Asianet Suvarna News Asianet Suvarna News

KGF 2; ವಿಶ್ವದಾದ್ಯಂತ 550 ಕೋಟಿ ರೂ. ದಾಟಿದ ಕಲೆಕ್ಷನ್, ಸಂಪೂರ್ಣ ಲೆಕ್ಕ ಇಲ್ಲಿದೆ

ಬಾಕ್ಸ್ ಆಫೀಸ್ ನಲ್ಲಿ ಆರ್ಭಟಿಸುತ್ತಿರುವ ಕೆಜಿಎಫ್-2 ವಿಶ್ವದಾದ್ಯಂತ 550 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾಗಿ 4 ದಿನಗಳಲ್ಲಿ ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ 551 ಕೋಟಿ ರೂಪಾಯಿ ಬಾಚಿಕೊಂಡಿದೆ.

Yash starrer kgf2 earn Rs 551 crore in 4 days worldwide
Author
Bengaluru, First Published Apr 18, 2022, 3:58 PM IST

ಬಾಕ್ಸ್ ಆಫೀಸ್ ನಲ್ಲಿ ಆರ್ಭಟಿಸುತ್ತಿರುವ ಕೆಜಿಎಫ್-2(KGF 2) ವಿಶ್ವದಾದ್ಯಂತ 550 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಬಾಲಿವುಡ್ ನಲ್ಲಂತೂ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2ಗೆ ಹಿಂದಿ ಮಂದಿ ಮಂಕಾಗಿದ್ದಾರೆ. ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಹಿಂದಿಯಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿತ್ತು. ಇದೀಗ 4 ದಿನಗಳಲ್ಲಿ 200 ಕೋಟಿ ಕ್ಲಬ್(200 Crore Club) ಸಮೀಪಿಸಿದೆ. ಈ ಮೂಲಕ ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್, ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ.

ವಿಶ್ವದಾದ್ಯಂತ ಕಲೆಕ್ಷನ್ ವರದಿ

ವಿಶ್ವದಾದ್ಯಂತ ಕೆಜಿಎಫ್-2 ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ 165.37 ಕೋಟಿ ರೂ. ಎರಡನೇ ದಿನ 139.25 ಕೋಟಿ ರೂ. ಮೂರನೇ ದಿನ 115.08 ಕೋಟಿ ರೂ. ನಾಲ್ಕನೇ ದಿನ ಕೋಟಿ 132.13 ಕೋಟಿ ರೂ. ಬಾಚಿಕೊಂಡಿದ್ದು, ಒಟ್ಟು ಜಗತ್ತಿನಾದ್ಯಂತ 551.83 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ವಿಶ್ಲೇಷಕ ಮನೋಬಾಲ ವಿಜಯ್ ಬಾಲನ್ ಮಾಹಿತಿ ನೀಡಿದ್ದಾರೆ.

ತಮಿಳುನಾಡು-ಆಂಧ್ರ ಪ್ರದೇಶದ ಕಲೆಕ್ಷನ್

ಇನ್ನೂ ನಾಲ್ಕನೇ ದಿನ ದಕ್ಷಿಣ ಭಾರತದಲ್ಲಿ ಕೆಜಿಎಫ್ ಕಲೆಕ್ಷನ್ ವಿವಿರ ತಮಿಳುನಾಡಿನಲ್ಲಿ 4ನೇ ದಿನ 12.38 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 42.73 ಕೋಟಿ ದಾಟಿದೆ. ಇನ್ನು ಆಂಧ್ರ-ತೆಲಂಗಾಣ ಭಾಗದಲ್ಲಿ 4ನೇ ದಿನ 12.38 ಕೋಟಿ ರೂ.ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ 100 ಕೋಟಿ ರೂ. ದಾಟಿದ ಕಲೆಕ್ಷನ್

ಕರ್ನಾಟಕದಲ್ಲೂ ಕೆಜಿಎಫ್-2 ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ 100 ಕೋಟಿ ಬೀಚಿಕೊಂಡಿದೆ. ಕೆಜಿಎಫ್-2 ಮೊದಲ ದಿನ 35 Cr ಕೋಟಿ ರೂ. ಎರಡನೇ ದಿನ 25 ಕೋಟಿ ರೂ. ಮೂರನೇ ದಿನ 20 ಕೋಟಿ ರೂ. 4ನೇ ದಿನ 22 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಒಟ್ಟು 102 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಆರ್ ಆರ್ ಆರ್ ಸಿನಿಮಾದ ಕಲೆಕ್ಷನ್

ಆರ್ ಆರ್ ಆರ್ ಸಿನಿಮಾ ಮೊದಲ ದಿನ 257.15 ಕೋಟಿ ರೂ., ಎರಡನೇ ದಿನ 114.38 ಕೋಟಿ ರೂ., ಮೂರನೇ ದಿನ 118.63 ಕೋಟಿ, ನಾಲ್ಕನೇ ದಿನ 72.80 ಕೋಟಿ, ಒಟ್ಟು 562 ಕೋಟಿ ರೂ ಕಲೆಕ್ಷನ್ ಮಾಡಿತ್ತು.

ಬಾಹುಬಲಿ 2 ಕಲೆಕ್ಷನ್

ಬಾಹುಬಲಿ-2 ಸಿನಿಮಾ 4 ದಿನಕ್ಕೆ 625 ಕೋಟಿ ಬಾಚಿಕೊಂಡಿತ್ತು. ಸದ್ಯ ಬಾಹುಬಲಿ-2 ಸಿನಿಮಾ 625 ಕೋಟಿ ರೂಪಾಯಿ ಮೂಲಕ ಮೊದಲ ಸ್ಥಾನದಲ್ಲಿದೆ. ಆರ್​ ಆರ್ ​ಆರ್​ 562 ಕೋಟಿ ರೂ. ಗಳಿಕೆ ಮಾಡುವ ಮೂಲಕ 2ನೇ ಸ್ಥಾನದಲ್ಲಿ ಇದ್ರೆ ಕೆಜಿಎಫ್ 2 551 ಕೋಟಿ ರೂ. ಬಾಚಿಕೊಳ್ಳುವ ಮೂಲಕ 3ನೇ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios