ಒಂದು ಕಡೆ ಯಶ್‌ 19 ಸಿನಿಮಾ ಘೋಷಣೆ ಮಾಡ್ಲೇಬೇಕು ಅಂತ ರಾಕಿ ಭಾಯ್ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಯಶ್ ಹೊಸ ಸಿನಿಮಾ ಶೂಟಿಂಗ್ ಶುರುವಾದ ಸೂಚನೆ ಸಿಕ್ಕಿದೆ. ಏ.14ಕ್ಕೆ ಯಶ್ ಹೊಸ ಸಿನಿಮಾ ಘೋಷಣೆ ಆಗುತ್ತಾ?

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆಗೆ ಅವರ ಅಭಿಮಾನಿಗಳು ಬಹಳ ದಿನಗಳಿಂದ ಎದುರು ನೋಡ್ತಿದ್ದಾರೆ. ಕೆಲವರಂತೂ ರೊಚ್ಚಿಗೆದ್ದು, ಇದು ತೀರಾ ಅತಿಯಾಯ್ತು, ಯಶ್ ಕೂಡಲೇ ತಮ್ಮ ಹೊಸ ಸಿನಿಮಾ ಘೋಷಣೆ ಮಾಡ್ಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಯಶ್ ಏನೇ ಮಾಡಿದ್ರೂ ಅದರಲ್ಲೊಂದು ಪಕ್ಕಾ ಪ್ಲಾನ್ ಇರುತ್ತೆ, ಬಹಳ ಬುದ್ಧಿವಂತಿಕೆ ಇರುತ್ತೆ. ಅವರ ಆ ಗುಣವನ್ನು ಅವರ ಆಪ್ತರೆಲ್ಲ ಹೇಳ್ತಾರೆ, ಆ ಬಗ್ಗೆ ಮೆಚ್ಚುಗೆಯನ್ನೂ ಸೂಚಿಸುತ್ತಾರೆ. ಯಶ್ ಬರ್ತ್ ಡೇಗೆ ಹೊಸ ಸಿನಿಮಾದ ಘೋಷಣೆ ಮಾಡ್ತಾರೆ ಅಂತ ಅವರ ಅಭಿಮಾನಿಗಳು ಕಾದಿದ್ದರು. ಆದರೆ ಇದಕ್ಕೂ ಮುನ್ನ ನಡೆದ ಸಂದರ್ಶನದಲ್ಲೇ ಯಶ್ ಹೇಳಿದ್ದರು, 'ಸಿನಿಮಾ ಒಂದು ಹಂತಕ್ಕೆ ಬಂದರೆ ಮಾತ್ರ ಘೋಷಣೆ ಮಾಡ್ತೀನಿ. ಅರೆಬರೆ ಬೆಂದ ಸ್ಥಿತಿಯಲ್ಲಿದ್ದರೆ ಐ ಯ್ಯಾಮ್ ಸಾರಿ' ಅಂತ. ಅದರಂತೆ ಅವರು ನಡೆದುಕೊಂಡರು. ಬರ್ತ್ ಡೇ ದಿನ ಹೊಸ ಸಿನಿಮಾ ಘೋಷಣೆ ಮಾಡೇ ಮಾಡ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೇನೋ ನಿರಾಸೆ ಆಯ್ತು. ಆದರೆ ಸಿನಿಮಾ ಒಂದು ಹಂತಕ್ಕೆ ಬರದೇ ಮುಂದುವರಿಯುವುದಿಲ್ಲ ಅನ್ನೋ ಯಶ್ ನಿಲುವು ಎಲ್ಲರಿಗೂ ಸ್ಪಷ್ಟವಾಯ್ತು.

ಇದೀಗ ಇನ್ನೊಂದು ಫ್ರೆಶ್ ಡೇಟ್ ಸಿಕ್ಕಿದೆ. ಅದು ಏ.೧೪. ಈ ದಿನಕ್ಕೊಂದು ವಿಶೇಷತೆ ಇದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್ನ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಇದೇ ಏಪ್ರಿಲ್ 14ಕ್ಕೆ ಒಂದು ವರ್ಷ ಕಳೆಯಲಿದೆ. ಆ ವರ್ಷ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ಬರೆದಿದ್ದ ಈ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿತ್ತು. ಹೀಗೆ ದೊಡ್ಡ ಮಟ್ಟದ ಚಿತ್ರವನ್ನು ನೀಡಿದ ಯಶ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಮೂಡಿದೆ. ಯಶ್ 19ನೇ ಸಿನಿಮಾವನ್ನು ಯಾವ ನಿರ್ದೇಶಕ ನಿರ್ದೇಶಿಸಲಿದ್ದಾರೆ, ಯಾವ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಹಾಗೂ ಯಾವ ರೀತಿಯ ಕಥೆಯನ್ನು ಯಶ್ ಆರಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಹಾಗೂ ಚಿತ್ರ ಪ್ರೇಮಿಗಳನ್ನು ಕಾಡಿವೆ.

ಸಮಂತಾ ರುತ್ ಪ್ರಭುವಿಗೆ ಮೊಲ ಕಚ್ಚಿತಂತೆ! ಈಕೆಯ ಬಗ್ಗೆ 5 ಸಂಗತಿ ನಿಮಗೆ ತಿಳಿದಿರಲಿ

ಈ ನಡುವೆ ಅಭಿಮಾನಿಗಳ ಪ್ರಶ್ನೆಗೆ ಒಂದು ಉತ್ತರವೂ ಸಿಗುವ ಸೂಚನೆ ಇದೆ. ಆ ಪ್ರಕಾರ ಎಲ್ಲ ನಡೆದರೆ ಈ ತಿಂಗಳ 14ರಂದು ಯಶ್ ಹೊಸ ಸಿನಿಮಾ ಘೋಷಣೆಯಾಗಲಿದೆ. ಅದು ಅವರ ಪ್ರೊಡಕ್ಷನ್ ಹೌಸ್ ನಿಂದಲೆ ಹೊರಬರುತ್ತಿರುವ ಸಿನಿಮಾ ಎನ್ನಲಾಗುತ್ತಿದೆ. ಯಶ್ ಈಗಾಗಲೇ ಹೊಸ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ. ಇದಕ್ಕೊಂದು ಕಾರಣವೂ ಇದೆ. ಕಳೆದ ಕೆಲವು ಸಮಯದಿಂದ ಯಶ್ ಎಲ್ಲೂ ಹೊರಗೆ ಕಾಣಿಸಿಕೊಂಡಿಲ್ಲ. ಪತ್ನಿ ರಾಧಿಕಾ ಜೊತೆಗೆ ರಹಸ್ಯವಾಗಿ ವಿದೇಶ ಪ್ರಯಾಣ ಮಾಡಿದ್ದಾರೆ. ಅಲ್ಲಿ ರಾಧಿಕಾ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಆದರೆ ಅಪ್ಪಿತಪ್ಪಿ ಎಲ್ಲೂ ತಾನು ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ. ಹಬ್ಬದ ವೇಳೆ ತೆಗೆದ ಫೋಟೋ(Photo)ಗಳಲ್ಲೂ ಅವರಿಲ್ಲ.

ಇದಕ್ಕೆ ಕಾರಣ ಹೊಸ ಸಿನಿಮಾಕ್ಕಾಗಿ ಯಶ್ ತಮ್ಮ ಗೆಟಪ್ ಬದಲಿಸಿದ್ದಾರೆ ಅನ್ನೋದು. ಅದು ಎಲ್ಲೂ ಡಿಸ್ ಕ್ಲೋಸ್ (Disclose)ಆಗದೇ ಇರಲಿ ಅನ್ನೋ ಎಚ್ಚರಿಕೆಯಲ್ಲಿ ಅವರಿದ್ದ ಹಾಗಿದೆ. ಈಗಾಗಲೇ ಈ ಸಿನಿಮಾಕ್ಕೆ ಸಂಬಂಧಿಸಿದ ತರಬೇತಿಗಳನ್ನೂ ಪಡೆದು ಬಂದಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಏ.೧೪ಕ್ಕೆ ಯಶ್ ಹೊಸ ಸಿನಿಮಾ ಘೋಷಿಸಬಹುದು ಅನ್ನೋದಕ್ಕೆ ಬಲವಾದ ಹಿಂಟ್(Hint) ಸಿಕ್ಕಂತಾಗಿದೆ.

ಆದರೂ ಆ ದಿನ ಹೊಸ ಸಿನಿಮಾ(Cinema) ಘೋಷಿಸೋದಾದ್ರೆ ಸಣ್ಣ ಹಿಂಟ್ ಅನ್ನಾದರೂ ಇಷ್ಟರಲ್ಲಾಗಲೇ ನೀಡಬೇಕಿತ್ತಲ್ಲವಾ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಯಾವ್ದಕ್ಕೂ ಒಳ್ಳೇದನ್ನೇ ಎದುರು ನೋಡೋದು ಬೆಸ್ಟ್.

ರಿಯಲ್ ಅಲ್ಲ ವಿಎಕ್ಸ್‌ಎಫ್ ಎಂದವರಿಗೆ ವೇದಿಕೆ ಮೇಲೆಯೇ ಶರ್ಟ್ ಬಿಚ್ಚಿ ತೋರಿಸಿದ ಸಲ್ಮಾನ್ ಖಾನ್