ನಟಿ ಸಮಂತಾ ರುತ್ ಪ್ರಭು ಅವರ ಶಾಕುಂತಲಂ ಸಿನಿಮಾ ರಿಲೀಸ್‌ ಆಗುವ ಹಂತದಲ್ಲಿದೆ. ಕಳೆದ ಎರಡು ವರ್ಷಗಳಿಂದ ಇದರ ಶೂಟಿಂಗ್‌ ನಡೆದಿದೆ. ಇದರ ಸೆಟ್.‌ ಟ್ರೇಲರ್‌ ಎಲ್ಲರನ್ನೂ ಸೆಳೆದಿದೆ. ಸದ್ಯ ಥಿಯೇಟರ್‌ಗಳಲ್ಲಿ ಹವಾ ಎಬ್ಬಿಸಲು ಮುಂದಾಗಿದೆ. ಸಮಂತಾ ಇದರಲ್ಲಿ ಶಕುಂತಲೆ.

ಹೊಸಾ ಸಂಗತಿಯೆಂದರೆ ಅವರಿಗೆ ಮೊಲವೊಂದು ʼಶಾಕುಂತಲಂʼ ಸಿನಿಮಾ ಶೂಟಿಂಗ್‌ ವೇಳೆ ಕಚ್ಚಿರುವುದು. ಶಕುಂತಲೆಯ ಕಣ್ವಾಶ್ರಮದ ಸೀನ್‌ ಶೂಟ್‌ ಮಾಡುವಾಗ ಅಲ್ಲಿ ದಂಡು ಮೊಲಗಳನ್ನು, ಜಿಂಕೆಗಳನ್ನು ಬಿಡಲಾಗಿತ್ತಂತೆ. ಅದರಲ್ಲೊಂದು ಸಂತಾಗೆ ಹಲ್ಲಿನ ರುಚಿ ತೋರಿಸಿದೆ. ಮೊಲಗಳು ನೋಡುವುದಕ್ಕೇನೋ ಮುದ್ದಾಗೇ ಇರುತ್ತವೆ. ಆದರೆ ಕೆಲವೊಮ್ಮೆ ರೋಷವುಕ್ಕಿದರೆ ಕ್ಯಾರೆಟ್‌ ಕಟ್‌ ಮಾಡುವಷ್ಟು ಶಾರ್ಪ್‌ ಆಗಿರುವ ತಮ್ಮ ಹಲ್ಲುಗಳಿಂದ ಬೆರಳಿಗೆ ಕಚ್ಚಿಬಿಡುತ್ತವೆ. ಇದಕ್ಕೆ ರೇಬೀಸ್‌ ಇಂಜೆಕ್ಷನ್‌ ತೆಗೆದುಕೊಳ್ಳಲೇಬೇಕು. ಸಮಂತಾ ಕೂಡ ರೇಬಿಸ್‌ ಇಂಜೆಕ್ಷನ್‌ ತೆಗೆದುಕೊಂಡರಂತೆ.

ಸಮಂತಾ ʼಪುಷ್ಪ: ದಿ ರೈಸ್ʼ ಚಿತ್ರದ ʼಊ ಅಂಟಾವಾ ಮಾವʼ ಹಾಡಿಗೆ ಹಾಟ್‌ ಹಾಟಾಗಿ ಹೆಜ್ಜೆ ಹಾಕಿ ಎಲ್ಲರನ್ನೂ ಸೆಳೆದಿದ್ದರು. ಆಕರ್ಷಕ ಹೊಳೆಯುವ ತ್ವಚೆ(Skin), ತೋಳಿನ ಮೇಲೆ ಹೃದಯದ ಟ್ಯಾಟೂ (Tatoo)- ಇವೆಲ್ಲ ಈ ಟಾಲಿವುಡ್ ಬ್ಯೂಟಿಯ ವೈಶಿಷ್ಟ್ಯ. ಆದರೆ ʼಶಾಕುಂತಲಂʼ ಚಿತ್ರದ ಪೋಸ್ಟರ್ ಮತ್ತು ಟ್ರೇಲರ್‌ನಲ್ಲಿ ಈಕೆ ತೋರಿಸಿದ ಉದ್ದವಾದ ಹೊಳೆಯುವ ತಲೆಕೂದಲು ಮಾತ್ರ ನಿಜವಲ್ಲವಂತೆ. ಅದನ್ನು ಸಮಂತಾಳೇ ಒಪ್ಪಿಕೊಂಡಿದ್ದಾಳೆ. ಪ್ರಸ್ತುತ ತಮ್ಮ ಬಹು ನಿರೀಕ್ಷಿತ ಚಿತ್ರ ಶಾಕುಂತಲಂ ಪ್ರಚಾರದ ಹುಮ್ಮಸಿನಲ್ಲಿದ್ದಾಳೆ.

ಇನ್ಸ್ಟಾಗ್ರಾಮ್ ರೀಲ್ ಮೂಲಕ ಶಾಕುಂತಲಂ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ ಸಮಂತಾ, ತನಗೆ ಹೂವುಗಳೆಂದರೆ ಅಲರ್ಜಿ ಎಂದು ಬಹಿರಂಗಪಡಿಸಿದ್ದಾಳೆ. ಹಾಗಿದ್ದರೆ ಈ ಸಿನಿಮಾ (Cinema) ದಲ್ಲಿ ಈಕೆ ಬಿಳಿ ಸೀರೆಯುಟ್ಟು, ಜುಟ್ಟಿಗೆ ಮಲ್ಲಿಗೆ ಮಾಲೆ ಮುಡಿದು, ಹೂವಿನ ಆಭರಣಗಳಿಂದ ಅಲಂಕರಿಸಿದ ಚಿತ್ರ? ಅದು ನಿಮಗೆ ಹಿತವಾಗಿರಬಹುದು, ಆದರೆ ಆ ಅನುಭವ ಸಮಂತಾಗೆ ಅಷ್ಟೊಂದು ಹಿತವಾಗಿರಲಿಲ್ಲವಂತೆ. ಚಿತ್ರೀಕರಣದ ಕೊನೆಯಲ್ಲಿ ಈ ಹೂವಿನ ತೋಳಬಂದಿಗಳನ್ನು ತೆಗೆದ ನಂತರ ತಮ್ಮ ತೋಳುಗಳ ಮೇಲೆ ಅಚ್ಚೊತ್ತಿದ ಹೂವಿನ ಮುದ್ರೆಗಳು ಆಕೆಗೆ ಹಿಂಸೆ ಉಂಟುಮಾಡುತ್ತಿದ್ದವಂತೆ. ʼಕುಸುಮಕೋಮಲೆʼ ಎನ್ನಬಹುದೇ?

Kangana Ranaut: ಕರಣ್​ ಜೋಹರ್​ಗೆ ಮುಂದೆ ಮುಂದೆ ಏನಾಗ್ತದೋ ನೋಡ್ತಿರಿ ಎಂದ ನಟಿ...

ನಾನು ಆರು ತಿಂಗಳ ಕಾಲಕ್ಕಾಗಿ ನನ್ನ ತೋಳಿನ ಮೇಲೆ ಹೂವಿನ ಹಚ್ಚೆ ಹಾಕಿಸಿಕೊಂಡೆ. ಅದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಾಗದ ಕಾರಣ ಇದು ಶಾಶ್ವತ ಎಂದು ನಾನು ಭಾವಿಸಿದೆ. ಆದರೆ ಅವು ನಂತರ ಅಳಿಸಿಹೋದವು. ಅಲ್ಲಿಯವರೆಗೂ ಅವುಗಳನ್ನು ಆಕೆ ಮೇಕ್ಅಪ್‌ನಿಂದ ಮುಚ್ಚುತ್ತಿದ್ದಳು.

ಶಾಕುಂತಲಂನಲ್ಲಿನ ವಿಶೇಷ ಹಾಡಿನ ಸೀಕ್ವೆನ್ಸ್‌ಗಾಗಿ ಈಕೆ ಭಾರಿ ತೂಕದ ಉಡುಪು ಧರಿಸಿದ್ದಳು. ಅದು ಸಮಂತಾಗಾಗಿ ನೀತಾ ಲುಲ್ಲಾ ವಿಶೇಷವಾಗಿ ವಿನ್ಯಾಸಗೊಳಿಸಿದ 30 ಕೆಜಿ ಭಾರದ ಲೆಹೆಂಗಾ. ಇದು "ಸುಂದರ"ವಾಗಿತ್ತು, ಆದರೆ ಭರಿಸಲಾಗದಷ್ಟು ಭಾರವಾಗಿತ್ತು ಎಂದು ಸಮಂತಾ ನೆನೆಯುತ್ತಾಳೆ.

ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಹೀಗೆ ಐದು ಭಾಷೆಗಳಲ್ಲಿ ಶಾಕುಂತಲಂ ಬಿಡುಗಡೆಯಾಗಲಿದೆ. ತನ್ನ ಡಬ್ಬಿಂಗ್(Dubbing) ಅನುಭವದ ಕುರಿತು ಮಾತನಾಡಿದ ಸಮಂತಾ, ಡಬ್ಬಿಂಗ್ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವ ಇತರ ಸೆಲೆಬ್ರಿಟಿಗಳನ್ನು ಶ್ಲಾಘಿಸಿದರು. ಏಕೆಂದರೆ ಅವರಿಗೆ ಇದು ಕಠಿಣವಾಗಿತ್ತಂತೆ. “ನಾನು ನಿದ್ದೆಯಲ್ಲಿ ಡೈಲಾಗ್‌ಗಳನ್ನು(Dailogue) ಹೇಳುತ್ತಿದ್ದೆ. ನಾನು ಅದಕ್ಕೆ ನ್ಯಾಯ ಒದಗಿಸಿದ್ದೇನೆ ಎಂದು ನಾನು ಭಾವಿಸುತ್ತೇನೆʼʼ ಎಂದಿದ್ದಾಳೆ ಈಕೆ.

ಗುಣಾ ಟೀಮ್‌ವರ್ಕ್ಸ್‌ ಬ್ಯಾನರ್‌ನಡಿಯಲ್ಲಿ ಬರುತ್ತಿರುವ ಶಾಕುಂತಲಂ, ಶಕುಂತಲೆ ಹಾಗೂ ರಾಜ ದುಷ್ಯಂತರ ನಡುವಿನ ಪ್ರೀತಿಯ ಕಥೆಯನ್ನು ಹೇಳಲಿದೆ. ಸಮಂತಾ ಮತ್ತು ದೇವ್‌ಮೋಹನ್ ಲೀಡ್‌ ರೋಲ್‌(Lead role)ಗಳಲ್ಲಿದ್ದಾರೆ. ಈ ಪೌರಾಣಿಕ ಪ್ರಣಯ ಕತೆಗೆ ಆಧಾರ ಕಾಳಿದಾಸನ ʼಅಭಿಜ್ಞಾನ ಶಾಕುಂತಲʼ ನಾಟಕ.

ಧೋನಿ ಜೊತೆ ಪೋಸ್ ನೀಡಿದ ರಶ್ಮಿಕಾ ಮಂದಣ್ಣ; RCB ವಿರೋಧಿ ಎಂದ ಫ್ಯಾನ್ಸ್