Asianet Suvarna News Asianet Suvarna News

ಹೋಂ ಕ್ವಾರೆಂಟೈನ್ ಜವಾಬ್ದಾರಿ ತೆಗೆದುಕೊಳ್ಳಲಿದೆಯಾ ಸೇನೆ..?

ಕೊರೋನಾ ವಿರುದ್ಧ ಹೋರಾಡಲು ಜನರು, ಸರ್ಕಾರ ಒಟ್ಟಿನಿಂದ ನಿಂತಿರುವಾಗ ಸೇನೆಯೂ ಶಕ್ತಿ ಮೀರಿ ಕೊರೋನಾ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದೆ.

 

Forces will operate beyond mandate to help India fight against Covid19 says CDS Gen Bipin Rawat
Author
Bangalore, First Published Mar 26, 2020, 3:36 PM IST
  • Facebook
  • Twitter
  • Whatsapp

ನವದೆಹಲಿ(ಮಾ.26): ಕೊರೋನಾ ವಿರುದ್ಧ ಹೋರಾಡಲು ಜನರು, ಸರ್ಕಾರ ಒಟ್ಟಿನಿಂದ ನಿಂತಿರುವಾಗ ಸೇನೆಯೂ ಶಕ್ತಿ ಮೀರಿ ಕೊರೋನಾ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದೆ.

ಈ ಸಂಬಂಧ ಮಾತನಾಡಿದ ಮುಖ್ಯ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಅವರು, ಕೊರೋನಾ ವೈರಸ್ ವಿರುದ್ಧ ದೇಶ ಹೋರಾಡುತ್ತಿರುವಾಗ ಸೇನೆಯೂ ಇದರಲ್ಲಿ ಶಕ್ತಿ ಮೀರಿ ಶ್ರಮಿಸಲಿದೆ ಎಂದಿದ್ದಾರೆ.

21 ದಿನ ಸಹಕರಿಸಿ, ಕೊರೋನಾ ವಿರುದ್ಧ ಯುದ್ಧ ಗೆಲ್ಲೋಣ: ಮೋದಿ ಪಣ

ಸೇನೆ ಸೇರಿದಂತೆ ಇತರ ಇಲಾಖೆ ತಮ್ಮ ರೇಖೆಯನ್ನು ಮೀರಿ ಕೆಲಸ ಮಾಡಬೇಕಾದ ಸಮಯವಿದು. ಕೊರೋನಾ ವಿರುದ್ಧ ದೇಶ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಪಾಲಿಸುವುಕ್ಕೆ ಜನರು ಸನ್ನದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 500ರ ಸನಿಹ ತಲುಪಿರುವಾಗ ಸಶಸ್ತ್ರ ಪಡೆಗಳು ಎಲ್ಲಾ ರೀತಿಯ ನೆರವು ನೀಡಿ ಸರ್ಕಾರವನ್ನು ಬೆಂಬಲಿಸಲಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಿಂದ ಆರಂಭಿಸಿ, ಜನರು ಕ್ವಾರೆಂಟೈನ್‌ನಲ್ಲಿರುವಂತೆ ಗಮನಿಸುವುದು, ಔಷಧಿ ಮತ್ತು ತುರ್ತು ಸೇವೆ ಅಗತ್ಯವಿರುವವರಿಗೆ ಸೇನೆ ನೆರವಾಗಲಿದೆ ಎಂದು ಭರವಸೆ ನೀಡಿದ್ದಾರೆ.

Follow Us:
Download App:
  • android
  • ios