ನವದೆಹಲಿ, (ಏ.07): ಲಾಕ್‌ಡೌನ್ ನಡುವೆಯೂ ರಾಷ್ಟ್ರ ರಾಜಧಾನಿ ನವದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)  ಖಂಡಿಸಿದೆ. ಮಾತ್ರವಲ್ಲದೇ ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿದೆ.

ದೇಶದಲ್ಲಿ ತಬ್ಲಿಘಿ ಜಮಾತ್‌ ಸಂಘಟನೆಯ ಸಮಾವೇಶಗಳಿಂದ ಕೊರೋನಾ ವೈರಸ್‌ ಹರಡಿದ್ದು ಖಚಿತವಾಗಿದ್ದರೂ ಭಾರತದಲ್ಲಿ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)  ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸರ್ಕಾರ ಕೂಡಲೇ ಇದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಒತ್ತಾಯಿಸಿದೆ.

'ದೆಹಲಿಗೆ ಹೋಗಿ ಬಂದವರಿಂದಲೇ ಕೊರೋನಾ ವೈರಸ್‌ ಹೆಚ್ಚಳ'

ಕೊರೋನಾ ವೈರಸ್ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿರುವ ತಬ್ಲಿಘಿ ಜಮಾತ್‌ ಮತ್ತುನಿಜಾಮುದ್ದೀನ್ ಮರ್ಕಾಜ್ ಮೇಲೆ ಸಂಪೂರ್ಣ ನಿಷೇಧ ಹೇರಬೇಕು. ವಿಎಚ್‌ಪಿ ಆಗ್ರಹಿಸಿದ್ದು, ನಿಜಾಮುದ್ದೀನ್‌ನ ಪಶ್ಚಿಮ ಭಾಗ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್‌ ಎನಿಸಿಕೊಂಡಿದೆ. ತಬ್ಲಿಘಿ ಜಮಾತ್‌ ಇಸ್ಲಾಮಿಕ್‌ ತೀವ್ರಗಾಮಿತ್ವ ಮತ್ತು ಭಯೋತ್ಪಾದನೆಯ ಪೋಷಕ ಸಂಘಟನೆ. ಈ ಹಿನ್ನೆಲೆ ಬ್ಯಾನ್‌ ಮಾಡಬೇಕೆಂದು ವಿಎಚ್‌ಪಿಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ಒತ್ತಾಯಿಸಿದರು.

ಇನ್ನು ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಾಲ್‌ ಸಹ ಕಿಡಿಕಾರಿದ್ದು, ಲಾಕ್‌ಡೌನ್‌ನಿಂದ ದೇಶಾದ್ಯಂತ ಜನತೆ ರಿಲೀಫ್‌ನಲ್ಲಿದ್ದಾಗ ಈ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ್ದರಿಂದ ದೇಶದಲ್ಲಿ ಕೊರೊನಾ ವೈರಸ್‌ ಸಮುದಾಯಕ್ಕೆ ವಿಸ್ತರಿಸುವ ಆತಂಕ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಬ್ಲೀಘಿಗಳ ಪತ್ತೆಗೆ ಕೇಂದ್ರದ ಹೊಸ ಅಸ್ತ್ರ!

ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ 17 ರಾಜ್ಯಗಳ 1023 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ಇದೆ.

ಅಲ್ಲದೇ ಜಮಾತ್ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 2,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಮಾ. 13ರಿಂದ 15ರವರೆಗೆ ಈ ಸಭೆ ನಡೆದಿತ್ತು. ಇದೀಗ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು  ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ  ತಿಳಿಸಿದೆ.

ತಬ್ಲೀಘಿಗಳಿಂದ ಕೊರೋನಾ ಸೋಂಕಿತರು ಡಬಲ್!