ಮದುವೆ ಮುಂದೂಡಿ ಕರ್ತವ್ಯ ಮುಂದುವರಿಸಿದ ವೈದ್ಯೆ; ಮಾದರಿಯಾದ ಡಾ. ಶಿಫಾ!

ಕೊರೋನಾ ಮಹಾಮಾರಿ ದೇಶದಲ್ಲಿ ಅಪಾಯ ಸೃಷ್ಟಿಸುತ್ತಿದ್ದಂತೆ ಬಹುತೇಕಾ ಎಲ್ಲಾ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ತಮ್ಮ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರಾಣದ ಹಂಗು ತೊರೆದು ಹಗಳಿರುಳು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಲವರು ತಮ್ಮ ವೈಯುಕ್ತಿ ಸಮಸ್ಯೆ, ಅಗತ್ಯತೆ ಬದಿಗೊತ್ತಿ ದುಡಿಯುತ್ತಿದ್ದಾರೆ. ಹೀಗೆ ಸೋಂಕಿತರ ಚಿಕಿತ್ಸೆಗಾಗಿ ತನ್ನ ಮದುವೆಯನ್ನೇ ಮುಂದೂಡಿ ವೈದ್ಯೆಯ ರೋಚಕ ಮಾಹಿತಿ ಇಲ್ಲಿದೆ

Kerala doctor postpone her marriage for coronavirus treatment

ಕಣ್ಣೂರ್(ಏ.01): ಕೊರೋನಾ ಸೋಂಕು ತೊಲಗಿಸಲು ಭಾರತದ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿಗಳು, ಇವರ ಜೊತೆ ಪೊಲೀಸರು, ಸೈನಿಕರು ಹಾಗೂ ಹಲವು ಸಂಘ ಸಂಸ್ಥೆಗಳು ಅವಿರತ ಪ್ರಯತ್ನ ಮಾಡುತ್ತಿದೆ. ಇವರೆಲ್ಲರು ತಮ್ಮ ವೈಯುಕ್ತಿಕ ಅಗತ್ಯ, ಸಮಸ್ಯೆ, ಸಂತೋಷಗಳನ್ನು ಬದಿಗೊತ್ತಿ ಕೆಲಸ ಮಾಡುತ್ತಿದ್ದಾರೆ. ಕೇರಳದ ಕಣ್ಣೂರಿನ ಡಾಕ್ಟರ್ ಶಿಫಾ ಎಂ.ಮೊಹಮ್ಮದ್ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Fact Check: ಸನ್ನಿ ನಂ. 1, ಕೊರೋನಾ ಔಷಧಿಗೆ ಲಿಯೋನ್ 650 ಕೋಟಿ ಕೊಟ್ರಂತೆ!

23 ವರ್ಷದ ವೈದ್ಯೆ ಶಿಫಾ ಎಂ.ಮೊಹಮ್ಮದ್ ಕಣ್ಣೂರಿನ ಪರಿಯಾರ್ ಮೆಡಿಕಲ್ ಕಾಲೇಜಿನಲ್ಲಿನ ಐಸೋಲೇಶನ್ ವಾರ್ಡ್‌ನಲ್ಲಿನ ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ರಾಜ್ಯಗಳಿಂದ ಕೊರೋನಾಗೆ ನಲುಗಿದ ಮೊದಲ ರಾಜ್ಯ ಕೇರಳ. ಮಾರ್ಚ್ ತಿಂಗಳ ಆರಂಭದಲ್ಲೇ ಶಿಫಾ ಇಲ್ಲಿನ ಐಸೋಲೇಶನ್ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 29ಕ್ಕೆ ಶಿಫಾ ಮದುವೆ ಸಮಾರಂಭ ನಡೆಯಬೇಕಿತ್ತು. ದುಬೈನಲ್ಲಿನ ಉದ್ಯಮಿ ಜೊತೆ ಮದುವೆಗೆ ಎಲ್ಲಾ ತಯಾರಿ ನಡೆದಿತ್ತು.

ಆಂಧ್ರದ ಎಲ್ಲ ಆಸ್ಪತ್ರೆಗಳು ಸರ್ಕಾರದ ಸುಪರ್ದಿಗೆ!.

ಶಿಫಾಗೆ ರಜೆ ಕೂಡ ನೀಡಲಾಗಿತ್ತು. ಆದರೆ ಮದುವೆಯಾಗುವ ಭಾವಿ ಪತಿಗೆ ಕರೆ ಮಾಡಿದ ಶಿಫಾ, ಮದುವೆಯನ್ನು ಮುಂದೂಡಬಹುದು, ಆದರೆ ಚಿಕಿತ್ಸೆ ಮುಂದೂಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿ ಉದ್ಯಮಿ ಮದುವೆ ಮುಂದೂಡಲು ಸಮ್ಮತಿಸಿದ್ದಾರೆ. ಮದುವೆ ಮುಂದೂಡಿದ ಶಿಫಾ ಕೆಲಸಕ್ಕೆ ಹಾಜರಾಗಿದ್ದಾರೆ.

ಭಾರೀ ಸಾವು ನೋವು ನೋಡಲು ತಯಾರಾಗಿ: ಸರ್ಕಾರದ ವರದಿಗೆ ಬೆಚ್ಚಿ ಬಿದ್ದ ಅಮೆರಿಕನ್ನರು!.

ಪ್ರತಿ ಹೆಣ್ಣಿಗೂ ಮದುವೆ ಪ್ರಮುಖ ಘಟ್ಟ. ಇಷ್ಟೇ ಅಲ್ಲ ಮದುವೆ ವಿಚಾರದಲ್ಲಿ ಹೆಚ್ಚಿನವರೂ ರಾಜಿಯಾಗಲ್ಲ. ಆದರೆ ನನ್ನ ಮಗಳು ಸಾಮಾಜಿಕ ಬದ್ಧತೆ ಮೆರೆದಿದ್ದಾಳೆ. ಮಗಳ ನಿರ್ಧಾರಕ್ಕೆ ನಾವೆಲ್ಲ ಸಮ್ಮತಿಸಿದ್ದೇವೆ ಎಂದು ಮಕ್ಕಂ ಮೊಹಮ್ಮದ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ಶಿಫಾ ನಿರಾಕರಿಸಿದ್ದಾರೆ. ನನ್ನಂತೆ ಹಲವರು ನಿಶ್ಚಿತಾರ್ಥ, ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮುಂದೂಡಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ನಾನೂ ಒಬ್ಬಳು. ನಾನು ವಿಶೇಷವಾಗಿ ಏನೂ ಮಾಡಿಲ್ಲ, ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ. ಹೀಗಾಗಿ ಮಾಧ್ಯಮದ ಮುಂದೆ ಬಂದು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಿಫಾ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕಣ್ಣೂರಿನ ಪರಿಯಾರ್ ಮೆಡಿಕಲ್ ಕಾಲೇಜಿನಲ್ಲಿ 234 ಸೋಂಕಿತರು ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಇದೀಗ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಕೇಸ್ ಪತ್ತೆಯಾಗುತ್ತಿದೆ.

Latest Videos
Follow Us:
Download App:
  • android
  • ios