ಕೊರೋನಾ ವಾರ್ಡ್‌ನಲ್ಲಿ ಸಿಕ್ಕಿದ್ದ ಐದು ಬೆಕ್ಕುಗಳು ಸಾವು

ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಐಸೋಲೇಷನ್ ವಾರ್ಡ್‌ಗಳಲ್ಲಿ ಸಿಕ್ಕಿದ್ದ 5 ಬೆಕ್ಕುಗಳು ಸಾವನ್ನಪ್ಪಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ಐದು ಬೆಕ್ಕುಗಳ ದೇಹದ ಭಾಗಗಳನ್ನು ತಿರುವನಂತಪುರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

 

5 cat caught from corona ward in kerala organs to be examined

ಕಾಸರಗೋಡು(ಏ.10): ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಐಸೋಲೇಷನ್ ವಾರ್ಡ್‌ಗಳಲ್ಲಿ ಸಿಕ್ಕಿದ್ದ 5 ಬೆಕ್ಕುಗಳು ಸಾವನ್ನಪ್ಪಿದ್ದು ಹಲವು ಸಂಶಯಗಳಿಗೆ ಎಡೆ ಮಾಡಿದೆ. ಐದು ಬೆಕ್ಕುಗಳ ದೇಹದ ಭಾಗಗಳನ್ನು ತಿರುವನಂತಪುರಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

ಆರಂಭಿಕ ಪರೀಕ್ಷೆಯಲ್ಲಿ ಕೊರೋನಾ ವೈರಸ್‌ ಕುರಿತ ಯಾವುದೇ ಅಂಶಗಳು ಕಂಡು ಬಂದಿಲ್ಲ. ಸ್ವಲ್ಪವೇ ಸ್ವಲ್ಪ ಗಾಳಿ ಹೋಗುವಂತಹ ಕ್ರೇಟ್‌ಗಳಲ್ಲಿ ಬೆಕ್ಕುಗಳನ್ನು ಇರಿಸಿದ್ದರಿಂದ ಅವುಗಳು ಸ್ಟ್ರೆಸ್‌ನಿಂದಾಗಿ ಸತ್ತಿರಬಹುದು ಎಂದು ತಜ್ಷರು ತಿಳಿಸಿದ್ದಾರೆ.

ಲಾಕ್ ಡೌನ್ ಸ್ಥಿತಿಗತಿ : ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಎರಡು ಗಂಡು ಬೆಕ್ಕುಗಳು, ಒಂದು ಹೆಣ್ಣು ಬೆಕ್ಕು ಹಾಗೂ ಎರಡು ಬೆಕ್ಕಿನ ಮರಿಗಳ ದೇಹದ ಭಾಗಗಳನ್ನು ತಿರುವನಂತಪುರದ ರಾಜ್ಯ ಪಶು ರೋಗ ಕೇಂದ್ರಕ್ಕೆ ಕಳುಹಿಸಲು ಪಶುಸಂಗೋಪನಾ ಇಲಾಖೆ  ನಿರ್ಧರಿಸಿದೆ.

"

ಕೊರೋನಾ: ಏ.8 ಕ್ಕೆ ಸರ್ವಪಕ್ಷ ನಾಯಕರ ಸಭೆ ಕರೆದ ಮೋದಿ

ಕೊರೋನಾ ವಾರ್ಡ್‌ನಲ್ಲಿ ಬೆಕ್ಕುಗಳು ಸಿಕ್ಕಿದ್ದು, ಪೋಸ್ಟ್ ಮಾರ್ಟಮ್‌ನಲ್ಲಿ ಕೊರೋನಾ ಬಗ್ಗೆ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಹಾಗಾಗಿ ಬೆಕ್ಕುಗಳ ದೇಹದ ಭಾಗವನ್ನು ಪರೀಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಅಗತ್ಯವಿದ್ದಲ್ಲಿ ಭೋಪಾನ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ರೋಗಗಳ ಅಧ್ಯಯನ ಸಂಸ್ಥೆಗೂ ಕಳುಹಿಸಲಾಗುತ್ತದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios