ಲಾಕ್‌ಡೌನ್ ಎಫೆಕ್ಸ್: ರಾಜ್ಯದಲ್ಲಿ ಮದ್ಯ ಸಿಗದೆ 17 ಮಂದಿ ಆತ್ಮಹತ್ಯೆ!
ಮದ್ಯ ಸಿಗದೆ ಮತ್ತಿಬ್ಬರು ಆತ್ಮಹತ್ಯೆ!| aಕಳೆದೊಂದು ವಾರದಲ್ಲಿ 17 ಮಂದಿ ಸಾವಿಗೆ ಶರಣು
ಬೆಂಗಳೂರು(ಏ.01): ಮದ್ಯ ಸಿಗದ ಕಾರಣ ಮನನೊಂದು ರಾಜ್ಯದಲ್ಲಿ ಮತ್ತಿಬ್ಬರು ಆತ್ಮಹತ್ಯೆಗೆ ಶರಣವಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಳೆದೊಂದು ವಾರದಿಂದ 17 ಮಂದಿ ಆತ್ಮಹತ್ಯೆಗೆ ಶರಣಾದಂತಾಗಿದೆ.
ರಾಮನಗರ ಜಿಲ್ಲೆಯ ಹುಲಿಕಲ್ಲು ಗ್ರಾಮದ ರಮೇಶ್(40) ಹಾಗೂ ಉಡುಪಿ ಜಿಲ್ಲೆಯ ಕಾಪುವಿನ ಕುರ್ಕಾಲುವಿನ ಪಾಂಡು ಪೂಜಾರಿ(68) ಆತ್ಮಹತ್ಯೆಗೆ ಶರಣಾದವರು. ರಾಜ್ಯಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ಕಂಗಾಲಾಗಿರುವ ಮದ್ಯವಸನಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಉಡುಪಿಯೊಂದರಲ್ಲೇ ಮಾ.24ರಿಂದ ಒಟ್ಟು ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದಿನಿಂದ ಪೆಟ್ರೋಲ್, ಮದ್ಯ ದುಬಾರಿ!
ಅಬಕಾರಿ ಕಚೇರಿಗೆ ಕನ್ನ: .44 ಸಾವಿರದ ಮದ್ಯ ಕಳವು
ಬಳ್ಳಾರಿ: ಲಾಕ್‌ಡೌನ್ ಘೋಷಣೆ ಬಳಿಕ ಮದ್ಯಸಿಗದೆ ಮದ್ಯದಂಗಡಿ ಬಾಗಿಲು ಮುರಿದ ಘಟನೆ ಬೆನ್ನಲ್ಲೇ ಈಗ ಬಳ್ಳಾರಿಯಲ್ಲಿ ಕೆಲವರು ಅಬಕಾರಿ ಇಲಾಖೆ ಕಚೇರಿಗೇ ಕನ್ನ ಹಾಕಿ ಸಾವಿರಾರು ರುಪಾಯಿ ಮೌಲ್ಯದ ಮದ್ಯ ಹೊತ್ತೊಯ್ದ ಮಂಗಳವಾರ ಪ್ರಕರಣ ನಡೆದಿದೆ. ಅಬಕಾರಿ ಕಚೇರಿ ಚಾವಣಿ ಕಿತ್ತು ಒಳ ನುಗ್ಗಿರುವ ಪಾನಪ್ರಿಯರು ಅಕ್ರಮವಾಗಿ ಮದ್ಯ ಮಾರಾಟದ ಪ್ರಕರಣಗಳಲ್ಲಿ ಸಿಕ್ಕ ಸುಮಾರು .44 ಸಾವಿರ ಮೌಲ್ಯದ 13 ಬಾಕ್ಸ್‌ಗಳಲ್ಲಿದ್ದ ಮದ್ಯದ ಬಾಟಲ್‌ಗಳನ್ನು ಕದಿದ್ದಾರೆ.