Asianet Suvarna News Asianet Suvarna News

ಗದರ್​-2 ಬ್ಲಾಕ್​ಬಸ್ಟರ್​ ಆಗುತ್ತಲೇ ಸನ್ನಿ ಡಿಯೋಲ್​ಗೆ ಹೆಚ್ಚಾಗ್ತಿದ್ದಾರೆ 'ಅಕ್ಕ-ತಂಗಿಯರು'!

ನಟ ಸನ್ನಿ ಡಿಯೋಲ್​ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' ಬ್ಲಾಕ್​ಬಸ್ಟರ್​ ಆಗುತ್ತಲೇ ನಟ ಸಕತ್​ ಫೇಮಸ್​ ಆಗಿದ್ದಾರೆ. ಇವರಿಗೆ ರಾಖಿ ಕಟ್ಟಲು ಮಹಿಳೆಯರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. 
 

Women are coming in droves to tie rakhi to him Sunny Deol suc
Author
First Published Aug 29, 2023, 6:58 PM IST

ಸನ್ನಿ ಡಿಯೋಲ್ (Sunny Deol) ಮತ್ತು ಅಮೀಶಾ ಪಟೇಲ್ ಅಭಿನಯದ 'ಗದರ್: ಏಕ್ ಪ್ರೇಮ್ ಕಥಾ' (Gadar: Ek Prem Katha) ಸೀಕ್ವೆಲ್​ ಇದೇ 11 ರಂದು ಬಿಡುಗಡೆಯಾಗಿದ್ದು, ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಈ ಚಿತ್ರದ ಮೊದಲ ಭಾಗ  2001ರ ಜೂನ್ 15ರಂದು ಬಿಡುಗಡೆಯಾಗಿತ್ತು. ಆಗಲೂ ಇದೇ ರೀತಿಯ ನಾಗಾಲೋಟದಲ್ಲಿ ಓಡಿದ್ದ ಚಿತ್ರ ಈಗ ಪಾರ್ಟ್​-1 ಬಿಡುಗಡೆಯಾದ ಬರೋಬ್ಬರಿ 21 ವರ್ಷಗಳ ನಂತರ ಪಾರ್ಟ್​-2 ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ.  ಈ ಚಿತ್ರ ಮತ್ತೊಮ್ಮೆ ಬಿಡುಗಡೆಯಾದರೆ ಇಷ್ಟೊಂದು ಹಂಗಾಮ ಸೃಷ್ಟಿಸಬಹುದು ಎಂದು ಖುದ್ದು ನಿರ್ದೇಶಕ ಅನಿಲ್ ಶರ್ಮಾ ಯೋಚಿಸಿರಲಿಲ್ಲ.   ಜನಕ್ಕೆ ಈ ಸಿನಿಮಾ ಇಷ್ಟವಾಗಿದ್ದು ದೇಶದೆಲ್ಲೆಡೆ ಚರ್ಚೆ ಶುರುವಾಗಿದೆ.  ಗಳಿಕೆಯಲ್ಲಿ ಚಿತ್ರ ದಾಖಲೆ ನಿರ್ಮಿಸಿದೆ. ಹೌದು. 19 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 2001ರಲ್ಲಿ ಬಿಡುಗಡೆಯಾದಾಗ ವಿಶ್ವದಾದ್ಯಂತ 133 ಕೋಟಿ ಗಳಿಸಿತ್ತು.  ಮೊದಲ ವಾರದ ಗಳಿಕೆಯಲ್ಲಿ ಪಠಾಣ್​ ದಾಖಲೆಯನ್ನೂ ಉಡೀಸ್​ ಮಾಡಿ ಚಿತ್ರ ಮುನ್ನುಗ್ಗಿತ್ತು. ಇದೀಗ ಕನ್ನಡದಲ್ಲಿ ಎಲ್ಲಾ ದಾಖಲೆಗಳನ್ನೂ ಹಿಂದಿಕ್ಕಿದ್ದ ಯಶ್​ ಅಭಿನಯದ ಕೆಜಿಎಫ್​-2 ಚಿತ್ರವನ್ನೂ ಹಿಂದಿಕ್ಕಿ ಗದರ್​-2 ಮುನ್ನುಗ್ಗುತ್ತಿದೆ.

ಇದರ ಬೆನ್ನಲ್ಲೇ ಸನ್ನಿ ಡಿಯೋಲ್​ ಅವರಿಗೆ ಫ್ಯಾನ್ಸ್​ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಪಾಕಿಸ್ತಾನಗಳು ಈ ಚಿತ್ರ ನೋಡಿ ಉರಿದುಕೊಳ್ಳುತ್ತಿದ್ದರೆ, ಭಾರತ ಮತ್ತು ಇತರೆಡೆಗಳಲ್ಲಿ ಸನ್ನಿ ಡಿಯೋಲ್​ಗೆ ಭರ್ಜರಿ ಸ್ವಾಗತ ಸಿಗುತ್ತಿದೆ.  ಗದರ್ 2 ನಲ್ಲಿ ಸನ್ನಿ ಡಿಯೋಲ್ ಅಪ್ರತಿಮ ತಾರಾ ಸಿಂಗ್ ಆಗಿ ಪುನರಾಗಮನ ಆಗಲಿದ್ದಾರೆ.  ಅಮಿಷಾ ಪಟೇಲ್ ಸಕೀನಾ ಆಗಿದ್ದಾರೆ. 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗನನ್ನು ತಾರಾ ಸಿಂಗ್ ವಾಪಸ್​ ಕರೆತರಲು ಪಾಕಿಸ್ತಾನಕ್ಕೆ ಹಿಂದಿರುಗುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ತಾರಾಸಿಂಗ್​ ತನ್ನ ಮಗ ಚರಣಜೀತ್‌ನನ್ನು ಮನೆಗೆ ಕರೆತರಲು ಸಾಧ್ಯವಾಗತ್ತಾ ಎನ್ನುವುದು ಚಿತ್ರದ ಕುತೂಹಲ. ಈ ಚಿತ್ರ ಚಿತ್ರತಂಡವನ್ನೂ ಮೀರಿ ಮುನ್ನುಗ್ಗುತ್ತಿರುವ ನಡುವೆಯೇ ಸನ್ನಿ ಡಿಯೋಲ್​ಗೆ ರಾಖಿ ಕಟ್ಟಲು ತಂಡೋಪತಂಡವಾಗಿ ಮಹಿಳೆಯರು ಆಗಮಿಸುತ್ತಿದ್ದಾರೆ. 

ಕೆಜಿಎಫ್​-2 ದಾಖಲೆಯನ್ನೂ ಪುಡಿ ಮಾಡ್ತು ಪಾಕ್​ ಕಹಾನಿ ಗದರ್-2: ಕಲೆಕ್ಷನ್​ ಎಷ್ಟು ಗೊತ್ತಾ?

ನಾಳೆ (ಆಗಸ್ಟ್​ 30) ರಕ್ಷಾ ಬಂಧನ (Raksha Bandhan). ಕೆಲವೆಡೆ ಇಂದು ಕೂಡ ಹಬ್ಬ ಆಚರಿಸುತ್ತಿದ್ದು, ಮಹಿಳೆಯರು ಸನ್ನಿ ಡಿಯೋಲ್​ಗೆ ರಾಖಿ ಕಟ್ಟಲು ದೌಡಾಯಿಸುತ್ತಿದ್ದಾರೆ. ರಾಖಿ ಕಟ್ಟುವ ಮೂಲಕ ಶುಭ ಕೋರುತ್ತಿದ್ದಾರೆ. ಕಳೆದ ಹಲ ಚಿತ್ರಗಳು ಫ್ಲಾಪ್​ ಆಗಿದ್ದರಿಂದ ಸನ್ನಿ ಡಿಯೋಲ್​ ಅಷ್ಟಾಗಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ಆದರೆ ಇದೀಗ ಅವರನ್ನು ನೋಡಲು ಜನರು ಕ್ಯೂ ನಿಲ್ಲುವ ಸ್ಥಿತಿ ಬಂದಿದೆ. ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ರಾಖಿ ಕಟ್ಟಲು ಚಿಕ್ಕವರು-ದೊಡ್ಡವರು ಬರುತ್ತಿದ್ದಾರೆ. ನಟ ಕೂಡ ಅಷ್ಟೇ ಪ್ರೀತಿಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಚಿಕ್ಕಮಕ್ಕಳಿಗೆ ಆಶೀರ್ವಾದ ಮಾಡುತ್ತಿದ್ದಾರೆ.

ಅಂದಹಾಗೆ,  ಗದರ್ 2 ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಒಟ್ಟಾರೆಯಾಗಿ 439 ಕೋಟಿ ರೂಪಾಯಿಗಳನ್ನು  ಕಲೆಕ್ಷನ್​ ಮಾಡಿದೆ ಗದರ್​-2. ಈ ಮೂಲಕ ಕೆಜಿಎಫ್​ ದಾಖಲೆಯನ್ನೂ ಧೂಳಿಪಟ ಮಾಡಿದೆ.  'ಕೆಜಿಎಫ್-2' ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಗಳಿಸಿದ ಸಿನಿಮಾಗಳಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು.  1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ 'ಕೆಜಿಎಫ್-2' ಭಾರತದಲ್ಲೇ ಒಂದು ಸಾವಿರ  ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ವಿದೇಶಗಳಲ್ಲಿ  214 ಕೋಟಿಗೂ ಹೆಚ್ಚು ಗಳಿಸಿತ್ತು. ಆದರೆ ಈಗ ಗದರ್​-2 ಈ ದಾಖಲೆಯನ್ನು ಮುಗಿದಿದೆ. ಈಗಾಗಲೇ ಸಿನಿಮಾ 439 ಕೋಟಿ ಕಲೆಕ್ಷನ್ ಮಾಡಿದ್ದು ಈಗ ಕೆಜಿಎಫ್ 2 ಸಿನಿಮಾ ಹಿಂದೆ ದಾಖಲೆಗಳನ್ನು ಬ್ರೇಕ್ ಮಾಡಿದೆ. ಕೆಜಿಎಫ್ 2 (KGG-2) ರೆಕಾರ್ಟ್ ಕ್ರಾಸ್ ಮಾಡಲು ಗದರ್ 2 ಸಿನಿಮಾಗೆ 16 ದಿನಗಳಷ್ಟೇ ಸಾಕಾಗಿವೆ.

ಶಾರುಖ್​ಗೆ ಛೀಮಾರಿ ಹಾಕ್ತಿರೋ ಜನ, ದುಡ್ಡಿನ ಆಸೆಗೆ ಇದೆಂಥ ಕೆಲ್ಸ ಅಂತಿದ್ದಾರೆ ಪ್ರತಿಭಟನಾಕಾರರು!

Follow Us:
Download App:
  • android
  • ios