Asianet Suvarna News Asianet Suvarna News

ಮಹಿಳಾ ಜೇಮ್ಸ್ ಬಾಂಡ್ ಆಗಿ ನಟಿಸಲು ಬಯಸುತ್ತೇನೆ; ಪ್ರಿಯಾಂಕಾ ಹೇಳಿದ್ದೇ ತಡ, ಲಡ್ಡು ಬಂದು ಬಾಯಿಗೆ ಬಿತ್ತಾ!

ಅಮೆರಿಕದ ನಿವೃತ್ತ ಫುಟ್ಬಾಲ್‌ ಆಟಗಾರ ಮಿಚೈಲ್ ಸ್ಟ್ರಾಹಾನ್ ಮತ್ತು ಸಹನಟ ಬ್ಲೇರ್ ಅಂಡರ್‌ವುಡ್ ನಡೆಸಿಕೊಡುವ ಗುಡ್ ಮಾರ್ನಿಂಗ್ ಅಮೆರಿಕ ಕಾರ್ಯಕ್ರಮದಲ್ಲಿ ಕ್ವಾಂಟಿಕೋ ತಾರೆ ಪ್ರಿಯಾಂಕಾ ಚೋಪ್ರಾ ಪಾಲ್ಗೊಂಡಿದ್ದರು. 

yes I like to act as woman james bond says actress priyanka chopra srb
Author
First Published Dec 28, 2023, 9:53 PM IST

ನಟಿ ಪ್ರಿಯಾಂಕಾ ಚೋಪ್ರಾ ಯಾರಿಗೆ ಗೊತ್ತಿಲ್ಲ. ಒಂದು ದಶಕದ ಹಿಂದೆ ಬರೋಬ್ಬರಿ ದಶಕಗಳ ಕಾಲ ಹಿಂದಿ ಚಿತ್ರಂಗದಲ್ಲಿ ಮಿಂಚಿರುವ ನಟಿ ಪ್ರಿಯಾಂಕಾ ಚೋಪ್ರಾ. ಆದರೆ ಈಗ ಅವರು ಭಾರತದಲ್ಲಿ ಇಲ್ಲ, ಬದಲಿಗೆ ಅಮೆರಿಕಾದಲ್ಲಿ ಇದ್ದಾರೆ.  ಅಮೆರಿಕಾದ ಪಾಪ್ ಹಾಡುಗಾರ ನಿಕ್ ಜೊನಾಸ್ ಅವರನ್ನು ವಿವಾಹವಾದ ಬಳಿಕ ನಟಿ ಪ್ರಿಯಾಂಕಾ ಗಂಡನ ಜತೆ ಅಲ್ಲೆ ವಾಸವಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿಲ್ಲ. 

ಆಗಾಗ ಅಮೆರಿಕಾದ ಕೆಲವು ಸಂದರ್ಶನಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka chopra) ಭಾಗವಹಿಸುತ್ತಿರುತ್ತಾರೆ.  ಹೀಗೊಂದು ಸಂದರ್ಶನದಲ್ಲಿ 'ನೀವು ಮಹಿಳಾ ಬಾಂಡ್ ಆಗಿ ನಟಿಸಲು ನಿಮಗೆ ಇಷ್ಟವಿದೆಯೇ' ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ಪ್ರಿಯಾಂಕಾ ಚೋಪ್ರಾ, 'ಹೌದು ನಾನು ಮಹಿಳಾ ಜೇಮ್ಸ್ ಬಾಂಡ್ ಆಗಿ ನಟಿಸಲು ಬಯಸುತ್ತೇನೆ' ಎಂದು ಉತ್ತರ ನೋಡಿದ್ದಾರೆ. ಅದಕ್ಕೆ ಸರಿಯಾಗಿ ಅವರಿಗೆ ಈ ಗ ಅದೇ ಪಾತ್ರ, ಅಂತಹುದೇ ಸಿನಿಮಾ ಹುಡುಕಿಕೊಂಡು ಬಂದಿದೆಯಂತೆ.

ಸಂಗೀತಾ ಕುಗ್ಗಿಸಲು ವಿನಯ್ ಹೆಂಡತಿ ಪ್ಲಾನ್ ಮಾಡಿದ್ರಾ; ಯಾಕೆ ಬೇಕಿತ್ತು ಪ್ರತ್ಯೇಕ ಮಾತುಕತೆ!?

ಅಮೆರಿಕದ ಜನಪ್ರಿಯ ಟಿವಿ ಶೋ ಕಾರ್ಯಕ್ರಮ 'ಗುಡ್ ಮಾರ್ನಿಂಗ್ ಅಮೆರಿಕ'ದ ಪ್ರಕಾರ, ಬಾಲಿವುಡ್ ಪ್ರತಿಭಾನ್ವಿತ ನಟಿ ಪ್ರಿಯಾಂಕಾ ಚೋಪ್ರಾ ಮಹಿಳಾ ಜೇಮ್ಸ್ ಬಾಂಡ್ ಪಾತ್ರದಲ್ಲಿ ಸದ್ಯವೇ ನಟಿಸಲಿದ್ದಾರಂತೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ಇನ್ನೇನು ಫೈನಲ್ ಆಗಲಿದೆ ಎನ್ನಲಾಗಿದೆ.

ದೇವರ ರೂಪದಲ್ಲಿ ಕನ್ನಡಕ್ಕೆ ಬರುತ್ತಿರುವ ಜ್ಯೂನಿಯರ್ ಎನ್‌ಟಿಆರ್‌; ಜಾನ್ವಿ ಕಪೂರ್ ಬರುತ್ತಿಲ್ವಾ!?

ಅಮೆರಿಕದ ನಿವೃತ್ತ ಫುಟ್ಬಾಲ್‌ ಆಟಗಾರ ಮಿಚೈಲ್ ಸ್ಟ್ರಾಹಾನ್ ಮತ್ತು ಸಹನಟ ಬ್ಲೇರ್ ಅಂಡರ್‌ವುಡ್ ನಡೆಸಿಕೊಡುವ ಗುಡ್ ಮಾರ್ನಿಂಗ್ ಅಮೆರಿಕ ಕಾರ್ಯಕ್ರಮದಲ್ಲಿ ಕ್ವಾಂಟಿಕೋ ತಾರೆ ಪ್ರಿಯಾಂಕಾ ಚೋಪ್ರಾ ಪಾಲ್ಗೊಂಡಿದ್ದರು. ಅಲ್ಲಿ ಅವರು ತಾವು ಅಂತಹ ಸಿನಿಮಾದಲ್ಲಿ ನಟಿಸಬೇಕು ಎಂದಿದ್ದಾರೆ. ಪ್ರಿಯಾಂಕಾ ಮಾತಿನಂತೆ ಇದೀಗ ಸಿನಿಮಾಗೆ ವೇದಿಕೆ ರೆಡಿಯಾಗಿದೆ. 

ಮಮತಾ ಬ್ಯಾನರ್ಜಿ ಕಾರಿನಲ್ಲಿ ಶಾರುಕ್ ಖಾನ್‌; ವಿಮಾನ ನಿಲ್ದಾಣದಲ್ಲಿ ನೋಡಿ ಜನ ಶಾಕ್!

ಕಳೆದ ಹಲವು ವರ್ಷಗಳಿಂದ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಉತ್ತಂಗಕ್ಕೇರಿರುವ  ನಟಿ ಪ್ರಿಯಾಂಕಾ ಚೋಪ್ರಾ, ಕ್ವಾಂಟಿಕೋ ಚಿತ್ರದಲ್ಲಿ ನಟಿಸುವಾಗ ತುಂಬಾ ನರ್ವಸ್ ಆಗಿದ್ದರಂತೆ. ಅದೆಷ್ಟು ನರ್ವಸ್ ಆಗಿದ್ದೆ ಎಂದರೆ 'ವಾಶ್‌ರೂಮ್‌ಗೆ ಹೋಗಿ ನನ್ನನ್ನು ನಾನೇ ನಟಿಸಿ ನನ್ನಿಂದ ಇದು ಸಾಧ್ಯ ಎಂದು ಖಚಿತ ಪಡಿಸಿಕೊಂಡೆ' ಎಂದು ಹೇಳಿದ್ದಾರೆ ಪ್ರಿಯಾಂಕಾ. ಅಂದಹಾಗೆ, ನಟಿ ಪ್ರಿಯಾಂಕಾ ನಟಿಸಲಿರುವ ಮುಂದಿನ ಹಾಲಿವುಡ್ ಚಿತ್ರದಲ್ಲಿ ಜಾನ್ಸನ್, ಎಪ್ರೊನ್ ಸೇರಿದಂತೆ ಹಾಲಿವುಡ್‌ನ ಹಲವು ಖ್ಯಾತ ನಟನಟಿಯರು ನಟಿಸಲಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios