ಫಸ್ಟ್ ಲೇಡಿ ಸೂಪರ್ ಸ್ಟಾರ್ ಜನ್ಮ ದಿನದ ನೆನಪು..! ಶ್ರೀದೇವಿ ಬಗ್ಗೆ ನೀವರಿಯದ ಸಂಗತಿಗಳಿವು
ಬಾಲಿವುಡ್‌ನ ಮೊದಲ ಸೂಪರ್ ಸ್ಟಾರ್ ಶ್ರೀದೇವಿ ಜನ್ಮ ದಿನ ಇಂದು. ನಟಿ ನಿಧನರಾದರೂ ಆಕೆ ಉಳಿಸಿ ಹೋದ ನೆನಪುಗಳು, ಮತ್ತು ಅದ್ಭುತ ಸಿನಿಮಾಗಳು ಸಿನಿಪ್ರಿಯರ ಮನದಲ್ಲಿ ಸದಾ ಹಸಿರು. ಬಾಲಿವುಡ್ ಆಳಿದ ಸೌತ್ ಇಂಡಿಯನ್ ನಟಿ ಶ್ರೀದೇವಿ ಬಗ್ಗೆ ಇಲ್ಲಿವೆ ನೀವರಿಯದ ವಿಷಯಗಳು
ಬಾಲಿವುಡ್ ಫಸ್ಟ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ದಕ್ಷಿಣ ಭಾರತದಿಂದ ಹೋಗಿ ಬಾಲಿವುಡ್ ಆಳಿದ ದಿಟ್ಟ ಕಲಾವಿದೆ.
1963 ಆಗಸ್ಟ್ 13ರಂದು ಶ್ರೀದೇವಿ ಜನಿಸಿದ್ದರು. ಇವರ ಪೂರ್ತಿ ಹೆಸರು ಶ್ರೀ ಅಮ್ಮಯ್ಯಂಗಾರ್ ಅಯ್ಯಪ್ಪನ್
4ನೇ ವರ್ಷಕ್ಕೇ ನಟನಾ ಲೋಕಕ್ಕೆ ಕಾಲಿಟ್ಟಿದ್ದರು ಶ್ರೀದೇವಿ.
ತಿರುಮುಗಂ ಅವರ ತುನೈವನ್(1969) ಶ್ರೀದೇವಿ ಅವರ ಮೊದಲ ಸಿನಿಮಾ
ಮೂಂಡ್ರು ಮುಡಿಚು (1976) ಸಿನಿಮಾದಲ್ಲಿ ಶ್ರೀದೇವಿ ಸೂಪರ್ ಸ್ಟಾರ್ ರಜನೀಕಾಂತ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದರು.
ಹಲವು ಸಿನಿಮಾಗಳಲ್ಲಿ ನಟಿ ರೇಖಾ ಶ್ರೀದೇವಿಗಾಗಿ ಡಬ್ ಮಾಡಿದ್ದರು.
ನಾ ಜಾನೇ ಕಹಾ ಸೇ ಆಯಿ ಹೇ ಹಾಡಿನ ಚಿತ್ರೀಕರಣದ ಸಂದರ್ಭ ಶ್ರೀದೇವಿಗೆ 103 ಡಿಗ್ರಿ ಜ್ವರವಿತ್ತು. ಜ್ವರವಿದ್ದರೂ ಶೂಟಿಂಗ್ ಮಾಡಿದ್ದರು ನಟಿ
50 ವರ್ಷಗಳ ಕಾಲ ಸಿನಿಮಾ ಲೋಕದಲ್ಲಿ ದುಡಿದ ನಟಿ 300 ಸಿನಿಮಾಗಳಲ್ಲಿ ನಟಿಸಿದ್ದಾರೆ.
1985ರಿಂದ 1992ರ ತನಕ ಶ್ರೀದೇವಿ ಹೈಯೆಸ್ಟ್ ಪೇಯ್ಡ್ ನಟಿಯಾಗಿದ್ದರು.
ಸ್ಟೀವನ್ ಸ್ಪ್ಲೆಲ್‌ಬರ್ಗ್ ಅವರ ಜುರಾಸಿಕ್ ಪಾರ್ಕ್ ಸಿನಿಮಾವನ್ನು ಸಿನಿಮಾವನ್ನೇ ಶ್ರೀದೇವಿ ರಿತಸ್ಕರಿಸಿದ್ದರು.
2018 ಫೆಬ್ರವರಿ 24ರಂದು ಶ್ರೀದೇವಿ ದುಬೈನ ಜುಮೈರಾ ಎಮಿರೇಟ್ಸ್ ಟವರ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.