪಾಲಿಸಲೇಬೇಕು. ಇದು ನಿಮ್ಮನ್ನು, ನಿಮ್ಮ ಮಕ್ಕಳನ್ನು, ನಿಮ್ಮ ತಂದೆ ತಾಯಿಯನ್ನು, ಸ್ನೇಹಿತರನ್ನು ಕಾಪಾಡುತ್ತದೆ. ಇದನ್ನು ನೀವು ಪಾಲಿಸದಿದ್ದರೆ ಭಾರತ ದೊಡ್ಡ ಬೆಲೆ ತರಬೇಕಾಗುತ್ತದೆ. ಆದ್ದರಿಂದ ಇಂದು (ಮಂಗಳವಾರ) ರಾತ್ರಿ 12 ಗಂಟೆಯಿಂದ ಸಂಪೂರ್ಣ ದೇಶವೇ ಲಾಕ್ ಡೌನ್. ಇದೊಂದು ರೀತಿಯಲ್ಲಿ ಕರ್ಫ್ಯೂ ಇದ್ದಂತೆಯೇ. ಜನರು ಮನೆಯಿಂದ ಹೊರ ಬಾರಬಾರದು. ಕೊರೊನಾ ತಡೆಯಲು ಇದು ಅನಿವಾರ್ಯವಾಗಿದೆ ಎಂದರು.
* ನಿಮ್ಮನ್ನು ಉಳಿಸುವುದು, ನಿಮ್ಮ ಪರಿವಾರವನ್ನು ಉಳಿಸುವುದು ಕೇಂದ್ರ ಮತ್ತು ಎಲ್ಲಾ ರಾಜ್ಯಗಳ ಕರ್ತವ್ಯವಾಗಿದೆ. ನಾನು ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ದೇಶದಲ್ಲಿ ಎಲ್ಲಿದ್ದಿರೋ ಅಲ್ಲಿಯೇ ಇರಿ. ಹಿಂದೆ ನಿಮ್ಮ ಮುಂದೆ ನಾನು ಬಂದಿದ್ದಾಗ ಕೆಲವು ವಾರಗಳನ್ನು ನೀಡಿ ಎಂದು ಕರೆ ನೀಡಿದ್ದೆ. ಈಗ ಘೋಷಣೆ ಮಾಡಿರುವ ಲಾಕ್ ಡೌನ್ 21 ದಿನಗಳು ಜಾರಿಯಲ್ಲಿರುತ್ತದೆ. ದೇಶದ ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ, ಜಿಲ್ಲೆ, ಪಟ್ಟಣ, ಗ್ರಾಮಗಳು ಬಂದ್ ಆಗಲಿವೆ ಎಂದು ಸ್ಪಷ್ಟಪಡಿಸಿದರು.
* ಮನೆಯ ಬಾಗಿಲಿಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಿ. ಎಂದಿಗೂ ನೀವು ಅದನ್ನು ದಾಟಬೇಡಿ. ನಿಮ್ಮ ಸುರಕ್ಷತೆಗಾಗಿ, ಕೊರೊನಾ ವಿರುದ್ಧ ಹೋರಾಡಲು ಇದು ಅನಿವಾರ್ಯವಾಗಿದೆ. 21 ದಿನ ನೀವು ಮನೆಯಲ್ಲಿ ಇರಲಿಲ್ಲ ಎಂದರೆ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗುತ್ತದೆ. ನೀವು ಎಲ್ಲಿದ್ದಿರೋ ಅಲ್ಲಿಯೇ ಇರಿ. ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಮನೆಯಿಂದ ಹೊರ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.