ಚಾಮರಾಜನಗರ(ಮಾ.31): ಕೊರೋನಾ ವೈರಸ್‌ ಸಂಬಂಧ ಗ್ರಾಮದ ಕುಡಿಯುವ ನೀರಿನ ಮಿನಿ ಟ್ಯಾಂಕ್‌ ಗೋಡೆಯ ಮೇಲೆ ಕೊರೋನಾ ಸೋಂಕಿನ ಬಗ್ಗೆ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಚಿತ್ರಕಲೆಯ ಮೂಲಕ ಗ್ರಾಮದ ಯುವಕನೊಬ್ಬ ಅರಿವು ಮೂಡಿಸುತ್ತಿದ್ದಾನೆ.

ತಾಲೂಕಿನ ದೊಡ್ಡತುಪ್ಪೂರು ಗ್ರಾಮದ ಲೋಕೇಶ್‌ ಎಂಬುವರು ಕೊರೋನಾ ವೈರಸ್‌ ಸಂಬಂಧ ವಿವಿಧ ಬಗೆಯ ಚಿತ್ರಗಳನ್ನು ಬರೆಯುವ ಜೊತೆಗೆ ಗೋಡೆ ಬರಹ ಕೂಡ ಬರೆದಿದ್ದಾರೆ.

ನಂಜನಗೂಡು ಸೋಂಕು ಮೂಲ ಚೀನಾ ಕಚ್ಚಾವಸ್ತು?

ಭಯಬೇಡ-ಎಚ್ಚರವಿರಲಿ,ನಿಮ್ಮ ಆರೋಗ್ಯ-ನಿಮ್ಮ ಕೈಯಲ್ಲಿ ಎಂಬ ತಲೆ ಬರಹಗಳಿವೆ. ಕೊರೋನಾ ವೈರಸ್‌ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೂಡ ಬರೆದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮನೆಯಿಂದ ಹೊರ ಬರದಿರಿ, ಕೊರೋನಾ ವೈರಸ್‌ನಿಂದ ದೂರವಿರಿ ಎಂದು ಬಿಂಬಿಸುವ ಜೊತೆಗೆ ಕೊರೋನಾ ವೈರಸ್‌ ಚಿತ್ರವನ್ನು ಬರೆದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.