ಬಾಲಿವುಡ್‌ನ ಟ್ಯಾಲೆಂಟೆಡ್ ನಟ ಟೈಗರ್‌ ಶ್ರಾಫ್‌ಗೆ ಬ್ರಿಡನ್‌ನ ಚೆಲುವೆ ಮದುವೆ ಪ್ರಪೋಸ್ ಮಾಡಿದ್ದಾಳೆ. ನನ್ನಮದುವೆಯಾಗ್ತೀಯಾ ಅಂತ ಕೇಳಿದ್ದಾಳೆ. ನಟ ಟೈಗರ್‌ನ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಫ್ಯಾನ್ಸ್ ಸಿಕ್ಕಾಪಟ್ಟೆ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ.

ನಟನ ಮದುವೆ ಪ್ರಪೋಸಲ್ ಬಗ್ಗೆ ಫ್ಯಾನ್ಸ್ ಕೆದಕಿ ಕೆದಕಿ ಪ್ರಶ್ನೆ ಕೇಳಿದ್ದು ಫನ್ನಿಯಾಗಿ ನಡೆದಿದೆ  ಈ ಸೆಷನ್. ಚೆಲುವೆಯ ಪ್ರಪೋಸಲ್‌ಗೆ ನಟ ಏನ್ ಹೇಳಿದ್ರು..? ಹೇಗಿತ್ತು ನಟನ ರಿಯಾಕ್ಷನ್..? ಇಲ್ಲಿ ಓದಿ

ಕತ್ರೀನಾ ಕೈಫ್‌ ಜೊತೆ ಡೇಟಿಂಗ್: ಕೊನೆಗೂ ಬಾಯಿ ಬಿಟ್ಟ ವಿಕ್ಕಿ ಕೌಶಲ್‌!

ಟೈಗರ್‌ನ ಫೇವರೇಟ್ ನಟ ಯಾರು, ಫಿಟ್ನೆಸ್ ಸೀಕ್ರೇಟ್ ಏನು ಈ ತರದ ಪ್ರಶ್ನೆ ನಡುವೆ ನನ್ನ ಮದುವೆಯಾಗು, ಬ್ರಿಟನ್‌ಗೆ ಬಾ ಎಂದಿದ್ದಾಳೆ ಚೆಲುವೆ. ಈ ಪ್ರೇಮ ನಿವೇದನೆಗೆ ಸ್ಪಂದಿಸಿದ ನಟನ ಪ್ರತಿಕ್ರಿಯೆ  ಅವರ ಅಭಿಮಾನಿಗಳನ್ನು ಇಂಪ್ರೆಸ್ ಮಾಡಿದೆ. ಇನ್ನು ಕೆಲವು ವರ್ಷಗಳಲ್ಲಿ ನಿಮ್ಮನ್ನು ನಾನು ಬಂಬಲಿಸಬಹುದು.. ಅಲ್ಲಿ ತನಕ ಕಲಿಯೋದಕ್ಕೂ, ಸಂಪಾದಿಸೋಕ್ಕೂ ತುಂಬಾ ಇದೆ ಎಂದಿದ್ದಾರೆ.

ಫೇವರೇಟ್ ನಟ ಯಾರು ಎಂದಿದ್ದಕ್ಕೆ ಅಲ್ಲು ಅರ್ಜುನ್ ಎಂದಿದ್ದಾರೆ ಟೈಗರ್. ನನಗೂ ಅವರ ತರವೇ ಮೂವ್‌ಮೆಂಟ್ ಗೊತ್ತಿದ್ರೆ ಚೆನ್ನಾಗಿತ್ತು ಎಂದಿದ್ದಾರೆ ನಟ. ಕಳೆದ ವಾರ ನಟ ತಮ್ಮ ಸ್ಟಂಟ್ ರಿಹರ್ಸಲ್ ವಿಡಿಯೋ ಶೇರ್ ಮಾಡಿದ್ದರು. ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಾಗ ಸಿಕ್ಕಾಪಟ್ಟೆ ರಿಯಾಕ್ಷನ್ ಬಂದಿತ್ತು.