ಮುಂಬೈ(ಮಾ.226); ಕೊರೋನಾ ಸೋಂಕು ದೃಢಪಟ್ಟರೆ ಸಾಕು ನಂತರದ ಪರಿಸ್ಥಿತಿ ಹೇಳಬೇಕಾಗಿಲ್ಲ. ಸೋಂಕಿತ ಹತ್ತಿರ ಯಾರೂ ಬರುವಂತಿಲ್ಲ. ಅಂತರ ಕಾಯ್ದುಕೊಳ್ಳಲೇ ಬೇಕು. ಇತ್ತ ಕುಟುಂಬದವರಿಗೂ ಐಸೋಲೇಶನ್ ಕಡ್ಡಾಯ. ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ಕೊರೋನಾ ಸೋಂಕು ತಗುಲಿ ಆಸ್ಪತ್ರೆ ಸೇರಿದ ಮೊದಲ ಬ್ಯಾಚ್ ಗುಣುಮುಖರಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಮನೆಗೆ ವಾಪಸ್ ಆದವರಿಗೆ ಅಚ್ಚರಿ ಕಾದಿತ್ತು

ಲಾಕ್‌ಡೌನ್: ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಿಎಂ, ಹೊರಗೆ ಬಂದ್ರೆ ಅಷ್ಟೇ ಕಥೆ..!

ಮುಂಬೈನ ನಗರದಲ್ಲಿ ಕೊರೋನಾ ಸೋಂಕು ತಗಲು ಕಸ್ತೂರ್‌ಬಾ ಆಸ್ಪತ್ರೆ ದಾಖಲಾಗಿದ್ದು 68 ವರ್ಷದ ವೃದ್ಧ ದಂಪತಿಗಳು ಗುಣಮುಖರಾಗಿ ಮನೆಗೆ ವಾಪಾಸ್ ಆದ ವೇಳೆ ನೆರೆಮನೆಯವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಸ್ಪೃಶ್ಯರಂತೆ ಕಾಣುತ್ತಿರುವ ಈ ಪರಿಸ್ಥಿತಿಯಲ್ಲಿ ಅಕ್ಕಪಕ್ಕದ ಮನೆಯವರ ಸ್ವಾಗತಕ್ಕೆ ದಂಪತಿಗಳ ಕಣ್ಣುಗಳೇ ಒದ್ದೆಯಾಗಿದೆ. 

ಸತತ ಮೆಡಿಸಿನ್‌ನಿಂದ ವೃದ್ಧದಂಪತಿಗಳನ್ನು ಆ್ಯಂಬ್ಯುಲೆನ್ಸ್ ಮೂಲಕ ಮನೆಗೆ ಕರೆತರಲಾಯಿತು. ಮನೆಗೆ ಬಂದ ದಂಪತಿಗಳನ್ನು ಸ್ವಾಗತಿಸಿದ ನೆರೆಮನೆಯವರು ರಾತ್ರಿ ವೇಳೆ ಔತಣ ಕೂಟ ಆಯೋಜಿಸಿದ್ದಾರೆ.  ಆತ್ಮೀಯ ಸ್ವಾಗತ ಸಂತಸ ತಂದಿದೆ ಎಂದು ವೃದ್ಧದಂಪತಿಗಳು ಹೇಳಿದ್ದಾರೆ.

ಘಾಟ್‌ಕೂಪರ್‌ನ 68 ವರ್ಷದ ಮಹಿಳೆಯೂ ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ. ಈ ಮಹಿಳೆಯನ್ನು ಮನೆಯವರೂ ಹಾಗೂ ನೆರೆಮನೆಯವರೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ತಾಯಿ ಆಗಮನದಿಂದ ಕುಟುಂಬದವರ ಸಂತಸ ಹೇಳತೀರದು. ಇತ್ತ ಉಲ್ಲಾಸನಗರದಲ್ಲಿನ 49 ವರ್ಷದ ಮಹಿಳೆ ಹಾಗೂ ಆಕೆಯ ಸಹೋದರ ಕೂಡ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. 

ಕೊರೋನಾ ಸೋಂಕು ತಗುಲಿ ಆಸ್ಪತ್ರೆ ದಾಖಲಾಗಿದ್ದ ಮೊದಲ ಬ್ಯಾಚ್‌ನ 40 ಮಂದಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ.  ಗುಣಮುಖರಾದವರು ಸಂತಸ ವ್ಯಕ್ತಪಡಿಸಿದ್ದರೆ, ಇತ್ತ ಕೊರೋನಾ ವೈರಸ್ ಹತೋಟಿಗೆ ಬರದ ಕಾರಣ ಜನರ ಆತಂಕ ಹೆಚ್ಚಾಗಿದೆ.