94ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ವಿಲ್ ಸ್ಮಿತ್ ನಟ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದ್ದಾರೆ. ಪತ್ನಿಯ ಬಗ್ಗೆ ತಮಾಷೆ ಮಾಡಿದರು ಎನ್ನುವ ಕಾರಣಕ್ಕೆ ಸ್ಮಿತ್, ಕ್ರಿಸ್ ಕಪಾಳೆ ಬಾರಿಸಿದ್ದಾರೆ.
ವಿಶ್ವ ಸಿನಿರಂಗದ ಅತೀ ದೊಡ್ಡ ಈವೆಂಟ್ ಆಸ್ಕರ್ ಸಮಾರಂಭ. 94ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದಿದ್ದೆ. ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಪ್ರಶಸ್ತಿ ಸಮಾರಂಭವಿದು. ಗಂಭೀರತೆ, ಹಾಸ್ಯ, ನಗುವಿನ ಜೊತೆ ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ದುರಂತ ಕೂಡ ನಡೆದಿದೆ. ಸೆಲೆಬ್ರಿಟಿಗಳಿಬ್ಬರ ಕಿತ್ತಾಟ ಆಸ್ಕರ್ ಈವೆಂಟ್ ನ ಖುಷಿಯನ್ನೇ ಕಿತ್ತುಕೊಂಡಿದೆ.
ಡಾಕ್ಯುಮೆಂಟರಿ ಫೀಚರ್ ವಿಭಾಗದಲ್ಲಿ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್ ಸಮಾರಂಭದಲ್ಲಿ ಭಾಗಿಯಾಗಿದ್ದ ಕೆಲವು ನಟರ ಬಗ್ಗೆ ತಮಾಷೆ ಮಾಡಿದರು. ಹಾಗೆ ವಿಲ್ ಸ್ಮಿತ್ ಪತ್ನಿ ಹಾಗೂ ಜಡಾ ಪಿಂಕೆಟ್ ಸ್ಮಿತ್ ಬಗ್ಗೆಯೂ ತಮಾಷೆ ಮಾಡಿದರು. ವಿಲ್ ಸ್ಮಿತ್ ಪತ್ನಿ ಜಡಾ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ತಮಾಷೆ ಮಾಡಿದರು. ತಕ್ಷಣ ವಿಲ್ ಸ್ಮಿತ್ ವೇದಿಕೆ ಮೇಲೆ ಹೋಗಿ ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದರು.
Oscars 2022: ಡ್ಯೂನ್‌ಗೆ 6 ಪ್ರಶಸ್ತಿ, ವಿಲ್ ಸ್ಮಿತ್ ಅತ್ಯುತ್ತಮ ನಟ!
ಈ ಘಟನೆ ಮೊದಲು ಎಲ್ಲರಿಗೂ ತಮಾಷೆಯಾಗೆ ಕಾಣಿಸಿತ್ತು. ಕಪಾಳಕಕ್ಕೆ ಬಾರಿಸಿ ಬಂದ ಸ್ಮಿತ್ ನನ್ನ ಪತ್ನಿ ಬಗ್ಗೆ ಮಾತನಾಬೇಡ ಎಂದು ಕಿರುಚಾಡಿದರು. ನನ್ನ ಪತ್ನಿಯ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು ಎಂದು ಸ್ಮಿತ್ ಕೂಗಾಡಿದರು. ಈ ಘಟನೆ ಡಾಲ್ಬಿ ಥಿಯೇಟರ್ ನಲ್ಲಿದ್ದವರು ಮತ್ತು ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದವರನ್ನು ಬೆಚ್ಚಿಬೀಳಿಸಿತ್ತು. ಬಳಿಕ ಕಾರ್ಯಕ್ರಮ ಮುಂದುವರೆಯಿತು.
ವಿರಾಮದ ಸಮಯದಲ್ಲಿ ನಿರೂಪಕ ಡೇನಿಯಲ್ ಅವರು ಸ್ಮಿತ್ ಅವರನ್ನು ತಬ್ಬಿಕೊಳ್ಳಲು ಬಂದರು. ಆ ಸಮಯದಲ್ಲಿ ಡೆನ್ಜೆಲ್ ವಾಷಿಕಂಗ್ ಟನ್ ಅವರನ್ನು ವೇದಿಕೆಯ ಪಕ್ಕದಲ್ಲಿ ಕರೆದುಕೊಂಡು ಹೋಗಿ ಮಾತನಾಡಿದರು. ಬಳಿಕ ಇಬ್ಬರು ತಬ್ಬಿಕೊಂಡು ಮಾತನಾಡಿದರು. ಸಾಮಾನ್ಯವಾಗಿ ಈವೆಂಟ್ ಮೊದಲೇ ಸ್ಕ್ರಿಪ್ಟ್ ತಯಾರಾಗಿರುತ್ತದೆ. ಆದರೆ ಇದು ಸ್ಕ್ರಿಪ್ಟ್ ಅಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಆಸ್ಕರ್ ಅಂತಹ ಪ್ರಸಿದ್ಧ ಕಾರ್ಯಕ್ರಮದಲ್ಲಿ ವಿಲ್ ಸ್ಮಿತ್ ಸಹ ನಟನ ಮೇಲೆ ಹಲ್ಲೆ ಮಾಡಿದ್ದು ಭಾರಿ ವೈರಲ್ ಆಗಿದೆ.
Oscars 2022: ಭಾರತದ ರೈಟಿಂಗ್ ವಿತ್ ಫೈರ್: ಆಸ್ಕರ್‌ಗೆ ನಾಮನಿರ್ದೇಶನ
ವಿಲ್ ಸ್ಮಿತ್ ಕಿಂಗ್ ರಿಚರ್ಡ್ಸ್ ಸಿನಿಮಾದ ನಟನೆಗೆ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಹ ವಿಲ್ ಸ್ಮಿತ್ ಪಡೆದುಕೊಂಡರು. ಬಳಿಕ ಸ್ಮಿತ್ ಅಕಾಡೆಮಿಗೆ ಕ್ಷಮೆ ಕೇಳಿದರು. ಅಲ್ಲದೆ ಸಹ ಕಲಾವಿದರಿಗೂ ಕ್ಷಮೆಯಾಚಿಸಿದರು. ಆದರೆ ನೇರವಾಗಿ ರಾಕ್ ಅವರಿಗೆ ನೇರವಾಗಿ ಕ್ಷಮೆ ಕೇಳಿಲ್ಲ.
