ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ
ಜಗತ್ತಿನಲ್ಲಿ ಹೆಸರು ಮಾಡಿದ ಇನ್ಫೋಸಿಸ್ ನ ಒಡೆಯರಾದ ನಾರಾಯಣ ಮೂರ್ತಿಯವರ ಅರ್ಧಾಂಗಿನಿಯಾದರೂ ತಾನು ವಿದ್ಯವಂತೆ, ಶ್ರೀಮಂತೆ ಎನ್ನುವ ಅಹಂಕಾರವಿಲ್ಲದ ಸುಧಾಮೂರ್ತಿ. ಇವರ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿ, ಹೇಳಲಿಕ್ಕೆ ಏನು ಉಳಿದಿಲ್ಲ. ರಾಜ್ಯದಲ್ಲಿ ನರೆ ಬಂದ ಸಂದರ್ಭದಲ್ಲಿ ಕನ್ನಡಿಗರು ಕಷ್ಟಕ್ಕೆ ಸಿಲುಕಿದ ವೇಳೆಯಲ್ಲಿ ತಾವೇ ಮುಂದೆ ನಿಂತು ಸಹಾಯಕ್ಕೆ ನಿಂತರು. ಇದೀಗ ನಮ್ಮ ಸರಕಾರಿ ಶಾಲೆಗಳಲ್ಲಿ ಹೊಸ ಚಮತ್ಕಾರ ಮಾಡಲು ಮುಂದಾಗಿದ್ದಾರೆ.
ನಮ್ಮ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಅಗತ್ಯ ನೆರವು ನೀಡಲು ಇನ್ ಫೋಸಿಸ್ ಫೌಂಡೇಶನ್ (Infosys Foundation) ನ ಶ್ರೀಮತಿ ಸುಧಾಮೂರ್ತಿ ಮುಂದೆ ಬಂದಿದ್ದಾರೆ.
ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಜತೆ ಮೊದಲ ಹಂತದ ಮಾತುಕತೆ ನಡೆಸಿದ್ದಾರೆ.
ನಮ್ಮ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಅಗತ್ಯ ನೆರವು ನೀಡಲು ಸುಧಾಮೂರ್ತಿಯವರು ಮುಂದೆ ಬಂದಿದ್ದಾರೆ. ಮೊದಲ ಹಂತದಲ್ಲಿ ಒಂದು ಸಾವಿರ ಶಾಲೆಗಳಿಗಾಗಿ 18 ಕೋಟಿ ರೂ. ನೀಡಲಿದ್ದಾ
ಹಂತ ಹಂತವಾಗಿ ಇನ್ನೂ ಹೆಚ್ಚು ನೆರವು ಹರಿದು ಬರಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜೊತೆಗೆ ವರ್ಷಕ್ಕೆ ಸಾವಿರ ಶಿಕ್ಷಕರಿಗೆ ವಿಜ್ಞಾನ ವಿಷಯ ಕಲಿಸಲು ತರಬೇತಿಗೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಮೊದಲ ಹಂತದಲ್ಲಿ ಹತ್ತು ಶಾಲೆಗಳಿಗೆ ಗ್ರಂಥಾಲಯಗಳನ್ನು ಕೊಡುಗೆಯಾಗಿ ನೀಡಲಿದ್ದಾರೆ.
ಸುಧಾಮೂರ್ತಿಯವರ ನಿರೀಕ್ಷೆಗೆ ಅನುಗುಣವಾಗಿ ಫಲಿತಾಂಶ ತೋರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆಗ ಇನ್ನೂ ಹೆಚ್ಚು ನೆರವನ್ನು ಅಪೇಕ್ಷಿಸಬಹುದು. ಅವರ ಈ ಉದಾರ ಕೊಡುಗೆಗಾಗಿ ನನ್ನ ತುಂಬು ಹೃದಯದ ಧನ್ಯವಾದಗಳು ಎಂದ ಸುರೇಶ್ ಕುಮಾರ್
ಸುಧಾಮೂರ್ತಿ ಅವರ ಈ ಮಹ್ವದ ನಿರ್ಧಾರದಿಂದ ನಮ್ಮ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಸಹಾಯಕವಾಗಲಿದೆ.
ಮಕ್ಕಳ ಜೊತೆಗೆ ವರ್ಷಕ್ಕೆ ಸಾವಿರ ಶಿಕ್ಷಕರಿಗೆ ವಿಜ್ಞಾನ ವಿಷಯ ಕಲಿಸಲು ತರಬೇತಿಗೂ ನೆರವು ನೀಡುವುದಾಗಿ ಭರವಸೆ ನೀಡಿರುವುದು ವಿಶೇಷ