Asianet Suvarna News Asianet Suvarna News

ಲಾಕ್‌ಡೌನ್‌: ನಡೆದುಕೊಂಡೇ ಆಸ್ಪತ್ರೆಗೆ ಮಗು ಕರೆತಂದ ದಂಪತಿ

ಕೊರೋನಾ ಹಬ್ಬುತ್ತಿರುವ ಹಿನ್ನೆಲೆ ಜಿಲ್ಲೆ ಲಾಕ್‌ಡೌನ್‌ ಆಗ್ಗಿದ್ದು, ಪಟ್ಟಣದ ನಾಯಕರ ಬಡಾವಣೆಯ ದಂಪತಿಗಳು ತಮ್ಮ ಹುಷಾರಿಲ್ಲದ ಮಗುವನ್ನು ಆಸ್ಪತ್ರೆಗೆ ತೋರಿಸಲು ನಡೆದುಕೊಂಡು ಹೋದ ಘಟನೆ ಗುರುವಾರ ಬೆಳಗ್ಗೆ ನಡೆಯಿತು.

 

Due to lock down couple walks to treat their diseased baby
Author
Bangalore, First Published Mar 27, 2020, 1:30 PM IST

ಚಾಮರಾಜನಗರ(ಮಾ.27): ಕೊರೋನಾ ಹಬ್ಬುತ್ತಿರುವ ಹಿನ್ನೆಲೆ ಜಿಲ್ಲೆ ಲಾಕ್‌ಡೌನ್‌ ಆಗ್ಗಿದ್ದು, ಪಟ್ಟಣದ ನಾಯಕರ ಬಡಾವಣೆಯ ದಂಪತಿಗಳು ತಮ್ಮ ಹುಷಾರಿಲ್ಲದ ಮಗುವನ್ನು ಆಸ್ಪತ್ರೆಗೆ ತೋರಿಸಲು ನಡೆದುಕೊಂಡು ಹೋದ ಘಟನೆ ಗುರುವಾರ ಬೆಳಗ್ಗೆ ನಡೆಯಿತು.

ಕಳೆದ ಎರಡು ದಿನಗಳಿಂದ ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲಾ ಕೇಂದ್ರ ಲಾಕ್‌ಡೌನ್‌ ಆಗಿದ್ದು, ಮೆಡಿಕಲ್‌ ಸ್ಟೋರ್‌, ದಿನಸಿ ಅಂಗಡಿ, ತರಕಾರಿ ಮಾರಾಟ ಬಿಟ್ಟು ಉಳಿದೆಲ್ಲವು ಸಂಪೂರ್ಣ ಬಂದ್‌ ಆಗಿದೆ.

ಉಡು​ಪಿ​ಯಲ್ಲಿ 107 ಶಂಕಿ​ತರು, ಓರ್ವ ಸೋಂಕಿ​ತ

ವಾಹನ ಸಂಚಾರ, ಆಟೋ ಸಂಚಾರ , ಅನಗತ್ಯ ಓಡಾಟ ಎಲ್ಲವು ನಿಷೇಧವಾಗಿರುವುದರಿಂದ ರಸ್ತೆಗಳಲ್ಲಿ ಪೊಲೀಸರು ಬಿಟ್ಟು, ಒಂದಷ್ಟುಮಾಧ್ಯಮವರು, ಆರೋಗ್ಯ ಇಲಾಖೆ ಸಿಬ್ಬಂದಿ ಬಿಟ್ಟು ಬೇರೆ ಯಾರು ಓಡಾಡಲು ಸಾಧ್ಯವಿಲ್ಲ.

ಗುರುವಾರ ಬೆಳಗ್ಗೆ ಲಾಕ್‌ ಆದ ಸಂದರ್ಭದಲ್ಲಿ ತುರ್ತಾಗಿ ಮಗುವನ್ನು ತೋರಿಸಬೇಕಾಗಿದ್ದರಿಂದ ನಗರದ ಡಿವಿಯೋಷನ್‌ ರಸ್ತೆಯಲ್ಲಿ ದಂಪತಿಗಳು ಉರಿ ಬಿಸಿಲನಲ್ಲೇ ಛತ್ರಿ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

Follow Us:
Download App:
  • android
  • ios