ಗರ್ಲ್ ಫ್ರೆಂಡ್ ಜೊತೆ ಸಮುದ್ರ ಪಾಲಾಗ್ತಿದ್ದ ಯುಟ್ಯೂಬರ್ ರಣವೀರ್ ಅಲ್ಹಾಬಾದಿಯಾ, ಫ್ಯಾನ್ಸ್ ಶಾಕ್

ಪ್ರಸಿದ್ಧ ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಶಾಕಿಂಗ್ ಸುದ್ದಿಯನ್ನು ಫ್ಯಾನ್ಸ್ ಗೆ ನೀಡಿದ್ದಾರೆ. ಗೋವಾದಲ್ಲಿರುವ ಅವರು ಈಜಲು ಹೋಗಿ ಸಮುದ್ರಲ್ಲಿ ಮುಳುಗ್ತಿದ್ದರಂತೆ. ಅದೃಷ್ಟವಶಾತ್, ಅವರನ್ನು ರಕ್ಷಿಸಲಾಗಿದೆ. 
 

YouTuber Ranveer Allahbadia and girlfriend rescued from drowning in Goa sea roo

ಪ್ರಸಿದ್ಧ ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ (Famous YouTuber Ranveer Allahabadia )ಗೆ ಪುನರ್ ಜನ್ಮ ಸಿಕ್ಕಂತಾಗಿದೆ. ಅವರು ಮತ್ತು ಅವರ ಗರ್ಲ್ ಫ್ರೆಂಡ್ (Girlfriend) ಸಮುದ್ರ ಪಾಲಾಗ್ಬೇಕಿತ್ತು. ರಣವೀರ್ ಅಲ್ಲಾಬಾಡಿಯಾ ಹಾಗೂ ಅವರ ಗರ್ಲ್ ಫ್ರೆಂಡ್ ಅದೃಷ್ಟ ಚೆನ್ನಾಗಿತ್ತು. ಇಬ್ಬರೂ ಬದುಕಿ ಬಂದಿದ್ದಾರೆ. ಅವರನ್ನು ಐಪಿಎಸ್ ಅಧಿಕಾರಿ (IPS Officer) ಮತ್ತು ಅವರ ಪತ್ನಿ ರಕ್ಷಿಸಿದ್ದಾರೆ. ರಣವೀರ್ ಅಲ್ಲಾಬಾಡಿಯಾ ಈ ವಿಷ್ಯವನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. 

ಎಲ್ಲೆಡೆ ಕ್ರಿಸ್ಮಸ್ (Christmas) ಹಾಗೂ ಇಯರ್ ಆಂಡ್ (Year End) ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳು ಸೇರಿದಂತೆ ಜನಸಾಮಾನ್ಯರು ಪ್ರವಾಸ, ಪಾರ್ಟಿಯ ಮೂಡ್ ನಲ್ಲಿದ್ದಾರೆ. ಪ್ರಸಿದ್ಧ ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಕೂಡ ಕೆಲಸಕ್ಕೆ ಬ್ರೇಕ್ ನೀಡಿ ಗೋವಾಕ್ಕೆ ತೆರಳಿದ್ದಾರೆ. ಅವರ ಗರ್ಲ್ ಫ್ರೆಂಡ್ ಜೊತೆ ರಜೆಯನ್ನು ಎಂಜಾಯ್ ಮಾಡ್ತಿದ್ದಾರೆ. ಆದ್ರೆ ನಿನ್ನ ಸಂಜೆ ಆರು ಗಂಟೆಗೆ ಅವರು ದೊಡ್ಡ ಅಪಘಾತಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಇಬ್ಬರು ಸುರಕ್ಷಿತವಾಗಿದ್ದಾರೆ. 

ಮಗುವಿನಂತೆ ನಾಟಕ ಆಡ್ತಿದ್ದಾಳಾ ಕೀರ್ತಿ? ಫ್ಯಾನ್ಸ್ ಮಧ್ಯೆ ಶುರುವಾಗಿದೆ ತಿಕ್ಕಾಟ

ನಾವು ಈಗ ಸುರಕ್ಷಿತವಾಗಿದ್ದೇವೆ. ಆದ್ರೆ ನಿನ್ನೆ ಸುಮಾರು 6 ಗಂಟೆಗೆ ನನ್ನ ಗೆಳತಿ ಮತ್ತು ನಾನು ಭೀಕರ ಅಪಘಾತದಿಂದ ಪಾರಾಗಿದ್ದೇವೆ.   ಬಾಲ್ಯದಿಂದಲೂ ತೆರೆದ ಸಾಗರದಲ್ಲಿ ಈಜುವುದು ತುಂಬಾ ಇಷ್ಟ. ಆದರೆ ನಿನ್ನೆ ನಾನು ಮತ್ತು ನನ್ನ ಗರ್ಲ್ ಫ್ರೆಂಡ್ ಗೋವಾ ಸಮುದ್ರದಲ್ಲಿ ಈಜುವಾಗ ಅಪಾಯಕ್ಕೆ ಒಳಗಾಗಿದ್ದೆವು. ಸಮಯದ್ರದ ಅಲೆಯಲ್ಲಿ ಕೊಚ್ಚಿ ಹೋಗಿದ್ದೆವು. ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ದಡ ಸೇರುವ ಪ್ರಯತ್ನ ನಡೆಸಿದ್ರೂ ಪ್ರಯೋಜನ ಆಗ್ಲಿಲ್ಲ. ಯಾವುದೇ ದಾರಿ ಕಾಣದೆ ಸಹಾಯಕ್ಕೆ ಕೂಗಲು ಶುರು ಮಾಡಿದ್ವಿ. ಪಕ್ಕದಲ್ಲಿ ಈಜುತ್ತಿದ್ದ ಐದು ಜನರ ಕುಟುಂಬವೊಂದು ನಮ್ಮ ಸಹಾಯಕ್ಕೆ ಬಂತು ಎಂದು ರಣವೀರ್ ಅಲ್ಲಾಬಾಡಿಯಾ ಉದ್ದದ ನೋಟ್ ಹಂಚಿಕೊಂಡಿದ್ದಾರೆ. ನಮ್ಮನ್ನು ರಕ್ಷಿಸಿದ ಐಪಿಎಸ್ ಅಧಿಕಾರಿ ಮತ್ತು ಐಆರ್‌ಎಸ್ ಅಧಿಕಾರಿ ಪತ್ನಿ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ ರಣವೀರ್.  

ಈ ಪೋಸ್ಟ್ ನಲ್ಲಿ ರಣವೀರ್, ಗೋವಾ ಪ್ರವಾಸದ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದ್ರೆ ಎಲ್ಲಿಯೂ ತಮ್ಮ ಗರ್ಲ್ ಫ್ರೆಂಡ್ ಮುಖವನ್ನು ತೋರಿಸಿಲ್ಲ. ರಣವೀರ್ ದೀರ್ಘ ಸಮಯದಿಂದ ಸಂಬಂಧದಲ್ಲಿದ್ದಾರೆ. ಆದ್ರೆ ಈವರೆಗೆ ಅವರು ತಮ್ಮ ಗರ್ಲ್ ಫ್ರೆಂಡ್ ಹೆಸರನ್ನು ಬಹಿರಂಗಪಡಿಸಿಲ್ಲ. ರಣವೀರ್ ಪೋಸ್ಟ್ ನೋಡಿದ ಫ್ಯಾನ್ಸ್, ನಿಮಗೆ ಈಗ ಬದುಕಲು ಎರಡನೇ ಅವಕಾಶ ಸಿಕ್ಕಿದೆ. ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ, ನಿಸರ್ಗವನ್ನು ಯಾವಾಗ್ಲೂ ಹಗುರವಾಗಿ ತೆಗೆದುಕೊಳ್ಳಬೇಡಿ. ನೀವು ಎಷ್ಟೇ ಪರಿಣಿತರಿದ್ದರೂ ಅದರ ಮುಂದೆ ಸೋಲಬೇಕಾಗುತ್ತದೆ. ಇಬ್ಬರು ಸುರಕ್ಷಿತವಾಗಿರಿ ಎಂದಿದ್ದಾರೆ.

ನಟನಾಗೋ ಮುನ್ನ ಸೇಲ್ಸ್’ಮ್ಯಾನ್ ಆಗಿದ್ದ ಸುದೀಪ್… ಅನುಶ್ರೀ ಚಾನೆಲಲ್ಲಿ ಸತ್ಯ ರಿವೀಲ್ ಮಾಡಿದ ಕಿಚ್ಚ !

ಅಷ್ಟೇ ಅಲ್ಲ ರಣವೀರ್, ಗರ್ಲ್ ಫ್ರೆಂಡ್ ಹೆಸರು ಹಾಗೂ ಮುಖ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ನಿಮ್ಮ ಹುಡುಗಿಯನ್ನು ನಮಗೆ ಪರಿಚಯಮಾಡಿಕೊಡಿ, ಮುಂದಿನ ವರ್ಷ ನಿಮ್ಮ ಮದುವೆಯನ್ನು ನಿರೀಕ್ಷಿಸುತ್ತೇವೆ ಎಂದು ಅಭಿಮಾನಿಗಳು ಹೇಳಿದ್ದಾರೆ. ರಣವೀರ್ ಅಲ್ಲಾಬಾಡಿಯಾ ಪ್ರಸಿದ್ಧ ಯುಟ್ಯೂಬರ್. ಕೆಲ ತಿಂಗಳ ಹಿಂದೆ ಅವರ ಯುಟ್ಯೂಬ್ ಚಾನೆಲ್ ಹ್ಯಾಕ್ ಆಗಿತ್ತು. ಈ ಸಮಯದಲ್ಲಿ ಆತಂಕಕ್ಕೊಳಗಾಗಿದ್ದ ರಣವೀರ್, ಸತತ ಪ್ರಯತ್ನದ ನಂತ್ರ ಎಲ್ಲ ಚಾನೆಲ್ ಗಳನ್ನು ವಾಪಸ್ ಪಡೆದಿದ್ದರು. ಎಂಜಿನಿಯರಿಂಗ್ ಪದವಿ ಪಡೆದಿರುವ ರಣಬೀರ್, ಬೀರ್‌ಬೈಸೆಪ್ಸ್ ಎಂಬ ಹೆಸರಿನ ಸ್ವಂತ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ರಣವೀರ್ ಅಲ್ಲಾಬಾಡಿಯಾ ತನ್ನ ಪಾಡ್‌ಕ್ಯಾಸ್ಟ್‌ಗೆ ಭಾರತೀಯ ಸೆಲೆಬ್ರಿಟಿಗಳನ್ನು ಆಹ್ವಾನಿಸಿ, ಅವರ ಜೊತೆ ಮಾತನಾಡ್ತಾರೆ.    
 

Latest Videos
Follow Us:
Download App:
  • android
  • ios