ಬೆಂಗಳೂರು, (ಮಾ.24): ಕೇವಲ ಕರ್ನಾಟಕ ರಾಜ್ಯ ಮಾತ್ರ ಅಲ್ಲ ಇದೀಗ ಇಡೀ ಭಾರತ ದೇಶವನ್ನ ಲಾಕ್ ಡೌನ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ಹೊರಡಿಸಿದ್ದಾರೆ.

ಇಂದು (ಮಂಗಳವಾರ) ಕಿಲ್ಲರ್ ಕೊರೋನಾ ವೈರಸ್ ಬಗ್ಗೆ ಇಡೀ ದೇಶವನ್ನು ಉದ್ದೇಶಿಸಿದ ಮೋದಿ ಅವರು, ಇಂದು (ಮಂಗಳವಾರ) ರಾತ್ರಿ 12ಗಂಟೆಯಿಂದ ಏಪ್ರಿಲ್ 14ರ ವರಗೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದರು.

Big Breaking: ಇಡೀ ದೇಶವೇ ಲಾಕ್ ಡೌನ್, ಮೋದಿ ಘೋಷಣೆ

ಸಾಮಾಜಿಕ ಅಂತರವನ್ನ ಎಲ್ಲರೂ ಪಾಲಿಸಲೇಬೇಕು. ಇದು ನಿಮ್ಮನ್ನು, ನಿಮ್ಮ ಮಕ್ಕಳನ್ನು, ನಿಮ್ಮ ತಂದೆ ತಾಯಿಯನ್ನು, ಸ್ನೇಹಿತರನ್ನು ಕಾಪಾಡುತ್ತದೆ. ಇದನ್ನು ನೀವು ಪಾಲಿಸದಿದ್ದರೆ ಭಾರತ ದೊಡ್ಡ ಬೆಲೆ ತರಬೇಕಾಗುತ್ತದೆ. ಆದ್ದರಿಂದ ಇಂದು (ಮಂಗಳವಾರ) ರಾತ್ರಿ 12 ಗಂಟೆಯಿಂದ ಸಂಪೂರ್ಣ ದೇಶವೇ ಲಾಕ್‌ ಡೌನ್. ಇದೊಂದು ರೀತಿಯಲ್ಲಿ ಕರ್ಫ್ಯೂ ಇದ್ದಂತೆಯೇ. ಜನರು ಮನೆಯಿಂದ ಹೊರ ಬಾರಬಾರದು. ಕೊರೊನಾ ತಡೆಯಲು ಇದು ಅನಿವಾರ್ಯವಾಗಿದೆ ಎಂದರು.

 ಇಡೀ ಭಾರತವೇ ಲಾಕ್ ಡೌನ್ ಘೋಷಿಸಿದ್ದರಿಂದ ಯಾವುದೇ ಸಂಚಾರ ವ್ಯವಸ್ಥೆ ಇರಲ್ಲ. ಕಂಪ್ಲೀಟ್ ಬಂದ್ ಆಗಿರಲಿದೆ. ಈ ಹಿನ್ನೆಲೆಯಲ್ಲಿ ಏನು ಸಿಗುತ್ತೆ? ಏನು ಸಿಗೋಲ್ಲ ಎನ್ನುವ ಭಯದಲ್ಲಿ ಜನರು ಇದ್ದಾರೆ. ನಮ್ಮದೊಂದು ಮನವಿ ಜನರು ಯಾವುದೇ ಕಾರಣಕ್ಕೂ ಭಯಪಡಬೇಕಾದ ಅವಶ್ಯಕತೆ ಇಲ್ಲ. ಅಗತ್ಯ ವಸ್ತುಗಳು ಲಭ್ಯವಿರಲಿವೆ. ಆದ್ರೆ, ಖರೀದಿಸಲು ಜನರು ಗುಂಪು-ಗುಂಪಾಗಿ ಸೇರುವುದನ್ನ ಮಾಡಬಾರದು.

ಕೊರೋನಾ ವೈರಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಖರೀದಿಗೆ ಹೋದ್ರೆ ಮಾಸ್ಕ್ ಹಾಕಿಕೊಂಡು ಒಬ್ಬರಿಂದ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನಜಂಗುಳಿಯಲ್ಲಿ ಹೋಗಬಾರದು.

ಇನ್ನು ಇಂಡಿಯಾ ಲಾಕ್ ಡೌನ್ ಆಗುವುದರಿಂದ ಏನೆಲ್ಲಾ ಲಭ್ಯವಿರಲಿ ಎನ್ನುವ ಬಗ್ಗೆ ಸ್ವತಃ ಪ್ರಧಾನಿ ಅವರೇ ಟ್ವೀಟ್ ಮಾಡಿ ತಿಳಿಸಿದ್ದು, ಅವುಗಳು ಈ ಕೆಳಗಿನಂತಿವೆ.

ಏನೆಲ್ಲಾ ಸಿಗುತ್ತೆ ಎನ್ನುವ ಪಟ್ಟಿ ಇಲ್ಲಿದೆ
# ATM, ಪೆಟ್ರೋಲ್ ಬಂಕ್, ಹಾಲು, ತರಕಾರಿ ಆಂಬ್ಯುಲೆನ್ಸ್, ಪೊಲೀಸ್, ವೈದ್ಯಕೀಯ, ಜಿಲ್ಲಾಧಿಕಾರಿ ಕಚೇರಿ, ಮಾಂಸ ಮತ್ತು ಮೀನು ಸೇರಿದಂತೆ ದಿನಸಿ ಅಂಗಡಿಗಳು ಲಭ್ಯವಿರಲಿವೆ ಎಂದು ಮೋದಿ ಟ್ವೀಟ್ ಮೂಲಕ ಜನರಿಗೆ ತಿಳಿಸಿದ್ದಾರೆ.

ಏನೆಲ್ಲಾ ಸಿಗೋದಿಲ್ಲ ಎನ್ನುವ ಪಟ್ಟಿ
* ಸರ್ಕಾರಿ ಮತ್ತು ಖಾಸಗಿ ಬಸ್, ಕ್ಯಾಬ್ ಊಬರ್, ಆಟೋ, ಬಾರ್, ರೆಸ್ಟೋರೆಂಟ್, ಪಬ್, ಚಿತ್ರಮಂದಿರಗಳು, ಶಾಪಿಂಗ್ ಮಾಲ್, ಅಗತ್ಯ ವಸ್ತುಗಳು ಬಿಟ್ಟು ಇನ್ನುಳಿದವುಗಳು ಲಭ್ಯವಿರುವುದಿಲ್ಲ.