ವಿಶಾಖಪಟ್ಟಣಂ(ಏ.01): ಆಂಧ್ರಪ್ರದೇಶದಲ್ಲಿ ಒಂದೇ ದಿನ 23 ಕೊರೋನಾ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ, ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸರ್ಕಾರ, ಬ್ರಿಟಿಷ್‌ ಆಡಳಿತದಲ್ಲಿದ್ದ ಸಾಂಕ್ರಮಿಕ ರೋಗ ಕಾಯ್ದೆ-1897 ಕಾಯ್ದೆ ಜಾರಿ ಮೂಲಕ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದಿದೆ. ಈ ಮೂಲಕ ಕೊರೋನಾ ಪೀಡಿತರಿಗೆ ತ್ವರಿತ ಹಾಗೂ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

5 ದಿನ ಡ್ಯೂಟಿ ಬಳಿಕ ಮನೆ ತಲುಪಿದ ಡಾಕ್ಟರ್: ದೂರದಲ್ಲಿದ್ದೇ ಫ್ಯಾಮಿಲಿ ಜೊತೆ ಒಂದು ಕಪ್ ಟೀ!

ಈ ಕಾನೂನು, ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇದರನ್ವಯ, ಖಾಸಗಿ ಆಸ್ಪತ್ರೆಗಳಲ್ಲಿರುವ ಮೂಲಭೂತ ಸೌಕರ್ಯಗಳಾದ ಬೆಡ್‌ಗಳು, ಕೊಠಡಿಗಳು, ವಾರ್ಡ್‌ಗಳು, ಐಸಿಯು, ವೆಂಟಿಲೇಟರ್ಸ್‌, ಪರೀಕ್ಷಾ ಪ್ರಯೋಗಾಲಯಗಳು, ಶವಗಾರ, ಇನ್ನಿತರ ಪರಿಕರಗಳು ಹಾಗೂ ವೈದ್ಯ ಸಿಬ್ಬಂದಿಯನ್ನು ಸರ್ಕಾರಕ್ಕೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕಿದೆ.

ಹೀಗಾಗಿ, ಸರ್ಕಾರಕ್ಕೆ ಅಗತ್ಯವಿರುವ ಸಂದರ್ಭಗಳಲ್ಲಿ ಖಾಸಗಿ ವೈದ್ಯರು ತಮ್ಮ ಸೇವೆಯನ್ನು ನೀಡಬೇಕು.