ಕೊರೋನಾ ವೈರಸ್ ಹಾಗೂ ಭಾರತ ಲಾಕ್‌ಡೌನ್‌ನಿಂದ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪ್ರತಿ ದಿನ ಆಫೀಸ್ ಹೋಗಿ ಬರುತ್ತಿದ್ದವರೂ ಇದೀಗ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಇದು ಮನೆಯ ಸಾಕು ಪ್ರಾಣಿಗಳಿಗೆ ಅಚ್ಚರಿ ನೀಡಿದೆ. ಮಾಲೀಕನನ್ನು ದಿನವಿಡೀ ಮನೆಯಲ್ಲಿ ನೋಡುತ್ತಿದ್ದ ನಾಯಿ ಕೊನೆಗೆ ಮಾಲೀಕನನ್ನೇ ದುರುಗುಟ್ಟಿ ನೋಡಿದೆ. 

ನವದೆಹಲಿ(ಮಾ.26): ದಿನ ಬೆಳಗಾದರೆ ಆಫೀಸ್‌ಗೆ ಹೊರಡುವ ಗಡಿಬಡಿ, ಸಾಕು ಪ್ರಾಣಿಗಳಿಗೆ ಟಾಟಾ ಬಾಯ್ ಹೇಳಿ ಆಫೀಸ್‌, ಮರಳಿ ಬಂದಾಗ ಮಾಲೀಕನ್ನು ಪ್ರೀತಿಯಿಂದ ಸ್ವಾಗತಿಸಲು ಸಾಕು ಪ್ರಾಣಿಗಳು ನಿಂತಿರುತ್ತವೆ. ಆದರೆ ಕೊರೋನಾ ವೈರಸ್‌ನಿಂದಾಗಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿದೆ. ಹೀಗಾಗಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದು ಸಾಕು ಪ್ರಾಣಿಗಳಿಗೆ ಅಚ್ಚರಿ ನೀಡುತ್ತಿದೆ.

ಕೊರೋನಾ ಸೋಂಕಿತರು ಗುಣಮುಖರಾಗಿ ಮನೆಗೆ ವಾಪಸ್; ನೆರೆ ಮನೆಯವ್ರಿಂದ ಸರ್ಪ್ರೈಸ್!

ಕೊರೋನಾ ವೈರಸ್‌ನಿಂದಾಗಿ ಮನೆಯಲ್ಲಿ ಕೆಲಸ ಮಾಡತ್ತಿದ್ದ ಉದ್ಯೋಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೋ ವೈರಲ್ ಆಗಿದೆ. ಮಾಲೀಕನನ್ನು ದಿನವಿಡೀ ಮನೆಯಲ್ಲೇ ನೋಡಿದ ಮುದ್ದಿನ ನಾಯಿಗೆ ಅಚ್ಚರಿಯಾಗಿದೆ. ಸ್ವಲ್ಪ ಹೊತ್ತು ಗಮನಿಸಿದ ನಾಯಿ, ಮಾಲೀಕನನ್ನೇ ದುರುಗುಟ್ಟಿ ನೋಡಲು ಆರಂಭಿಸಿದೆ. ಮನೆಯ ಎಲ್ಲಾ ಕೋಣೆಯಲ್ಲಿ ನಿಂತು ಮಾಲೀಕನನ್ನು ದುರುಗುಟ್ಟಿ ನೋಡಲು ಆರಂಭಿಸಿದೆ. 

ಮುದ್ದಿನ ನಾಯಿಯ ನೋಟ ನೋಡಿದ ಮಾಲೀಕ ಫೋಟೋ ಸೆರೆ ಹಿಡಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಮುದ್ದು ಮುದ್ದಾದ ನಾಯಿಯ ಫೋಟೋ ಕ್ಷಣಾರ್ಧದಲ್ಲೇ ಲಕ್ಷ ಲೈಕ್ಸ್ ಪಡೆದಿದೆ. 

ವಿಶ್ವದಲ್ಲಿ ಒಟ್ಟು 4.80 ಲಕ್ಷ ಜನರು ಕೊರೋನಾ ಸೋಂಕಿತರಾಗಿದ್ದಾರೆ. ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 650 ದಾಟಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.