ನವದೆಹಲಿ(ಏ.05): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಪರಿಸ್ಥಿತಿಯ ಗಂಭೀರತೆ ಅರಿಯುವಲ್ಲಿ ಕೆಲವರು ಮಾತ್ರವಲ್ಲ ಕೆಲ ಸಮುದಾಯಗಳು ವಿಫಲವಾಗಿದೆ ಅನ್ನೋದೇ ದುರಂತ. ಜನವರಿಯಲ್ಲಿ ಅಂಟಿಕೊಂಡ ಕೊರೋನಾ ಹತೋಟಿಗೆ ತರಲು 4 ತಿಂಗಳೇ ಬೇಕಾಯ್ತು. ಅಲ್ಲಿರುವ ಮುಯ್ಯಿಗೆ ಮುಯ್ಯಿ ಅನ್ನೋ ಹಮ್ಮುರಾಬಿ ಶಾಸನ ನಮ್ಮಲಿಲ್ಲ. ಹೀಗಾಗಿಯೇ ಲಾಕ್‌ಡೌನ್, ಕರ್ಫ್ಯೂ ಆದೇಶಗಳಿದ್ದರೂ ಜನರೂ ಅರ್ಥಮಾಡಿಕೊಳ್ಳುತ್ತಿಲ್ಲ. ಧರ್ಮದ ಹೆಸರಿನಲ್ಲಿ ಜನರ ಸಂಪರ್ಕವಾಗುತ್ತಿದೆ. ಕೊರೋನಾ ಹೆಮ್ಮಾರಿ ಹರಡುತ್ತಿದೆ.

ಹೆಚ್ಚುತ್ತಲೇ ಇದೆ ಕೊರೋನಾ: ಜನತೆಗೆ ಯಡಿಯೂರಪ್ಪ ವಿಶೇಷ ಮನವಿ, ದಯವಿಟ್ಟು ಕೇಳಿ

ಜನರ ನಿರ್ಲಕ್ಷ್ಯದಿಂದ ಕೊರೋನಾ ವಿರುದ್ದದ ಹೋರಾಟದಲ್ಲಿ ನಿರತರಾಗಿದ್ದ CRPF ಡಿಜಿ ಹಾಗೂ ಹಿರಿಯ ಅಧಿಕಾರಿಗೆ ಸೋಂಕು ದೃಢವಾಗಿದೆ. CRPFನ ಮುಖ್ಯ ಮೆಡಿಕಲ್ ಆಫೀಸರ್ ಹಾಗೂ CRPF ಡಿಜಿ ಮಹೇಶ್ವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಇವರಿಗೆ ಚಿಕಿತ್ಸೆ ಆರಂಭವಾಗಿದೆ. ಇನ್ನು ಇವರೊಂದಿಗೆ ನೇರ ಸಂಪರ್ಕದಲ್ಲಿದ್ದ 20 ಹಿರಿಯ ಅಧಿಕಾರಿಗಳನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಇಷ್ಟೇ ಹಲವು ಅಧಿಕಾರಿಗಳು ಮಾದರಿಯನ್ನುಪರೀಕ್ಷೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದಾರೆ.

ಏಪ್ರಿಲ್ 14ರ ಬಳಿಕ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ತೆರವಿಲ್ಲ..!

ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವು
ಕೊರೋನಾ ವೈರಸ್‌ಗೆ ಮೃತರಾದವರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 24 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಇನ್ನ ಕರ್ನಾಟಕದಲ್ಲಿ ಇದುವರಿಗೆ 4 ಮಂದಿ ಕೊರೋನಾ ವೈರಸ್‌ಗೆ ಮೃತರಾಗಿದ್ದಾರೆ. ಕೊರೋನಾಗೆ ಬಲಿಯಾದವರ ರಾಜ್ಯವಾರು ವಿವರ ಇಲ್ಲಿದೆ.
ಮಹಾರಾಷ್ಟ್ರ = 24
ಗುಜರಾತ್ = 10
ತೆಲಂಗಾಣ = 7
ಮಧ್ಯಪ್ರದೇಶ = 6
ದೆಹಲಿ = 6
ಪಂಜಾಬ್ = 5
ಕರ್ನಾಟಕ = 4
ಪಶ್ಚಿಮ ಬಂಗಾಳ = 3
ತಮಿಳುನಾಡು = 3
ಜಮ್ಮ ಕಾಶ್ಮೀರ = 2
ಉತ್ತರ ಪ್ರದೇಶ = 2
ಕೇರಳ  = 2
ಆಂದ್ರಪ್ರದೇಶ = 1
ಬಿಹಾರ = 1
ಹಿಮಾಚಲ ಪ್ರದೇಶ = 1

ಮಹಾರಾಷ್ಟ್ರದಲ್ಲೇ ಗರಿಷ್ಠ ಸೋಂಕಿತರ ಸಂಖ್ಯೆ
ಸೋಂಕಿತರ ಸಂಖ್ಯೆ ಕೂಡ ಮಹಾರಾಷ್ಟ್ರದಲ್ಲಿ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ 490, ತಮಿಳುನಾಡಿನಲ್ಲಿ 485, ದೆಹಲಿಯಲ್ಲಿ 445, ಕೇರಳ 306, ತೆಲಂಗಾಣ 269, ಉತ್ತರ ಪ್ರದೇಶ 227, ರಾಜಸ್ಥಾನ200, ಆಂಧ್ರ ಪ್ರದೇಶ 161, ಕರ್ನಾಟಕ 144, ಗುಜರಾತ್ 105, ಮಧ್ಯ ಪ್ರದೇಶ 104, ಜಮ್ಮು ಕಾಶ್ಮೀರ 92 ಪಶ್ಚಮ ಬಂಗಾಳ, 69, ಪಂಜಾಬ್ 57, ಹರ್ಯಾಣ 49, ಬಿಹಾರ 30, ಅಸ್ಸಾಂ 24, ಉತ್ತರ ಖಂಡ 22, ಒಡಿಶಾ 20 ಚಂಡೀಘಡ 18 ಲಢಾಖ್14 ಅಂಡಮಾನ್ ನಿಕೋಬಾರ್10, ಚತ್ತೀಸ್‌ಘಡ 9, ಗೋವಾ 7, ಹಿಮಾಚಲ ಪ್ರದೇಶ 6, ಪಾಂಡಿಚೇರಿ5, ಜಾರ್ಖಂಡ್2, ಮಣಿಪುರ್ 2, ಮಿಝೋರಾಂ 1, ಅರುಣಾಚಲ ಪ್ರದೇಶ 1.

ಭಾರತದಲ್ಲಿ 3,374 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಇನ್ನು 77 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಸರಿಸುಮಾರು 3 ಲಕ್ಷ ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇನ್ನ ಇಟೆಲಿಯಲ್ಲಿ 13,000 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಎಂದು ಭಾರತ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ(ಏ.05) ಮಾಹಿತಿ ಬಿಡುಗಡೆ ಮಾಡಿದೆ.