Asianet Suvarna News Asianet Suvarna News

COVID19: ಬೀದಿಪ್ರಾಣಿಗಳ ಹೊಟ್ಟೆ ತುಂಬಿಸಲು 54 ಲಕ್ಷ ಬಿಡುಗಡೆ..!

ಒಡಿಶಾ ಸರ್ಕಾರ ರಾಜ್ಯದ ಎಲ್ಲ ನಗರಗಳಲ್ಲಿ ಬೀದಿ ಪ್ರಾಣಿಗಳಿಗೆ ಆಹಾರ ನೀಡಲು 54 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಬೀದಿ ಪ್ರಾಣಿಗಳಗೆ ಆಹಾರ ಒದಗಿಸಲು ಹಣ ಬಿಡುಗಡೆ ಮಾಡಿರುವುದಾಗಿ ಒಡಿಶಾ ಸರ್ಕಾರ ಅಧಿಕೃತ  ಸೂಚನೆ ನೀಡಿದೆ.

 

Odisha Govt sanctions 54 lakhs to feed stray animals
Author
Bangalore, First Published Apr 1, 2020, 8:56 AM IST
  • Facebook
  • Twitter
  • Whatsapp

ಭುವನೇಶ್ವರ(ಎ.01): ಲಾಕ್‌ಡೌನ್‌ ನಂತರ ಬೀದಿ ಪ್ರಾಣಿಗಳು ಆಹಾರವಿಲ್ಲದೆ ಕಷ್ಟಪಡುತ್ತಿವೆ. ಯಾವ ಮನೆಯವರೂ ಹೊರಗೆ ಬರುತ್ತಿಲ್ಲ. ಈ ನಡುವೆಯೇ ಸ್ಯಾಂಡಲ್‌ವುಡ್‌ ನಟಿಯರು ಬೀದಿ ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ತೋರಿಸಿದ್ದರು. ಇದೀಗ ಒಡಿಶಾ ಸರ್ಕಾರ ರಾಜ್ಯದ ಎಲ್ಲ ನಗರಗಳಲ್ಲಿ ಬೀದಿ ಪ್ರಾಣಿಗಳಿಗೆ ಆಹಾರ ನೀಡಲು 54 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.

ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಬೀದಿ ಪ್ರಾಣಿಗಳಗೆ ಆಹಾರ ಒದಗಿಸಲು ಹಣ ಬಿಡುಗಡೆ ಮಾಡಿರುವುದಾಗಿ ಒಡಿಶಾ ಸರ್ಕಾರ ಅಧಿಕೃತ  ಸೂಚನೆ ನೀಡಿದೆ.

ಭಾರತ್‌ ಲಾಕ್‌ಡೌನ್: 'ಅನಗತ್ಯ ವಾಹನಗಳನ್ನ ಮುಲಾಜಿಲ್ಲದೆ ಸೀಜ್‌ ಮಾಡಿ'

ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಹೋಟೆಲ್‌ಗಳಲ್ಲಿಯೋ, ಮಾರ್ಕೆಟ್‌ ಸ್ಥಳಗಳಲ್ಲಿಯೂ ಬೀದಿ ಪ್ರಾಣಿಗಳಿಗೆ ಆಹಾರ ಲಭಿಸುತ್ತಿಲ್ಲ ಎಂದು ಒಡಿಶಾದ ವಸತಿ ಹಾಗೂ ನಗರಾಭಿವೃದ್ಧಿ ಅಧಿಕಾರಿಗಳು ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಒಡಿಶಾ ರಾಜ್ಯ ಸರ್ಕಾಋ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 48 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ 54 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಹಿರೇಕೆರೂರು: ಮಹಾಮಾರಿ ಕೊರೋನಾ ಹೊಡೆದೋಡಿಸಲು ಕೌರವನಿಂದ ಜಾಗೃತಿ!

ಭುವನೇಶ್ವರ ನಗರ ಪಾಲಿಕೆ ಪ್ರತಿದಿನ ಪ್ರಾಣಿಗಳಿಗೆ ಆಹಾರ ಒದಗಿಸಲು 20,000 ವಿನಿಯೋಗಿಸುತ್ತಿದೆ. ಇನ್ನುಳಿದ ಸ್ಥಳೀಯ ಪ್ರದೇಶಗಳಿಗೆ ದಿನಕ್ಕೆ 10 ಸಾವಿರದಂತೆ ನೀಡಲಾಗುತ್ತಿದೆ. ಮುನ್ಸಿಪಾಲಿಟಿಗಳಿಗೆ 5000ದಂತೆ ಹಣ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಒಡಿಶಾ ಸಿಎಂ ಮೂಕ ಪ್ರಾಣಿಗಳಿಗೆ ಲಾಕ್‌ಡೌನ್‌ ಸಂದರ್ಭ ಆಹಾರ ನೀಡುವ ಬಗ್ಗೆ ಗಮನಕ್ಕೆ ತಂದ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.  

Follow Us:
Download App:
  • android
  • ios