ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ತಂಗಿ ಪಾತ್ರಕ್ಕೆ ಸಾಯಿ ಪಲ್ಲವಿ ಒಪ್ಪಿಕೊಳ್ಳುತ್ತಾರೆ? ಸುಕುಮಾರ್ ಹುಡುಕುತ್ತಿರುವುದು ಯಾರನ್ನ?
ಟಾಲಿವುಡ್ ಅಲ್ಲು ಅರ್ಜುನ್ ಅಭಿನಯದ ಬಹು ಭಾಷಾ ಸಿನಿಮಾ 'ಪುಷ್ಪ' ಚಿತ್ರೀಕರಣ ಮಧ್ಯಭಾಗದಲ್ಲಿದ್ದು ಈಗ ನಾಯಕನ ಸಹೋದರಿ ಪಾತ್ರಕ್ಕೆ ನಾಯಕಿ ಹುಡುಕಾಟ ಆರಂಭವಾಗಿದೆ. ಚಿತ್ರದ ಎರಡನೇ ಭಾಗದಲ್ಲಿ ಸಹೋದರಿ ಪ್ರಮುಖ ಪಾತ್ರ ವಹಿಸುವ ಕಾರಣ ಸ್ಟಾರ್ ನಟಿಯೇ ಬೇಕೆಂದು ನಿರ್ದೇಶಕರು ನಿರ್ಧರಿಸಿದ್ದಾರೆ.
ಸಾಯಿ ಪಲ್ಲವಿಯನ್ನೇ ಹಿಂದಿಕ್ಕೆ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ?
ಪರ್ಫೆಕ್ಟ್ ಡೈರೆಕ್ಟರ್ ಸುಕುಮಾರ್ ಚಿತ್ರದಲ್ಲಿ ಅಭಿನಯಿಸುವ ಪ್ರತಿ ಪಾತ್ರಧಾರಿಯೂ ಚಿತ್ರಕ್ಕೆ ತೂಕ ಹೆಚ್ಚಿಸುವವರಾಗಿರುತ್ತಾರೆ. ಸಹೋದರಿಗೆ ಯಾರೋ ಹೊಸಬರನ್ನು ಕರೆ ತರುವ ಬದಲು ಸಾಯಿ ಪಲ್ಲವಿನೇ ಮಾಡಬೇಕೆಂಬುದು ಇಡೀ ತಂಡದ ಆಸೆ.
ಪಲ್ಲವಿ ಒಪ್ಪಿಕೊಳ್ಳುತ್ತಾರಾ?
ಸಾಯಿ ಪಲ್ಲವಿ ಚಿತ್ರಕಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ನಟ, ನಿರ್ದೇಶಕ ಹಾಗೂ ಸಹ ಕಲಾವಿದರೂ ಯಾರೇ ಆಗಿದ್ದರೂ ಅವರಿಗೆ ಚಿಂತೆಯಿಲ್ಲ. ಸದ್ಯ ಪಲ್ಲವಿ ಪವನ್ ಕಲ್ಯಾಣ್‌ಗೆ ಪತ್ನಿಯಾಗಿ ತೆಲುಗು ರಿಮೇಕ್ 'ಅಯ್ಯಪ್ಪನೂಮ್ ಕೊಶಿಯಮ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸೌಂದರ್ಯ ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ..? .
ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ರೊಮ್ಯಾನ್ಸ್ ಮಾಡುತ್ತಿರುವ ಪುಷ್ಪ ಚಿತ್ರದಲ್ಲಿ ನಟ ಡಾಲಿ ಧನಂಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಹೊಸ ಕಾರು ಖರೀದಿ ಮಾಡಿದ ರಶ್ಮಿಕಾ ರೇಂಜ್ ರೋವರ್ ಮುಂದೆ ನಿಂತು ಪೋಸ್ ಕೊಟ್ಟ ಆನಂತರ ಪುಷ್ಪ ಚಿತ್ರೀಕರಣಕ್ಕೆ ವಿಮಾನ ಹಾರಿದ್ದಾರೆ. ಒಟ್ಟಾರೆ ಪುಷ್ಪ ಚಿತ್ರಕ್ಕೆ ಸಾಯಿ ಪಲ್ಲವಿ ಎಂಟ್ರಿ ನೀಡಲು ಚಿತ್ರತಂಡ ಹೇಗೆ ಒಪ್ಪಿಸುತ್ತಾರೆ ಎಂದು ನೋಡಬೇಕಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 9, 2021, 4:16 PM IST