JAWAN: 'ಜಿಂದಾ ಬಂದಾ' ಹಾಡಲ್ಲಿ ಸಾವಿರಾರು ಲಲನೆಯರು- ಖರ್ಚು 15 ಕೋಟಿ ರೂ!
ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಜವಾನ್ ಚಿತ್ರದ ಹಾಡೊಂದರ ವಿಷಯ ಹೊರಬಿದ್ದಿದೆ. ಈಹಾಡೊಂದರಲ್ಲಿ ಸಾವಿರಾರು ಯುವತಿಯರು ನರ್ತಿಸಿದ್ದು, ಒಂದೇ ಹಾಡಿನ ಶೂಟಿಂಗ್ಗೆ 15 ಕೋಟಿ ರೂ. ಖರ್ಚಾಗಿದೆ.
ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಚಿತ್ರವು ಈ ಕ್ಷಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್ ಇದಾಗಲೇ ಬಿಡುಗಡೆಯಾಗಿದ್ದು ಸಕತ್ ಹಿಟ್ ಆಗಿವೆ. ಶಾರುಖ್ ಅವರ ಆ್ಯಕ್ಷನ್ ಹಾಗೂ ವಿಭಿನ್ನ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸಿನಿಮಾ ಕುರಿತು ಹೊಸ ಹೊಸ ವಿಷಯಗಳು ಬರುತ್ತಲೇ ಇವೆ. ಇದಾಗಲೇ ಈ ಸಿನಿಮಾದಲ್ಲಿ ಸುಮಾರು 6 ಹಾಡುಗಳಿವೆ ಎನ್ನುವುದು ತಿಳಿಸಿದೆ. ಜೊತೆಗೆ ಪರಾಠ ಎಂದ ಟೈಟಲ್ ಸಾಂಗ್ (Title Song) ಕೂಡ ಇದೆ ಎನ್ನಲಾಗಿದೆ. ಇದರಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರಂತೆ. ಒಂದು ನಯನತಾರಾ ಅವರ ಇಂಟ್ರೊಡಕ್ಷನ್ ಸಾಂಗ್ ಹಾಗೂ ಒಂದು ಶಾರುಖ್ ಅವರ ಗರ್ಲ್ ಗ್ಯಾಂಗ್ ಜೊತೆ ಜೈಲ್ ಸಾಂಗ್ ಇರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಹೌದು! ಅಟ್ಲಿ ಕುಮಾರ್ (Atly Kumar) ನಿರ್ದೇಶನದ 'ಜವಾನ್' ಚಿತ್ರಕ್ಕೆ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾರುಖ್ ಅವರ ವಿಭಿನ್ನ ಅವತಾರವನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಚಿತ್ರದ ಸ್ಟಾರ್‌ಕಾಸ್ಟ್ ಕೂಡ ತುಂಬಾ ಪ್ರಭಾವಶಾಲಿಯಾಗಿದೆ. ಹೀಗಿರುವಾಗ ಶಾರುಖ್ ಅಭಿನಯದ ‘ಜವಾನ್’ ಸಿನಿಮಾ ಹಿರಿತೆರೆಯಲ್ಲಿ ಅವರ ‘ಪಠಾಣ್’ ಚಿತ್ರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ ಎಂಬ ನಂಬಿಕೆ ಇದೆ. ಮೊದಲ ದಿನದ ಕಲೆಕ್ಷನ್ 100 ಕೋಟಿ ದಾಟುವ ಮಾತುಗಳು ಕೇಳಿ ಬರುತ್ತಿವೆ. ಅದೇ ಸಮಯದಲ್ಲಿ, ಬಿಡುಗಡೆಯಾದ ಮೊದಲ ವಾರದಲ್ಲಿ, ಹೊಸ ದಾಖಲೆಗಳನ್ನು ಸೃಷ್ಟಿಸಲು ಚಿತ್ರದ ಪರವಾಗಿ ಹಕ್ಕುಗಳನ್ನು ಪಡೆಯಲಾಗುತ್ತಿದೆ. ಇದೆಲ್ಲದರ ನಡುವೆ ದಕ್ಷಿಣದ ದೊಡ್ಡ ನಟರೂ ಶಾರುಖ್‌ಗೆ ಪೈಪೋಟಿ ನೀಡಲು ಸರದಿಯಲ್ಲಿದ್ದಾರೆ. ವಿಜಯ್ ಸೇತುಪತಿ: ಪ್ರತಿ ಪಾತ್ರದ ಮೂಲಕ ಸೌತ್ ಚಿತ್ರಗಳಲ್ಲಿ ಜನಪ್ರಿಯರಾಗಿದ್ದ ನಟ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಸಂಪೂರ್ಣವಾಗಿ ವಿಭಿನ್ನ ಸ್ಟೈಲಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಎದುರು ವಿಜಯ್ ಸೇತುಪತಿ ಸ್ಟ್ರಾಂಗ್ ಆಗಿ ನಿಂತಿದ್ದಾರೆ ಎನ್ನಲಾಗುತ್ತಿದೆ.
ಶಾರುಖ್ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'ಗೆ 21 ದಿನಗಳ ಚಾಲೆಂಜ್!
ಈ ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್ ಸ್ಟಾರ್ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ (Preview) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ಇನ್ನೊಂದು ವಿಷಯ ಹೊರಬಿದ್ದಿದೆ. ಅದೇನೆಂದರೆ, ಈ ಚಿತ್ರದ ಬಹುನಿರೀಕ್ಷಿತ ‘ಜಿಂದಾ ಬಂದಾ’ ಹಾಡಿನ ಕುರಿತು ಈ ವಿಶೇಷ ಮಾಹಿತಿ ಇದೆ. ಅದೇನೆಂದರೆ ಈ ಹಾಡಿನಲ್ಲಿ ಸಾವಿರಾರು ಹುಡುಗಿಯರು ಸೊಂಟ ಬಳುಕಿಸಿದ್ದಾರಂತೆ! ಹೌದು. ಮೊದಲ ಹಾಡಿನಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದು, ಅನಿರುದ್ಧ ರವಿಚಂದರ್ ವಿನ್ಯಾಸಗೊಳಿಸಿದ ಮತ್ತು ಶೋಬಿ ಅವರ ನೃತ್ಯ ಸಂಯೋಜನೆಯಲ್ಲಿ ಸಾವಿರಾರು ಹುಡುಗಿಯರು ಆಕರ್ಷಕವಾದ ಬೀಟ್‌ಗಳಿಗೆ ನೃತ್ಯ ಮಾಡಲಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಒಂದು ಕಾಲದಲ್ಲಿ ‘ವೈ ದಿಸ್ ಕೊಲವೆರಿ ಡಿ’ ಹಾಡು ಸಕತ್ ಸೌಂಡ್ ಮಾಡಿತ್ತು. ಈ ಹಾಡನ್ನು ಸಂಯೋಜಿಸಿದ್ದು ಕೂಡ ಇದೇ ಅನಿರುದ್ಧ ರವಿಚಂದರ್. 2012 ರಲ್ಲಿ ತಮಿಳು ಚಿತ್ರ ‘3’ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿರೋ ಅನುರುದ್ಧ ಅವರು, ಇದಾಗಲೇ ಹಿಂದಿ ಜೊತೆ ತೆಲುಗು, ತಮಿಳಿನಲ್ಲಿ 50ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ (Music compose). ಇವರದ್ದೇ ಸಂಯೋಜನೆಯಲ್ಲಿ ಬರುತ್ತಿರುವ ಜವಾನ್ನ ‘ಜಿಂದಾ ಬಂದಾ’ ಹಾಡಿನಲ್ಲಿ ಸಹಸ್ರ ಯುವತಿಯರನ್ನು ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಅಂದಹಾಗೆ ಈ ಹಾಡಿಗೆ ಚೆನ್ನೈ, ಹೈದರಾಬಾದ್, ಬೆಂಗಳೂರು, ಮಧುರೈ, ಮುಂಬೈಗಳಿಂದ ಸಾವಿರಕ್ಕೂ ಅಧಿಕ ಲಲನೆಯರನ್ನು ಕರೆಸಿದ್ದಾರೆ ಎನ್ನಲಾಗಿದೆ. ಈ ಹಾಡಿಗೆ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯಂತೆ!
JAWAN ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್ ಖಾನ್ ಖಡಕ್ ವಾರ್ನಿಂಗ್!