ಯಶ್‌ ಹೊಸ ಸಿನಿಮಾವನ್ನು ‘ಮಫ್ತಿ’ ಖ್ಯಾತಿಯ ನರ್ತನ್‌ ನಿರ್ದೇಶನ ಮಾಡಲಿದ್ದಾರೆ. ಮೊದಲೇ ಘೋಷಿಸಿಕೊಂಡಂತೆ ಅವರು ಶಿವಣ್ಣ ನಟನೆಯ 125ನೇ ಸಿನಿಮಾವಾಗಿ ‘ಭೈರತಿ ರಣಗಲ್‌’ ನಿರ್ದೇಶಿಸಬೇಕಿತ್ತು.

ಯಶ್‌ ಜೊತೆಗಿನ ಸಿನಿಮಾದಿಂದಾಗಿ ಭೈರತಿ ರಣಗಲ್‌ ಮುಂದೆ ಹೋಗಿದೆ. ಇದನ್ನು ಖುದ್ದು ನರ್ತನ್‌ ಸ್ಪಷ್ಟಪಡಿಸಿದ್ದಾರೆ. ‘ಸದ್ಯ ಯಶ್‌ ಜೊತೆಗಿನ ಹೊಸ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ. ನನ್ನ ಮುಂದಿನ ಸಿನಿಮಾ ಶಿವಣ್ಣ ಜೊತೆಗೆ ಭೈರತಿ ರಣಗಲ್‌’ ಎನ್ನುತ್ತಾರೆ ನಿರ್ದೇಶಕ ನರ್ತನ್‌.

'ನಿನ್ನ ನೋಡಿ ಸುಮ್ಮನೆಂಗ್ ಇರಲಿ'; ರಾಬರ್ಟ್‌ ಸಾಂಗ್ ಮೇಕಿಂಗ್ ವಿಡಿಯೋ ವೈರಲ್!

ನರ್ತನ್‌ ನಿರ್ದೇಶನದ ಯಶ್‌ ಹೊಸ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿವೆ. ಎರಡೆರಡು ಬಿಗ್‌ ಬಜೆಟ್‌ ಸಿನಿಮಾಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವುದು ಕಷ್ಟಎಂಬ ಕಾರಣಕ್ಕೆ ನರ್ತನ್‌ ಈಗ ಮೊದಲೇ ಒಪ್ಪಿಕೊಂಡಿರುವ ಯಶ್‌ ಸಿನಿಮಾದ ಕೆಲಸ ಮುಂದುವರಿಸಲು ಯೋಜಿಸಿದ್ದಾರೆ. ಈ ಸಿನಿಮಾದ ನಂತರ ಡಾ. ಶಿವರಾಜ್‌ ಕುಮಾರ್‌ ಸಿನಿಮಾ ಹೊರಬರಲಿದೆ.

‘ಶಿವಣ್ಣನ ಸಿನಿಮಾ ಅಂತಾದಾಗ ಅಲ್ಲಿ ನಂಬರ್‌ ಅಂಥಾ ಮಹತ್ವ ಪಡೆಯೋದಿಲ್ಲ. ಅವರ 125ನೇ ಸಿನಿಮಾವಾದ್ರೂ , 126ನೇ ಸಿನಿಮಾವಾದ್ರೂ ಹೆಚ್ಚು ವ್ಯತ್ಯಾಸ ಆಗಲ್ಲ. ಆದರೆ ಇದು ನನ್ನ ಮಹತ್ವಾಕಾಂಕ್ಷೆಯ ಚಿತ್ರ. ಅದ್ಭುತವಾಗಿ ತೆರೆ ಮೇಲೆ ತರುತ್ತೇನೆ’ ಎನ್ನುತ್ತಾರೆ ನರ್ತನ್‌.

'ವಾಲ್ಮೀಕಿ ಜಾತ್ರೆ' ಕಾರ್ಯಕ್ರಮದಲ್ಲಿ ಸುದೀಪ್; ಅಬ್ಬಬ್ಬಾ ಜನ ಸಾಗರ!

ಯಶ್‌ ಅವರ ಜತೆಗಿನ ಹೊಸ ಪಕ್ಕಾ ಪ್ಯಾನ್‌ ಇಂಡಿಯಾ ಸಿನಿಮಾ. ಈ ಸಿನಿಮಾ ಹೆಸರು ಜಟಾಕ್ಷ ಎಂಬ ರೂಮರ್‌ ಹಬ್ಬಿತ್ತು. ನಾಯಕಿ ತಮನ್ನಾ ಆಗ್ತಾರೆ ಎಂಬ ಮಾತೂ ಇದೆ. ಆದರೆ ಇದೆಲ್ಲ ಸತ್ಯಕ್ಕೆ ದೂರವಾದ ವಿಚಾರ. ಸಿನಿಮಾದ ಟೈಟಲ್‌ ಇನ್ನೂ ನಿರ್ಧರಿಸಿಲ್ಲ. ನಾಯಕಿ ಪಾತ್ರ ಕೊನೆಯಲ್ಲಿ ಬರುವ ಕಾರಣ ನಾನಿನ್ನೂ ಆ ಭಾಗವನ್ನು ಬರೆದೇ ಇಲ್ಲ. ಮುಂದಿನ ತಿಂಗಳು ಯಶ್‌ ಅವರ ಪಾತ್ರದ ಬಗ್ಗೆ, ಕಥೆಯ ಬಗ್ಗೆ, ಶೂಟಿಂಗ್‌ ವಿವರಗಳ ಬಗ್ಗೆ ಅಪ್‌ಡೇಟ್ಸ್‌ ಹೇಳುತ್ತೇನೆ ಎಂದಿದ್ದಾರೆ ಕೀರ್ತನ್.