5 ದಿನ ಡ್ಯೂಟಿ ಬಳಿಕ ಮನೆ ತಲುಪಿದ ಡಾಕ್ಟರ್: ದೂರದಲ್ಲಿದ್ದೇ ಫ್ಯಾಮಿಲಿ ಜೊತೆ ಒಂದು ಕಪ್ ಟೀ!

ಕೊರೋನಾ ವಿರುದ್ಧ ವೈದ್ಯರ, ನರ್ಸ್‌ಗಳ ಹೋರಾಟ| ಕೊರೋನಾ ಪೀಡಿತರ ನಿರಂತರ ಸೇವೆ, ಫ್ಯಾಮಿಲಿ ಜೊತೆ ಸಮಯ ಕಳೆಯಲು ಸಾಧ್ಯವಾಗ್ತಿಲ್ಲ| ಐದು ದಿನಗಳ ಬಳಿಕ ಮನೆಗೆ ಬಂದ ಡಾಕ್ಟರ್, ದೂರದಲ್ಲಿದ್ದುಕೊಂಡೇ ಕುಟುಂಬದ ಭೇಟಿ, ಒಂದು ಕಪ್ ಟೀ!

Coronavirus Outbreak Dr Sudhir dehariya Has Tea With Family From A Distance Wins Hearts

ಭೋಪಾಲ್(ಏ.01): ಕೊರೋನಾ ತಾಂಡವದಿಂದ ವೈದ್ಯರ ಕೆಲಸ ಅತತಿ ಹೆಚ್ಚಾಗಿದೆ. ಜಗತ್ತಿನಾದ್ಯಂತ ಪೀಡಿತರ ಸೇವೆ ಸಲ್ಲಿಸುತ್ತಿರುವ ವೈದ್ಯರ ಹಾಗೂ ನರ್ಸ್‌ಗಳ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ. ವಿಶ್ರಾಂತಿ ತೆಗೆದುಕೊಳ್ಳಲೂ ಸಮಯವಿಲ್ಲದಿರುವಾಗ ವೈದ್ಯರು ತಮ್ಮ ಮನೆಯಿಂದ ಹಲವಾರು ದಿನ ದೂರವಿದ್ದು, ಆಸ್ಪತ್ರೆಯಲ್ಲೇ ದಿನ ಕಳೆಯುತ್ತಿದ್ದಾರೆ. ಸದ್ಯ ಭೋಪಾಲ್‌ನ ಚೀಫ್ ಮೆಡಿಕಲ್ ಹೆಲ್ತ್ ಆಫೀಸರ್ ಡಾ. ಸುಧೀರ್ ದೆಹಾರಿಯಾರ ಫೋಟೋ ಒಂದು ಭಾರೀ ವೈರಲ್ ಆಗಿದೆ. 

ಡಾ. ಸುಧೀರ್‌ರವರ ಈ ಫೋಟೋವನ್ನು ಮೋಕ್ಷಾ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಅವರು ಬರೋಬ್ಬರಿ ಐದು ದಿನಗಳ ಬಳಿಕ ಅವರು ತಮ್ಮ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಸೋಶಿಯಲಲ್ ಡಿಸ್ಟೆಂನ್ಸಿಂಗ್ ಕೂಡಾ ಪಾಲಿಸಿದ್ದಾರೆ. ಮನೆಯ ಹೊರಗೇ ಕುಳಿತು ಅವರು ಒಂದು ಕಪ್ ಟೀ ಕುಡಿದಿದ್ದಾರೆ. 

ಡಾಕ್ಟರ್‌ಗರ ನೆಟ್ಟಿಗರ ಸಲಾಂ

ಇನ್ನು ಈ ಪೊಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಡಾ. ಸುಧೀರ್‌ರನ್ನು ನಿವಾದ ಹೀರೋ ಎಂದು ಬಣ್ಣಿಸಿದ್ದಾರೆ. ನಿಮ್ಮ ಆಸುಪಾಸಿನಲ್ಲೂ ಹೀಗೆ ಕೊರೋನಾ ಪೀಡಿತರ ಸೇವೆಗೈfಯುತ್ತಿರುವ ವೈದ್ಯರು, ನರ್ಸ್‌ಗಳಿರಬಹುದು. ನೀವೂ ಕೂಡಾ ಅವರ ಪೋಟೋ ಶೇರ್ ಮಾಡಿ, ರಿಯಲ್‌ ಲೈಫ್ ಹೀರೋಗಳನ್ನು ಜಗತ್ತಿಗೆ ಪರಿಚಯಿಸಿ.

Latest Videos
Follow Us:
Download App:
  • android
  • ios