ಸಿನಿಮಾ ಮಂದಿರಗಳಲ್ಲಿ ಫ್ಲಾಪ್​ ಆಗಿ ಟ್ರೋಲ್​ಗೆ ಒಳಗಾಗಿದ್ದ ಜನ ಜಾನಕಿ ನಾಯಕ ಚಿತ್ರವೀಗ ಯುಟ್ಯೂಬ್​ನಲ್ಲಿ ವಿಶ್ವ ದಾಖಲೆ ಬರೆದಿದೆ.  

ನಟಿ ರಾಕುಲ್​ ಪ್ರೀತ್​ ಸಿಂಗ್ (Rakul Preeth Singh) ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಸ್ಟಾರ್​ ನಟರೊಂದಿಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಚೆಲುವೆ. ಇವರು ಬಾಲಿವುಡ್ ಚಿತ್ರಗಳಲ್ಲಿ ಕಡಿಮೆ ಕಾಣಿಸಿಕೊಂಡಿರಬಹುದು. ಆದರೆ ಸೌತ್ ಇಂಡಸ್ಟ್ರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅವರ ಕೀರ್ತಿ ಹೆಚ್ಚುತ್ತಲೇ ಸಾಗಿದೆ. ಕಳೆದ ವರ್ಷ ಬಾಲಿವುಡ್ ಕ್ರೇಜಿ ಹೀರೋ ಅಜಯ್ ದೇವಗನ್ ಜೊತೆ ರನ್​ವೇ 34 ಚಿತ್ರದಲ್ಲಿ ರಾಕುಲ್​ ನಟಿಸಿದ್ದರು. ಸಿನಿಮಾಗಿಂತಲೂ ಹೆಚ್ಚಾಗಿ ಅದರ ಪ್ರಮೋಷನ್​ (Promotion) ಸಮಯದಲ್ಲಿ ಕಲರ್​ಫುಲ್ ಆಗಿ ಕಾಣಿಸಿಕೊಂಡು ಭಾರಿ ಸುದ್ದಿಯಾಗಿದ್ದರು. ಒಂದು ಕಾಲದಲ್ಲಿ ಸೌತ್‌ನಲ್ಲಿ ಬ್ಯುಸಿ ಹೀರೋಯಿನ್‌ ಆಗಿದ್ದ ರಾಕುಲ್‌ಪ್ರೀತ್ ಸಿಂಗ್, ಆಫರ್‌ಗಳು ಕಡಿಮೆಯಾಗುತ್ತಿದ್ದಂತೆ ಉತ್ತರಕ್ಕೂ ಕಾಲಿಟ್ಟರು. ನಂತರ ಅವರು ಸಕತ್​ ಸುದ್ದಿ ಮಾಡಿದ್ದು, ಬೋಲ್ಡ್ ಡ್ರೆಸ್‌ಗಳ ಮೂಲಕ. 

ಈಗ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ದಕ್ಷಿಣದ ನಟ ಬೆಲ್ಲಂಕೊಂಡ ಶ್ರೀನಿವಾಸ್ (Bellamkonda Shreenivas) ಜೊತೆಗಿನ ರಾಕುಲ್​ಪ್ರೀತ್​ ಚಿತ್ರವು ಯೂಟ್ಯೂನ್​ನಲ್ಲಿ ದಾಖಲೆಯ ಸದ್ದು ಮಾಡಿದೆ. ತೆಲುಗು ಚಿತ್ರ ಜಯ ಜಾನಕಿ ನಾಯಕ್ ಎರಡರ ಹಿಂದಿ ಆವೃತ್ತಿಯಲ್ಲಿ ಈ ದಾಖಲೆ ಮಾಡಲಾಗಿದೆ. ಇದನ್ನು ಯೂಟ್ಯೂಬ್‌ನಲ್ಲಿ 700 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈ ಸುದ್ದಿ ಕೇಳಿ ರಾಕುಲ್‌ಪ್ರೀತ್ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಅಸಲಿಗೆ ಹೇಳಬೇಕೆಂದರೆ, ಚಿತ್ರಮಂದಿರದಲ್ಲಿ ಬ್ಲಾಕ್​ಬಸ್ಟರ್​ ಎನಿಸಿಕೊಂಡಿರುವ ಚಿತ್ರಗಳು ಟಿವಿಯಲ್ಲಿಯೂ ಅದೇ ರೀತಿ ಪ್ರದರ್ಶನ ಕಾಣಬೇಕೆಂದೇನಿಲ್ಲ. ಇದಾಗಲೇ ಚಿತ್ರಮಂದಿರಗಳಲ್ಲಿ ವೀಕ್ಷಿಸಿರುವವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಇರುವ ಕಾರಣ, ಓಟಿಟಿ ವೇದಿಕೆಯಲ್ಲಿಯೂ ಅವು ಫ್ಲಾಪ್​ ಎನಿಸುವುದು ಉಂಟು. ಆದರೆ ಚಿತ್ರಮಂದಿರಗಳಲ್ಲಿ ಫ್ಲಾಪ್​ ಆಗಿರೋ ಚಿತ್ರಗಳು ಯುಟ್ಯೂಬ್​, ಓಟಿಟಿಗಳಲ್ಲಿ ಜಯಭೇರಿ ಬಾರಿಸುವುದು ಉಂಟು. ಅಂಥದ್ದೇ ಒಂದು ಸನ್ನಿವೇಶದಿಂದಾಗಿ ರಾಕುತ್​ಪ್ರೀತ್​ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಜೋಡಿ ಈಗ ಸುದ್ದಿಯಲ್ಲಿದೆ. 

JAWAN: ಶಾರುಖ್​ಗಾಗಿ 16 ವರ್ಷದ ರೂಲ್ಸ್​ ಬ್ರೇಕ್​- ಬಿಕಿನಿಯಲ್ಲಿ ನಟಿ ನಯನತಾರಾ?

 ಈ ಹಿಂದೆ ಸೌತ್ ಇಂಡಿಯನ್ (South Industry) ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯುಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತಿತ್ತು. ಕೆಲವೊಮ್ಮೆ ಕುತೂಹಲ ಎನ್ನುವ ರೀತಿಯಲ್ಲಿ ಡಬ್​ ಮಾಡಿದ ಚಿತ್ರಗಳನ್ನೇ ಹೆಚ್ಚು ಮಂದಿ ವೀಕ್ಷಿಸಿರುವುದು ಉಂಟು. ಕೆಲವೊಮ್ಮೆ ಫ್ಲಾಪ್​ ಚಿತ್ರಗಳು ಟ್ರೋಲಿಗೆ ಒಳಗಾದರೂ ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ವ್ಯೂಸ್​ ಗಳಿಸುವುದು ಇದೆ. ಈಗ ಅಂಥದ್ದೇ ಒಂದು ಚಿತ್ರದ ಬಗ್ಗೆ ಮಾತನಾಡುತ್ತಿದ್ದೇವೆ. 2017ರಲ್ಲಿ ನಿರ್ದೇಶಕ ಭೋಯಾಪತಿ ಶೀನು ಜಯ ಜಾನಕಿ ನಾಯಕ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಬಿಡುಗಡೆಗೂ ಮುನ್ನ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಹೀನಾಯವಾಗಿ ಸೋತಿತು. ಇದರಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ನಾಯಕನಾಗಿ ಹಾಗೂ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದರು.

ಸುಮಾರು 42 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರದ ವಿತರಣೆ ಹಕ್ಕನ್ನು ವಿತರಕರು 30 ಕೋಟಿಗೆ ಖರೀದಿಸಿದ್ದರು. ಆದರೆ ಚಿತ್ರ ಅಂತಿಮವಾಗಿ ವಿಶ್ವದಾದ್ಯಂತ 21.73 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಕೆ ಮಾಡಿತ್ತು. ಈ ಮೂಲಕ ಈ ಚಿತ್ರ 8.27 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು. ಹೀಗೆ ಬೃಹತ್ ನಷ್ಟ ಅನುಭವಿಸಿದ್ದ ಜಯ ಜಾನಕಿ ನಾಯಕ ಈಗ ಯುಟ್ಯೂಬ್‌ನಲ್ಲಿ (Youtube) 700 ಮಿಲಿಯನ್ ವೀಕ್ಷಣೆ ಪೂರೈಸಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಸಿನಿಮಾ ಎಂಬ ವಿಶ್ವ ದಾಖಲೆ ಬರೆದಿದೆ. ಇದರ ಜೊತೆಗೆ ತೆಲುಗಿನ ಮತ್ತೊಂದು ಚಿತ್ರ ನೇನು ಶೈಲಜಾ ಹಿಂದಿ ವರ್ಷನ್ ಸಹ 500 ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ಸೌತ್‌ನಲ್ಲಿ ಹೀನಾಯವಾಗಿ ಟ್ರೋಲ್ (Troll) ಆದ ಚಿತ್ರಗಳ ಹಿಂದಿ ವರ್ಷನ್‌ಗಳು ಹಿಂದಿಯಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿವೆ.

Manoj Bajpayee: ತಲೆಗೆ ಎಣ್ಣೆ ಮೆತ್ಕೊಂಡು ಪಾರ್ಟಿಗೆ ಬಂದಿದ್ಲು, ಲವ್​ ಆಗೋಯ್ತು ಎಂದ ನಟ!