ಮುಂಬೈ (ಮಾ. 27): ಕೊರೋನಾ ವೈರಾಣು ಕಾರಣ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿವಸಗಳ ‘ಲಾಕ್‌ಡೌನ್‌’ ಕಾರಣ ಶೇ.80 ರಷ್ಟು ಉತ್ಪಾದನೆಗೆ ಭಂಗ ಬಂದಿದೆ. ಇದರಿಂದಾಗಿ ಅರ್ಥವ್ಯವಸ್ಥೆಗೆ ನಿತ್ಯ 35 ಸಾವಿರ ಕೋಟಿ ರು.ನಿಂದ 40 ಸಾವಿರ ಕೋಟಿ ರು.ವರೆಗೆ ಹಾನಿ ಆಗಲಿದೆ. ಒಟ್ಟಾರೆ 6.3 ಲಕ್ಷ ಕೋಟಿ ರು.ನಿಂದ 7.2 ಲಕ್ಷ ಕೋಟಿ ರು.ವರೆಗೆ ನಷ್ಟಸಂಭವಿಸಲಿದೆ ಎಂದು ವರದಿಯೊಂದು ಹೇಳಿದೆ.

ರಾಜಕಾರಣಿಗಳನ್ನು ಒಗ್ಗೂಡಿಸಿದ ಕೊರೋನಾ: ಮೋದಿಗೆ ಸೋನಿಯಾ ಫುಲ್ ಸಪೋರ್ಟ್!

ಮಾರುಕಟ್ಟೆಸಮೀಕ್ಷಕ ಸಂಸ್ಥೆಯಾದ ‘ಕೇರ್‌ ರೇಟಿಂಗ್ಸ್‌’, ಈ ಆಘಾತಕಾರಿ ಅಂಕಿ-ಅಂಶಗಳನ್ನು ಒದಗಿಸಿದೆ.

ಒಂದು ವರ್ಷಕ್ಕೆ 300 ಮಾನವ (ಕೆಲಸ ಮಾಡುವ) ದಿನಗಳು ಸಾಮಾನ್ಯವಾಗಿ ಇರುತ್ತವೆ. ಇದರಿಂದ ದಿನಕ್ಕೆ ಸುಮಾರು 45 ಸಾವಿರ ಕೋಟಿ ರು.ನಿಂದ 50 ಸಾವಿರ ಕೋಟಿ ರು.  ಮೌಲ್ಯದಷ್ಟು ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಆದರೆ ಈಗ ವ್ಯಾಪಾರ ವಹಿವಾಟು ಬಂದ್‌ ಆದ ಕಾರಣ ಇಷ್ಟೊಂದು ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ.

ಲಾಕ್‌ಡೌನ್: ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಿಎಂ, ಹೊರಗೆ ಬಂದ್ರೆ ಅಷ್ಟೇ ಕಥೆ..!

ಇದರಿಂದಾಗಿ 4ನೇ ತ್ರೈಮಾಸಿಕವು ಕೇವಲ ಶೇ.1.5-ಶೇ.2.5ರ ದರದಲ್ಲಿ ಬೆಳವಣಿಗೆ ಕಾಣಲಿದೆ. ಈ ಮುನ್ನ ಅಂದುಕೊಂಡಂತೆ 1.74 ಲಕ್ಷ ಕೋಟಿ ರು.ನಷ್ಟು(ಶೇ.4.7) ಬೆಳವಣಿಗೆ ಸಾಧಿಸಬೇಕಿತ್ತು.

ಲಾಕ್‌ಡೌನ್‌ ಕೇವಲ 21 ದಿನಗಳಿಗೆ ಸೀಮಿತ ಆಗಿರುತ್ತದೆ ಎಂದು ಹೇಳಲಾಗದು. ಮೊದಲು 8 ದಿನದ ಲಾಕ್‌ಡೌನ್‌ ಈಗ 21 ದಿನಕ್ಕೆ ವಿಸ್ತಾರವಾಗಿದೆ. 30ರಿಂದ 60 ದಿನದವರೆಗೂ ಇದು ವಿಸ್ತಾರ ಆಗಬಹುದು. ಹೀಗಿದ್ದಾಗ ಹಾನಿ ಇನ್ನೂ ಅಧಿಕವಾಗಬಹುದು ಎಂದು ಕೇರ್‌ ರೇಟಿಂಗ್ಸ್‌ ಹೇಳಿದೆ.