ಮಗನ ಮದ್ವೆ ಖುಷಿಯಲ್ಲಿ ಹೀಗೆ ಡ್ಯಾನ್ಸ್ ಮಾಡೋದಾ ಸನ್ನಿ ಡಿಯೋಲ್​? ಫ್ಯಾನ್ಸ್​ ಫಿದಾ

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಪುತ್ರ ಕರಣ್​ ಡಿಯೋಲ್​ ಅವರ ಮದುವೆಯ ಸಂಭ್ರಮ ಜೋರಾಗಿದ್ದು, ಅರಿಶಿಣ ಶಾಸ್ತ್ರದ ದಿನ ಸನ್ನಿ ಅವರು ಮಾಡಿರುವ ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದೆ. 
 

Sunny Deol dance on nach punjaban song in karan deol mehndi function video viral suc

ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ (Sunny Deol) ಅವರ ಪುತ್ರ ಕರಣ್ ಡಿಯೋಲ್ ಶೀಘ್ರದಲ್ಲೇ ತಮ್ಮ ದೀರ್ಘಕಾಲದ ಗೆಳತಿ ದಿಶಾ ಆಚಾರ್ಯ ಅವರೊಂದಿಗೆ ಹಸೆಮಣೆ ಏರಲಿದ್ದಾರೆ.  ಪ್ರಸ್ತುತ ಕರಣ್ ಡಿಯೋಲ್ ಮತ್ತು ದಿಶಾ ಆಚಾರ್ಯ ವಿವಾಹದ ಪೂರ್ವ ವಿವಾಹ ಕಾರ್ಯಕ್ರಮಗಳು ನಡೆಯುತ್ತಿವೆ. ಇದೆ 15ರಂದು  ಸನ್ನಿ ಡಿಯೋಲ್ ಅವರ ಪ್ರೀತಿಯ ಅರಿಶಿಣ  ಮತ್ತು ಮೆಹೆಂದಿ ಸಮಾರಂಭಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿ ಅನೇಕ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಇದೀಗ ಕರಣ್ ಅವರ ಮೆಹಂದಿ ಮತ್ತು ಹಲ್ದಿ ಸಮಾರಂಭದ ತಂದೆ ಸನ್ನಿ ಡಿಯೋಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಗನ ಪೂರ್ವ ವಿವಾಹ ಸಮಾರಂಭದಲ್ಲಿ ಸನ್ನಿ ಡ್ಯಾನ್ಸ್ ಮಾಡುತ್ತಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ಸನ್ನಿ ಡಿಯೋಲ್ ತನ್ನ ಮಗನ ಅರಿಶಿನ ಸಮಾರಂಭದಲ್ಲಿ ಕಪ್ಪು ಶರ್ಟ್ ಮತ್ತು ಪ್ಯಾಂಟ್ ಧರಿಸಿ  ನೃತ್ಯ ಮಾಡುವುದನ್ನು ವಿಡಿಯೋದಲ್ಲಿ  ಕಾಣಬಹುದು. ಈ ವಿಡಿಯೋದಲ್ಲಿ ಸನ್ನಿ ಡಿಯೋಲ್ 'ನಾಚ್ ಪಂಜಾಬನ್' ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋದಲ್ಲಿ  ಸನ್ನಿ ಡಿಯೋಲ್ ಮಹಿಳೆಯೊಂದಿಗೆ ತನ್ನ ಮಗನ ಸಮಾರಂಭವನ್ನು ಆನಂದಿಸುತ್ತಿದ್ದಾರೆ. ಇನ್‌ಸ್ಟಂಟ್ ಬಾಲಿವುಡ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ವೀಡಿಯೊವನ್ನು ಹಂಚಿಕೊಂಡಿದೆ.

ಸನ್ನಿ ಡಿಯೋಲ್ ಅವರ ಈ ವಿಡಿಯೊಗೆ ಜನರು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ ಮತ್ತು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ’ಇಷ್ಟು ವರ್ಷಗಳ ನಂತರವೂ ಸನ್ನಿ ಡಿಯೋಲ್ ಅವರ ನೃತ್ಯದ ಚಲನೆಗಳು ಒಂದೇ ಆಗಿವೆ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.  ವಯಸ್ಸು ಇಷ್ಟಾದರೂ ಈ ಉತ್ಸಾಹ ನೋಡಿದರೆ ಖುಷಿಯಾಗುತ್ತದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 

Viral Vedio: ಬಾಲಿವುಡ್​ನಲ್ಲಿ ಇನ್ನೊಂದು ಅದ್ಧೂರಿ ಮದ್ವೆ- ಸನ್ನಿ ಡಿಯೋಲ್​ ಮನೆಯ ಸಂಭ್ರಮ ನೋಡಿ

ಅಂದಹಾಗೆ 27 ವರ್ಷದ ಕರಣ್ ಡಿಯೋಲ್  ತಮ್ಮ ಕುಟುಂಬದ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ಬಾಲಿವುಡ್‌ನ ವಿವಿಧ ಯೋಜನೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕರಣ್​ ಕೆಲಸ ಮಾಡುತ್ತಿದ್ದಾರೆ.  'ಪಲ್ ಪಾಲ್ ದಿಲ್ ಕೆ ಪಾಸ್' ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ.   1990ರಲ್ಲಿ ಜನಿಸಿರೋ ಕರಣ್​ ಅವರನ್ನು ಕುಟುಂಬ ಸದಸ್ಯರು ಮತ್ತು ಆಪ್ತರು ಕೂಡ ಅವರನ್ನು ರಾಕಿ ಎಂದು ಕರೆಯುತ್ತಾರೆ . ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಜುಹುವಿನ ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಅವರು, ಸೆಲೆಬ್ರಿಟಿ ಕಿಡ್ (Celebrity Kid) ಆಗಿದ್ದರೂ, ಇತರ ಸ್ಟಾರ್ ಮಕ್ಕಳಿಗಿಂತ ಭಿನ್ನವಾಗಿ ಖಾಸಗಿ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಮದುವೆಯಿಂದಾಗಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಮದುವೆಯ ತಯಾರಿ ಭರ್ಜರಿಯಾಗಿ ನಡೆದಿತ್ತು.  ಸನ್ನಿ ಡಿಯೋಲ್ ಮನೆಯನ್ನು ವೈಭವದಿಂದ ಅಲಂಕರಿಸಲಾಗಿದೆ.   

 ವರದಿಗಳ ಪ್ರಕಾರ ಕರಣ್ ಡಿಯೋಲ್ ಮತ್ತು ದಿಶಾ ಆಚಾರ್ಯ ಜೂನ್  (Disha Acharya) 18 ರಂದು ವಿವಾಹವಾಗಲಿದ್ದಾರೆ. ಅವರ ಮದುವೆಯ ವಿಧಿವಿಧಾನಗಳು ಅಜ್ಜ ಧರ್ಮೇಂದ್ರ ಅವರ ಮನೆಯಿಂದಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕರಣ್ ಮತ್ತು ದಿಶಾ ಮದುವೆಯ ಪ್ರಮುಖ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮದುವೆಯ ನಂತರ, ದಂಪತಿ ಜೂನ್ 18 ರಂದು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಸ್ಟಾರ್ -ಸ್ಟಡ್ ರಿಸೆಪ್ಶನ್ ಪಾರ್ಟಿಯನ್ನು ಆಯೋಜಿಸಲಿದ್ದಾರೆ. ಇನ್ನು ದಿಶಾ ಅವರು,  ಚಲನಚಿತ್ರ ನಿರ್ಮಾಪಕ ಬಿಮಲ್ ರಾಯ್ ಅವರ ಮೊಮ್ಮಗಳು ಮತ್ತು ಅವರು ಪ್ರಸ್ತುತ ದುಬೈನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದಾರೆ.

ಶಾರುಖ್​ ಖಾನ್​ ಚಿತ್ರದ ರೆಕಾರ್ಡ್​ ಬ್ರೇಕ್​ ಮಾಡಿದ ಸನ್ನಿ ಡಿಯೋಲ್​ 'ಗದರ್'​!

 

Latest Videos
Follow Us:
Download App:
  • android
  • ios