ಜಲಂಧರ್(ಏ.04): ಲಾಕ್‌ಡೌನ್ ನಂತರ ದೇಶದಲ್ಲಿ ಏನೇನೋ ವಿಶೇಷತೆ ಕಾಣಸಿಗುತ್ತಿದೆ. ಎಂದೂ ಕಾಣಿಸಿಕೊಳ್ಳದ ಪ್ರಾಣಿ ಪಕ್ಷಗಿಗಳಿಉ ಸ್ವಚ್ಛಂದವಾಗಿ ಓಡಾಡುತ್ತಿವೆ. ಮಾಲೀನ್ಯದ ಮಟ್ಟ ಕಡಿಮೆಯಾಗಿದೆ. ಇನ್ನೂ ವಿಶೇಷ ಎಂದರೆ ಹಲವು ದಶಕಗಳಲ್ಲಿ ಎಂದೂ ಕಾಣಿಸದಿದ್ದ ಹಿಮಾಚಲ ಪರ್ವತ ಶ್ರೇಣಿಯ ಹಿಮ ಮುಕುಟಗಳನ್ನು ಪಂಜಾಬ್‌ನ ಜಲಂಧರ್‌ ನಿವಾಸಿಗಳು ನೋಡಿದ್ದಾರೆ.

ಎಂದೂ ಕಂಡಿದರ ಪರ್ವತದ ಸೌಂದರ್ಯವನ್ನು ಜಲಂಧರ್‌ ನಗರದವಾಸಿಗಳು ಕಣ್ತುಂಬಿಕೊಂಡಿದ್ದಾರೆ. ಅಲ್ಲಿ ವಾಯು ಮಾಲೀನ್ಯದ ಮಟ್ಟ ಕಡಿಮೆಯಾಗಿರುವುದೇ ಇದಕ್ಕೆ ಕಾರಣ.

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಅಮೋಘ ಕ್ಷಣವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಕಣ್ಣಿಗೆ ಕಾಣ ಸಿಗದಿದ್ದ ಪ್ರಾಣಿಗಳೆಲ್ಲ ಹಾಜರ್..! ಮೌನಗೊಳಿಸುತ್ತೆ ಮುಗ್ಧ ಪ್ರಾಣಿಗಳ ಚಿತ್ರ

ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ 21 ದಿನ ಪ್ರಧಾನಿ ನರೇಂದ್ರ ಮೋದಿ ಲಾಕ್‌ ಡೌನ್‌ ಘೋಷಿಸಿದ್ದಕ್ಕೆ ಜನರೇ ಥ್ಯಾಂಕ್ಸ್ ಹೇಳಿದ್ದಾರೆ. ಕಳೆದ ದಶಕಗಳಲ್ಲಿ ತಾವೆಂದೂ ಕಂಡಿರದ ನಿಸರ್ಗದ ಅದ್ಭುತ ದೃಶ್ಯವನ್ನು ಅವರು ಕಂಡಿದ್ದಾರೆ. ಹಿಮ ಹೊದ್ದಿರುವ ಪರ್ವತ ಶ್ರೇಣಿ ಕಂಡು ಜಲಂಧರ್‌ ಜನ ಆನಂದಿಸಿದ್ದಾರೆ.

ಜಲಂಧರ್‌ ನಗರದಿಂದ 213 ಕಿ. ಮೀಟರ್ ದೂರವಿರುವ ಹಿಮಾಚಲ ಪ್ರದೇಶದ ದೌಲಧರ್ ಪರ್ವತವನ್ನು ಜಲಂಧರ್‌ನ ಜನ ಬರಿಗಣ್ಣಿನಲ್ಲಿ ನೋಡಲು ಸಾಧ್ಯವಾಗಿದೆ. ಜನರು ಮನೆಯ ಟೆರೇಸ್ ಮೇಲೆ ಬಂದು ಈ ಸುಂದರ ದೃಶ್ಯದ ವಿಡಿಯೋ ಹಾಗೂ ಫೋಟೋಗಳನ್ನು ಜನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ಧಾರೆ. ಹಲವಾರು ಜನ ಪರ್ವತವನ್ನು ಕಂಡ ಖುಷಿಯಲ್ಲಿ ಫೇಸ್‌ಬುಕ್ ಲೈವ್ ಬಂದು ಉಳಿದವರಿಗೂ ಈ ಸೌಂದರ್ಯ ಕಣ್ತುಂಬಿಕೊಳ್ಳುವ ಅವಕಾಶ ನೀಡಿದ್ದಾರೆ.

ಮನೆಯೊಳಗೆ ಬಂಧಿಯಾದ ಮನುಜ, ಪ್ರಾಣಿ ಪಕ್ಷಿಗಳ ಸ್ವಚ್ಛಂದ ವಿಹಾರ!

ಈ ದೃಶ್ಯ ಕಾಣುವುದಕ್ಕೆ ಸಾಧ್ಯವಾಗಿದ್ದು ಲಾಕ್‌ಡೌನ್‌ನಿಂದ. ವಾಯ ಮಾಲೀನ್ಯದ ಪ್ರಮಾಣ ಕಡಿಮೆಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದು ತಲೆಮಾರು ಕಳೆದ ನಂತರ ಇಂತಹದೊಂದು ದೃಶ್ಯ ನೋಡಲು ಸಾಧ್ಯವಾಗಿದೆ ಎಂದು ನಗರದಲ್ಲಿರುವ ಹಿರಿಯರು ತಿಳಿಸಿದ್ದಾರೆ. 

ಹಿಮಹೊದ್ದಿರುವ ಪರ್ವತವನ್ನು ಜಲಂಧರ್‌ ನಿವಾಸಿಗಳು ನೋಡುವಂತಾಗಿದೆ. ಲಾಕ್‌ಡೌನ್‌ನಿಂದ ವಾಯುಮಾಲೀನ್ಯ ಪ್ರಮಾಣ ಕಡಿಮೆಯಾಗಿರುವುದರಿಂದ ಇದು ಸಾಧ್ಯವಾಗಿದೆ. ಒಂದು ತಲೆಮಾರು ಕಳೆದ ನಂತರ ಇದು ಸಾಧ್ಯವಾಗಿದೆ ಎಂದು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಟ್ವೀಟ್ ಮಾಡಿದೆ. 

COVID19: ಬೀದಿಪ್ರಾಣಿಗಳ ಹೊಟ್ಟೆ ತುಂಬಿಸಲು 54 ಲಕ್ಷ ಬಿಡುಗಡೆ..!

ಕಳೆದ ಕೆಲವು ದಿನಗಳಲ್ಲಿ ದೆಹಲಿ ಸೇರಿದಂತೆ 90 ನಗರಗಳಲ್ಲಿ ವಾಯ ಮಾಲೀನ್ಯ ಕಡಿಮೆಯಾಗಿದೆ. ಭಾರತದಲ್ಲಿ ಅತ್ಯಂತ ದೊಡ್ಡ ಲಾಕ್‌ಡೌನ್ ಇದಾಗಿದ್ದು, 130 ಕೋಟಿ ಜನ ಮನೆಯೊಳಗೆ ಉಳಿಯುವಂತಾಗಿದೆ. ದೇಶದಲ್ಲಿ 60 ಜನ ಕೊರೋನಾದಿಂದ ಮೃತಪಟ್ಟಿದ್ದು, 3000ದಷ್ಟು ಜನ ಸೋಂಕಿತರಾಗಿದ್ದಾರೆ. ಅನಗತ್ಯ ಪ್ರಯಾಣ, ಓಡಾಟವನ್ನು ಸರ್ಕಾರ ಕಡ್ಡಾಯವಾಗಿ ನಿಷೇಧಿಸಿದ್ದು, ಇದು ದೇಶಾದ್ಯಂತ ಟ್ರಾಫಿಕ್ ಮೇಲೆ ದೊಡ್ಡ ಪರಿಣಾಮ ಬೀರಿದೆ.