Asianet Suvarna News Asianet Suvarna News

ರಾ ರಾ ರಕ್ಕಮ್ಮ ಬೆಡಗಿಗಾಗಿ ಜೈಲಲ್ಲೇ ಪ್ರಿಯಕರ ಸುಕೇಶ್​ ಉಪವಾಸ: ಟ್ರೂ ಲವ್​ ಇದೇ ಅಂತಿದ್ದಾರೆ ಫ್ಯಾನ್ಸ್​

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಜೈಲಿನಿಂದಲೇ ಮತ್ತೊಂದು ಪತ್ರ ಬರೆದಿರುವ ಸುಕೇಶ್​ ಚಂದ್ರಶೇಖರ್​, ನಟಿಯ ಒಳಿತಿಗಾಗಿ ನವರಾತ್ರಿಯ ಎಲ್ಲಾ ದಿನವೂ ಉಪವಾಸ ಮಾಡುವುದಾಗಿ ಹೇಳಿದ್ದಾರೆ.
 

Will fast 9 days for you Conman Sukeshs Navratri wish to Jacqueline from jail suc
Author
First Published Oct 14, 2023, 6:08 PM IST

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Monet Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಾಗೂ ಆತನಿಂದ ಐಷಾರಾಮಿ ಉಡುಗೊರೆ ಪಡೆದು ತಗ್ಲಾಕ್ಕೊಂಡಿರೋ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇದೆ. ಇದಾಗಲೇ ಜೈಲಿನಿಂದಲೇ ಹಲವು ಪತ್ರಗಳನ್ನು ಸುಕೇಶ್​ ಬರೆದಿದ್ದಾರೆ. ಕೆಲ ತಿಂಗಳ ಹಿಂದೆ  ಹೋಳಿ ಹಬ್ಬಕ್ಕೆ ವಿಶ್ ಮಾಡಿದ್ದ ಸುಕೇಶ್​,  ತಾವು ಬರೆದಿದ್ದ ಪತ್ರದಲ್ಲಿ ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ್ದರು.  ಅದೇ ಪತ್ರದಲ್ಲಿ 'ಬೇಬಿ ಗರ್ಲ್' ಎಂದು ಬರೆದಿದ್ದ ಅವರು,  ಆಕೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಎಂದು ಹೇಳಿದ್ದರು. ಅಂದ ಹಾಗೆ  ಜಾಕ್ವೆಲಿನ್ ಅವರನ್ನು ಸುಕೇಶ್ ಬೇಬಿ ಗರ್ಲ್ ಎಂದು ಕರೆಯುತ್ತಾರೆ.  ಇದಕ್ಕೂ ಮೊದಲು ಸಹ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ ಪ್ರೀತಿಯ ಸಂದೇಶ ಕಳುಹಿದ್ದರು. ಪ್ರೇಮಿಗಳ ದಿನಾಚರಣೆ ದಿನ ವಿಶ್ ಮಾಡಿದ್ದರು. ರಾಷ್ಟ್ರೀಯ ತನಿಖಾ ದಳದ ಕೋರ್ಟ್‌ಗೆ ಹಾಜರಾಗಿ ಹೊರ ಬರುತ್ತಿದ್ದ ವೇಳೆ ಜಾಕ್ವೆಲಿನ್ ಗೆ ವಿಶ್ ಮಾಡಿದ್ದರು. ಜಾಕ್ವೆಲಿನ್ ಫರ್ನಾಂಡಿಸ್​ (Jacqueline Fernandez) ಮಾಡಿದ್ದ ಆರೋಪಗಳ ಬಗ್ಗೆ ಮಾಧ್ಯಮದವರು ಸುಕೇಶ್‌ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸುಕೇಶ್,  'ಅವಳ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅವಳಿಗೆ ಹೇಳಲು ಕಾರಣಗಳಿವೆ. ನಾನು ಏನನ್ನೂ ಹೇಳಲು ಬಯಸುವುದಿಲ್ಲ' ಎಂದು ಹೇಳಿದರು. ಬಳಿಕ ಮಾಧ್ಯಮದವರು ಜಾಕ್ವೆಲಿನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಸುಕೇಶ್, ನನ್ನ ಕಡೆಯಿಂದ ಅವಳಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿ' ಎಂದು ಹೇಳಿದ್ದರು.

ಇದೀಗ ಸುಕೇಶ್​ ನವರಾತ್ರಿ ನಿಮಿತ್ತ ಜೈಲಿನಲ್ಲಿಯೇ ಉಪವಾಸ ಮಾಡುತ್ತಿದ್ದಾರಂತೆ. ಅದೂ ಜಾಕ್ವೆಲಿನ್​ಗಾಗಿಯಂತೆ! ಈ ಕುರಿತು  ಸುಕೇಶ್ ಚಂದ್ರಶೇಖರ್ ಜೈಲಿನಿಂದ  ಜಾಕ್ವೆಲಿನ್​  ಅವರಿಗೆ ಪತ್ರ ಬರೆದಿದ್ದಾರೆ.  ಅದರಲ್ಲಿ ಅವರು ಉಪವಾಸದ ಕುರಿತು ತಿಳಿಸಿದ್ದಾರೆ. ಜಾಕ್ವೆಲಿನ್, ನನ್ನ ಗೊಂಬೆ ನಾನು ಏಪ್ರಿಲ್ 28 ರಂದು ನಡೆದ ಫಿಲ್ಮ್​​ಫೇರ್ ಪ್ರಶಸ್ತಿ ಕಾರ್ಯಕ್ರಮ ನೋಡಿದೆ. ನಿಮ್ಮನ್ನು ಕಂಡು ಖುಷಿಯಾಯಿತು. ಇಡೀ ಪ್ರದರ್ಶನದಲ್ಲಿ ನಿಮ್ಮ ಡ್ಯಾನ್ಸ್ ಆಕ್ಟ್ ತುಂಬಾ ಸೂಪರ್ ಆಗಿತ್ತು ಎಂದು ಪತ್ರವನ್ನು ಆರಂಭಿಸಿರುವ ಸುಕೇಶ್​, ನಿನಗಾಗಿ ನಾನು ನವರಾತ್ರಿಯಲ್ಲಿ ಒಂಬತ್ತು ದಿನ ಉಪವಾಸ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.  

ಶಶಿ ಕಪೂರ್​- ಜೆನ್ನಿಫರ್ ಜೋಡಿಯ ಮರೆಯಲಾರದ ಲವ್​ ಸ್ಟೋರಿ: ಇಲ್ಲಿರುವುದು ಬರೀ ಕಣ್ಣೀರಿನ ಹನಿ...

ಜಾಕ್ವೆಲಿನ್ ಅವರನ್ನು  'ಟೈಗ್ರೆಸ್'​​​ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಈ ಪ್ರಿಯತಮ, ತಾವು ಉಪವಾಸ ಮಾಡುವುದಕ್ಕೆ ಕಾರಣವನ್ನೂ ನೀಡಿದ್ದಾರೆ. ಆ ಕಾರಣದಲ್ಲಿ ಅವರು, ಜಾಕ್ವೆಲಿನ್ ಅವರ  ಯೋಗಕ್ಷೇಮಕ್ಕಾಗಿ ಮತ್ತು ಆಕೆಗೆ ಒಳ್ಳೆಯದಾಗಲಿ ಎಂದು ನವರಾತ್ರಿಯ 9 ದಿನವೂ ಉಪವಾಸ ಮಾಡುತ್ತೇನೆ ಎಂದಿದ್ದಾರೆ.  ಬೇಬಿ ನಾಳೆಯಿಂದ ನವರಾತ್ರಿ ಪ್ರಾರಂಭವಾಗುತ್ತಿದೆ. ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ನಿಮ್ಮ ಯೋಗಕ್ಷೇಮಕ್ಕಾಗಿ ಮುಖ್ಯವಾಗಿ ನಿಮ್ಮನ್ನು ಸುತ್ತುವರೆದಿರುವ ಎಲ್ಲಾ ಕೆಟ್ಟ ಕಣ್ಣು ದೂರವಾಗಬೇಕು ಅನ್ನೋದೆ ನನ್ನ ಉಪವಾಸದ ಉದ್ದೇಶ. ಎಲ್ಲಾ 9 ದಿನಗಳೂ ಉಪವಾಸ ಮಾಡಲಿದ್ದೇನೆ ಎಂದಿದ್ದಾರೆ.

ನವರಾತ್ರಿಯ ಒಂಬತ್ತನೇ ದಿನದಂದು ವೈಷ್ಣೋದೇವಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಬ್ಬರಿಗೂ ವಿಶೇಷ ಪೂಜೆ ಆಯೋಜಿಸುವುದಾಗಿಯೂ ತಿಳಿಸಿದ್ದಾರೆ. ನಂತರ ತಾವು ಈ ಕಾನೂನು ಸಮರದಲ್ಲಿ ತಾವು ಗೆಲ್ಲುವ ವಿಶ್ವಾಸವನ್ನು ಪತ್ರದಲ್ಲಿ ವ್ಯಕ್ತಪಡಿಸಿರುವ ಸುಕೇಶ್​ ಅವರು, ಎಲ್ಲವೂ ನಮ್ಮ ಪರವಾಗಿ ಮಾತ್ರ ಇರುತ್ತದೆ ಎಂದಿದ್ದು, ಕೊನೆಗೆ ಸತ್ಯಕ್ಕೇ ಗೆಲುವಾಗುತ್ತದೆ,  ನಾವಿಬ್ಬರೂ ಶೀಘ್ರದಲ್ಲೇ ಒಂದಾಗುತ್ತೇವೆ.  ಏನು ಬೇಕಾದರೂ ಬರಲಿ ನಾವಿಬ್ಬರು ಜೊತೆಯಾಗಿ ಬದುಕೋಣ ಎಂದಿದ್ದಾರೆ.

JODI NO 1: ಮದ್ವೆಯಾದಾಗ ಕೈಯಲ್ಲಿ ಕೆಲ್ಸ ಇರ್ಲಿಲ್ಲ: ಪತ್ನಿಗೆ ಚಾಕಲೇಟ್​ ಕೊಡಿಸಲೂ ದುಡ್ಡಿರಲಿಲ್ಲ ಎಂದು ಭಾವುಕರಾದ ಶಶಿ

Follow Us:
Download App:
  • android
  • ios