ನವ ವಧು ಯಾಮಿಗೆ ಇಡಿ ಕಾಟ ಬಾಲಿವುಡ್ ನಟಿ ಯಾಮಿ ಗೌತಮ್‌ಗೆ ಇಡಿ ನೋಟಿಸ್

ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್ ನಟಿ ಯಾಮಿ ಗೌತಮ್ ಅವರು ತೊಂದರೆಗೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಬಾಲಿವುಡ್‌ ನಟಿಗೆ ಸಮನ್ಸ್ ನೀಡಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಆಕೆಯನ್ನು ವಿಚಾರಣೆಗೆ ಹಾಜರಾಗವಂತೆ ತಿಳಿಸಿದೆ.

ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಪ್ರಿಯಾಂಕ, 1 ಪೋಸ್ಟ್‌ಗೆ 3 ಕೋಟಿ.

ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಆದಿತ್ಯ ಧಾರ್ ಅವರನ್ನು ಮದುವೆಯಾದ ಫೇರ್ & ಲವ್ಲಿ ಬ್ಯೂಟಿ ಫೆಮಾವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಎರಡನೇ ಬಾರಿಗೆ ನಟಿಯನ್ನು ಇಡಿ ಕರೆಸಿಕೊಂಡಿದೆ.

ಇತ್ತೀಚೆಗಷ್ಟೇ ನಟಿ ಖಾಸಗಿ ಸಮಾರಂಭದಲ್ಲಿ ಸರಳವಾಗಿ ಮದುವೆಯಾಗಿದ್ದರು. ಕುಟುಂಬಸ್ಥರು ಮತ್ತು ಆಪ್ತರಷ್ಟೇ ವಿವಾಹದಲ್ಲಿ ಭಾಗಿಯಾಗಿದ್ದರು.

View post on Instagram