Avneet Kaur: ಮೇಲೆಲ್ಲಾ ಓಪನ್, ಕೆಳಗೆ ಗೌನ್ ಹಿಡಿಯಲು ಹೆಲ್ಪರ್: ಏನಮ್ಮಾ ನಿನ್ ಅವಸ್ಥೆ ಅಂತಿದ್ದಾರೆ ಫ್ಯಾನ್ಸ್!
ಬಾಲಿವುಡ್ ನಟಿ ಅವನೀತ್ ಕೌರ್, ಭಾರಿ ಗೌನ್ ಧರಿಸಿ ನಡೆಯಲು ಸಾಧ್ಯವಾಗದೇ ಕಷ್ಟಪಡುತ್ತಿರುವುದು ವಿಡಿಯೋ ವೈರಲ್ ಆಗಿದ್ದು, ಟ್ರೋಲ್ಗೆ ಒಳಗಾಗುತ್ತಿದ್ದಾರೆ.

ನಟಿಯರು ಭಾರಿ ಡ್ರೆಸ್ಗಳನ್ನು ಧರಿಸಿ ವೇದಿಕೆ ಮೇಲೆ ಬರುವುದು ಈಗಂತೂ ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ದೊಡ್ಡ ದೊಡ್ಡ ಕಾರ್ಯಕ್ರಮಗಳು ಇದ್ದಾಗ ಹೈ ಹೀಲ್ಸ್ (High heels) ಧರಿಸಿ, ನೆಲ ಗುಡಿಸುತ್ತಾ ಇರುವ ಗೌನ್ಗಳನ್ನು ಧರಿಸುವುದೇ ಫ್ಯಾಷನ್ ಆಗಿದೆ. ಅತಿ ಎನಿಸುವಷ್ಟು ಉದ್ದದ ಡ್ರೆಸ್ ತೊಟ್ಟು ನಡೆಯಲಾರದೇ ಎಡವಿರೋ ನಟಿಯರು ಅದೆಷ್ಟೋ ಮಂದಿ. ಹೀಗೆ ಎಡವಿ ಟ್ರೋಲ್ ಆದವರೂ ಕಡಿಮೆ ಏನಲ್ಲ. ಇನ್ನಷ್ಟು ನಟಿಯರಿಗೆ ಈ ಗೌನ್ ಹಿಡಿದುಕೊಳ್ಳಲಿಕ್ಕೆ ಒಬ್ಬ ಹೆಲ್ಪರ್ ಇರುವುದು ಇನ್ನೂ ವಿಚಿತ್ರ ಎನಿಸುತ್ತದೆ. ಆದರೆ ಮೇಲಿನ ಭಾಗಕ್ಕೆ ಬಂದರೆ ಮಾತ್ರ ಧಾರಾಳವಾಗಿ ಎದೆ ಪ್ರದರ್ಶನ ಮಾಡುವುದು ಹಿಂಜರಿಯುವುದಿಲ್ಲ. ಪೈಪೋಟಿಗೆ ಬಿದ್ದವರಂತೆ ಈಗಿನ ನಟಿಯರು ಅದರಲ್ಲಿಯೂ ಬಾಲಿವುಡ್ ತಾರೆಯರು ದೇಹ ಪ್ರದರ್ಶನ ಮಾಡುವುದು ಗುಟ್ಟಾಗೇನೂ ಉಳಿದಿಲ್ಲ. ಅಂಥದ್ದೇ ಒಂದು ಎಡವಟ್ಟು ಮಾಡಿಕೊಂಡಿರುವ ನಟಿ ಅವನೀತ್ ಕೌರ್ ಈಗ ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
ಅಪಾರ ಅಭಿಮಾನಿಗಳನ್ನು ಹೊಂದಿರೋ ಅವನೀತ್ (Avaneeth Kaur), ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಲೇ ಇರುತ್ತವೆ. ಅಷ್ಟಕ್ಕೂ ಹಾಟ್‌ನೆಸ್ ವಿಷಯಕ್ಕೆ ಬಂದರೆ, 21 ವರ್ಷದ ಅವನೀತ್ ಕೌರ್ ಬಾಲಿವುಡ್ ಸುಂದರಿಯರಿಗೂ ಕಠಿಣ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಅವರು ಆಗಾಗ್ಗೆ ತಮ್ಮ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ನಟಿ ತಮ್ಮ ಡ್ರೆಸ್ಗಳಿಂದಲೇ ಟ್ರೋಲ್ಗೆ ಒಳಗಾಗುವುದೂ ಇದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಹಸಿರು ಉಡುಗೆ ತೊಟ್ಟ ನಟಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅತೀ ಎನಿಸುವಷ್ಟು ಉದ್ದದ ಗೌನ್ ಇದಾಗಿದೆ. ಹೈ ಹೀಲ್ಸ್ ತೊಟ್ಟು ಫೋಟೋಗೆ ನಟಿ ಪೋಸ್ ಕೊಡುತ್ತಿದ್ದಾರೆ. ಮೇಲೆ ದೇಹ ಪ್ರದರ್ಶನ ಮಾಡುತ್ತಿರೋ ನಟಿ, ಉದ್ದದ ಗೌನ್ ಸಲುವಾಗಿ ನಡೆಯಲು ಆಗದೇ ಪೇಚಿಗೆ ಸಿಲುಕಿರೋದನ್ನು ವಿಡಿಯೋದಲ್ಲಿ ನೋಡಬಹುದು. ಎಡವಿ ಎಡವಿ ಬೀಳುತ್ತಿದ್ದ ನಟಿಯನ್ನು ಆಕೆಯ ಲೇಡಿ ಹೆಲ್ಪರ್ ಗೌನ್ ಹಿಡಿದುಕೊಂಡು ಸರಿ ಮಾಡಿದ್ದಾರೆ. ನಂತರ ನಟಿಯ ಹಿಂದುಗಡೆ ಗೌನ್ ಹಿಡಿದುಕೊಂಡೇ ಹೆಲ್ಪರ್ ವೇದಿಕೆಯ ಸುತ್ತಲೂ ಸುತ್ತಿರೋದು ನೋಡುಗರನ್ನು ನಗುವಿನಲ್ಲಿ ತೇಲಿಸಿದೆ.
ಮದುವೆ ಮುಂಚಿನ ಸೆಕ್ಸ್, ಕನ್ಯತ್ವ ಕಳೆದುಕೊಳ್ಳುವ ವಯಸ್ಸಿನ ಕುರಿತು ನಟಿ ಅತುಲ್ಯಾ ಬೋಲ್ಡ್ ಹೇಳಿಕೆ!
ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗಿದೆ. ಇಂಥ unconfirtable ಡ್ರೆಸ್ ಧರಿಸುವುದು ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಮೇಲೆಲ್ಲಾ ಓಪನ್ ಇಟ್ಕೊಂಡು, ಕೆಳಗೆ ಇಷ್ಟು ಉದ್ದದ ಡ್ರೆಸ್ ಹಾಕ್ಕೊಂಡಿರೋ ನಿನ್ ಅವಸ್ಥೆ ಏನಮ್ಮಾ ಅಂತಿದ್ದಾರೆ ನೆಟ್ಟಿಗರು. ಆ ಉದ್ದದ ಗೌನ್ ಬದಲು ಒಂದಷ್ಟು ಮೇಲುಗಡೆ ಹೊದ್ದುಕೊಂಡಿದ್ದರೆ ಏನಾದ್ರೂ ಸಮಸ್ಯೆ ಆಗ್ತಿತ್ತಾ ಅಂತ ಕೇಳುತ್ತಿದ್ದಾರೆ.
ಇನ್ನು ನಟಿಯ ಕರಿಯರ್ ವಿಷಯಕ್ಕೆ ಬರುವುದಾದರೆ, ಅವನೀತ್ ವೃತ್ತಿಜೀವನವನ್ನು 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಚಾಂಪ್' ನಲ್ಲಿ ಸ್ಪರ್ಧಿಯಾಗಿ ಪ್ರಾರಂಭಿಸಿದರು, ಇದರ ಹೊರತಾಗಿ, ಅವನೀತ್ ಡ್ಯಾನ್ಸ್ ಸೂಪರ್‌ಸ್ಟಾರ್‌ನಲ್ಲಿಯೂ ಕಾಣಿಸಿಕೊಂಡರು. ತಮ್ಮ ನಟನಾ ವೃತ್ತಿಯನ್ನು 'ಮೇರಿ ಮಾ' (Meri Ma) ಎಂಬ ಟಿವಿ ಶೋ ಮೂಲಕ ಪ್ರಾರಂಭಿಸಿದರು, ಈ ಶೋನಲ್ಲಿ ಅವರು ಜಿಲ್ಮಿಲ್ ಪಾತ್ರವನ್ನು ನಿರ್ವಹಿಸಿದರು. ಇದಾದ ನಂತರ ಅವರು ಡ್ಯಾನ್ಸ್ ರಿಯಾಲಿಟಿ ಶೋ 'ಝಲಕ್ ದಿಖ್ಲಾ ಜಾ' ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. 2012ರಲ್ಲಿ ‘ಸಾವಿತ್ರಿ’ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಲ್ಲದೆ, ಅವನೀತ್ 'ಮರ್ದಾನಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಟಿವಿಯ 'ಏಕ್ ಮುತ್ತಿ ಆಸ್ಮಾನ್', 'ಹಮಾರಿ ಸಿಸ್ಟರ್ ದೀದಿ' ಟಿವಿ ಧಾರಾವಾಹಿಯಿಂದ ಮನೆ ಮಾತಾದರು. ಇತ್ತೀಚೆಗಷ್ಟೇ 'ಚಂದ್ರ ನಂದಿನಿ' ಚಿತ್ರದಲ್ಲಿ ರಾಜಕುಮಾರ್ ಬಿಂದುಸಾರ್ ಅವರ ಮೊದಲ ಪತ್ನಿ ಪಾತ್ರದಲ್ಲಿ ಅವನೀತ್ ಕಾಣಿಸಿಕೊಂಡಿದ್ದರು. ಇದನ್ನು ಹೊರತುಪಡಿಸಿದರೆ ಇವರು 400 ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ.
ಶಾರುಖ್ಗೆ ಚಾಟಿ ಬೀಸಿದ್ದ ಎನ್ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್ ರಿಲೀಸ್ ಬೆನ್ನಲ್ಲೇ ಕ್ಲೀನ್ ಚಿಟ್