ಶಾರುಕ್ ಖಾನ್ ಹಾಗೂ ಗೌರಿ ಖಾನ್‌ರ ಪ್ರೀತಿಯ ಕಂದ ಅಬ್ರಾಮ್, ಅವರಿಬ್ಬರಿಗೂ ಸರೊಗೆಸಿ (ಬಾಡಿಗೆ ಗರ್ಭ) ಯಿಂದ ಹುಟ್ಟಿದ ಮಗ. ಮೇ 27ಕ್ಕೆ ಅವನ ‌ ಬರ್ತ್‌ಡೇ.

ಲಾಕ್‌ಡೌನ್ ಮತ್ತು ಕೋವಿಡ್ ಪರಿಹಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಶಾರುಕ್, ಮಗನ ಬರ್ತ್‌ಡೇಯನ್ನು ಸಿಂಪಲ್ ಆಗಿ ಮಾಡುವ ಆಲೋಚನೆಯಲ್ಲಿದ್ದಾರೆ.

ಬೇರೆ ಯಾವ ಸೆಲೆಬ್ರಿಟಿ ಮಗುವಿನ ಬಗೆಗೂ ಇಲ್ಲದಷ್ಟು ರೂಮರ್‌ಗಳು, ಗಾಸಿಪ್‌ಗಳು ಅಬ್ರಾಮ್ ಬಗ್ಗೆ ಹರಡಿಕೊಂಡಿವೆ. ಅದಕ್ಕೆ ಆತ ಸರೊಗೆಸಿ ಮಗು ಎಂಬುದೂ ಒಂದು ಕಾರಣ. ಈಗಾಗ್ಲೇ ಇಬ್ರು ಮಕ್ಕಳು ಇರೋ ಶಾರುಕ್ ಇನ್ನೊಂದು ಮಗು ಮಾಡೋಕೆ ಸರೊಗೆಸಿ ಮೊರೆ ಯಾಕೆ ಹೋದ್ರು? ಹಾಗಾಗಿ ಈತ ನಿಜಕ್ಕೂ ಅವರ ಮಗು ಇರಲಿಕ್ಕಿಲ್ಲ. ಇದ್ರೂ ಬಹುಶಃ ಗೌರಿ ಖಾನ್ ಅಥವಾ ಶಾರುಕ್ ಇಬ್ರಲ್ಲಿ ಯಾರೋ ಒಬ್ಬರ ಮಗು ಇರಬೇಕು, ತಂದೆ ಅಥವಾ ತಾಯಿ ಬೇರ್ಯಾರೋ ಇರಬೇಕು ಎಂಬುದು ಒಂದು ರೂಮರ್.
 

ಮಲತಾಯಿ ಕೊಟ್ಟ ಸೀರೇಲಿ ಆಮೀರ್ ಮಗಳು ಈರಾ
 

ಆದರೆ ಇದು ಸುಳ್ಳು. ಬಾಡಿಗೆ ಗರ್ಭ ಮಾಡಲು ಕಾರಣ ಇನ್ನೊಮ್ಮೆ ಗರ್ಭ ಹೊರುವ ಶಕ್ತಿ ಸಾಮರ್ಥ್ಯ ಗೌರಿಯಲ್ಲಿ ಇಲ್ಲದಿದ್ದುದೇ. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ದೊಡ್ಡ ಮಗ ಆರ್ಯನ್ ಹಾಗೂ ಎರಡನೆಯ ಮಗಳು ಸುಹಾನಾಳನ್ನು ಗೌರಿ ಹೊತ್ತು ಹೆತ್ತಿದ್ದರು. ಇವರಿಬ್ಬರೂ  ದೊಡ್ದವರಾದ  ಬಳಿಕ ಇನ್ನೊಂದು ಮಗು ಬೇಕು ಎಂದು ದಂಪತಿಗೆ ಆಸೆಯಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಇಬ್ಬರಿಗೂ ನಲುವತ್ತೈದು ವರ್ಷಕ್ಕಿಂತ ಹೆಚ್ಚು ಪ್ರಾಯ ಆಗಿತ್ತು. ಈ ವಯಸ್ಸಿನಲ್ಲಿ ಗರ್ಭ ಧರಿಸುವುದು ಡೇಂಜರ್ ಅಂತ ವೈದ್ಯರು ಹೇಳಿದರು. ಹೀಗಾಗಿ ಸರೊಗೆಸಿ ಮೊರೆ ಹೋದರು. ಶಾರುಕ್‌ನ ವೀರ್ಯ, ಗೌರಿಯ ಅಂಡ ಸೇರಿಸಿ ಫಲಿತಗೊಳಿಸಲಾಯಿತು. ಹೊತ್ತ ತಾಯಿ ಯಾರೆಂಬುದು ಇಂದಿಗೂ ಗುಪ್ತ. ಕೆಲವರು ಗೌರಿಯ ಸೋದರಿ ಎಂದೂ ಹೇಳುತ್ತಾರೆ.

 

ಸ್ಯಾಂಡಲ್‌ವುಡ್‌ಗೆ ನಿಜವಾದ ಬಾಸ್ ಯಾರು? 

 

ಇನ್ನೊಂದು ರೂಮರ್ ಅಂದ್ರೆ, ಅಬ್ರಾಮ್, ಶಾರುಕ್‌ನ ಮೊದಲ ಮಗ ಆರ್ಯನ್‌ನ ಪುತ್ರ ಅನ್ನುವುದು. ಆರ್ಯನ್ ಹಾಗೂ ಆತನ ರೊಮೇನಿಯನ್ ಗರ್ಲ್‌ಫ್ರೆಂಡ್ ಸೇರಿ ಮಾಡಿಕೊಂಡ ಅವಸರದ ಫಲ ಈತ. ಆತನನ್ನು ಶಾರುಕ್ ಸಾಕಿಕೊಂಡಿದ್ದಾರೆ ಅಂತಲೂ ಹೇಳುವವರು ಇದ್ದಾರೆ. ಈ ಮಾತು ಶಾರುಕ್‌ನನ್ನೂ ಘಾಸಿ ಮಾಡಿದೆ. ಒಂದು ಟೆಡ್ ಟಾಕ್ ಸಂದರ್ಭದಲ್ಲಿ ಆತ ಇದನ್ನು ಅಲ್ಲಗಳೆದು, ತಾನು ಸೆಲೆಬ್ರಿಟಿ ಅನ್ನುವ ಮಾತ್ರಕ್ಕೇ ಏನು ಬೇಕಾದಾರೂ ಮಾತಾಡ್ತಾರಲ್ಲ ಎಂದು ನೊಂದುಕೊಂಡಿದ್ದರು. ಅಂದಹಾಗೆ ಅಬ್ರಾಮ್ ಹುಟ್ಟಿದಾಗ ಆರ್ಯನ್‌ಗೆ ಹದಿನಾರು ವರ್ಷ, ಸುಹಾನಾಗೆ ಹದಿಮೂರು. ಮದುವೆಯಾಗಿ ಆರು ವರ್ಷದಲ್ಲಿ ಮೊದಲ ಮಗು. ಮದುವೆಯಾಗಿ ಇಪ್ಪತ್ತೆರಡು ವರ್ಷದ ಬಳಿಕ ಮೂರನೇ ಮಗು!

ಈ ವಯಸ್ಸಿನಲ್ಲಿ ಗೌರಿಗೆ ಮಗು ಬೇಕೆನಿಸಿದ್ದೇಕೆ ಅನ್ನುವುದಕ್ಕೂ ಒಂದು ಗಾಸಿಪ್ ಇದೆ. ಆಗ ಡಾನ್ ಚಿತ್ರೀಕರಣ ನಡೆಯುತ್ತಿತ್ತು. ಶಾರುಕ್‌ ಹೀರೋ, ಪ್ರಿಯಾಂಕ ಚೋಪ್ರಾ ಹಿರೋಯಿನ್. ಇಬ್ಬರಲ್ಲೂ ಕುಚ್‌ಕುಚ್ ನಡೆಯುತ್ತಿರುವುದು ಗೌರಿ ಗಮನಕ್ಕೆ ಬಂತು. ಶಾರುಕ್‌ನನ್ನು ಉಳಿಸಿಕೊಳ್ಳಲು, ಫ್ಯಾಮಿಲಿ ಬಾಂಡಿಂಗ್ ಗಟ್ಟಿ ಮಾಡಿಕೊಳ್ಳೋಕೆ ಗೌರಿ ಇನ್ನೊಂದು ಮಗು ಮಾಡುವ ಐಡಿಯಾ ಮಾಡಿದರು ಅಂತ್ಲೂ ರೂಮಲ್ ಮಿಲ್ಲುಗಳು ಕತೆ ಹುಟ್ಟಿಸಿವೆ.

 

ಅರ್ಜುನ್‌ ಮಲೈಕಾ ಸಂಬಂಧಕ್ಕೆ ಜೈ ಎಂದ್ರಾ ಚಿಕ್ಕಪ್ಪ ಅನಿಲ್‌ ಕಪೂರ್‌?

 

ಅಬ್ರಾಮ್ ಎಂಬ ಹೆಸರಿನ ಬಗ್ಗೆ ಚಂದದ ವಿವರಣೆ ಇದೆ. ಇದರ ಬಗ್ಗೆ ತಂದೆ ಶಾರುಕನೇ ಒಮ್ಮೆ ಹೇಳಿದ್ದ. ಇದು ಶಾರುಕ್- ಗೌರಿಯರ ಅಂತರ್ಧರ್ಮೀಯ ದಾಂಪತ್ಯದ ಫಲ. ಅಬ್ರಾಮ್‌ನ ಹೆಸರಿನ ಮೊದಲರ್ಧ ಇಸ್ಲಾಂನ ಸಂತ ಹಜರತ್ ಅಬ್ರಾಹಂ ಅವರದ್ದು. ಉತ್ತರಾರ್ಧ ಹಿಂದೂ ಪುರಾಣ ಪುರುಷ ಶ್ರೀರಾಮನದ್ದು.


ಮಲಗುವಾಗ ಇವರ ಪೋಸ್ಟರ್‌ಗೆ ಡಿಪ್ಪಿ ಕಿಸ್ ಮಾಡ್ತಾರಂತೆ!

 

ಅಬ್ರಾಮ್ ಬಗ್ಗೆ ಗಾಸಿಪ್ ಮಾಡುವ, ಅವನನ್ನು ಗ್ಲಾಮರ್ ಜಗತ್ತಿಗೆ ಎಳೆದು ತರಲು ಯತ್ನಿಸ್ತಾ ಇರುವ ಮೀಡಿಯಾಗಳ ಬಗ್ಗೆ ಶಾರುಕ್‌ಗೆ ಸಿಟ್ಟಿದೆ. ಉಳಿದಿಬ್ಬರು ಮಕ್ಳಿಗೆ ವಯಸ್ಸಾಗಿದೆ. ಅವರ ಮೇಲೆ ಕ್ಯಾಮೆರಾ ಲೈಟ್ ಹಾಕಿ, ಪರವಾಗಿಲ್ಲ. ಆದ್ರೆ ಅಬ್ರಾಮ್ ಇನ್ನೂ ಎಳೇ ಕೂಸು. ಅವನ ಮೇಲೆ ನಿಮ್ಮ ರೂಮರ್‌ಗಳ ದಾಳಿ ಮಾಡಬೇಡಿ. ಈ ಸೆಲೆಬ್ರಿಟಿ ಲೈಫಿನ ಸರ್ಕಸ್ ನನಗೇ ಇರಲಿ ಸಾಕು ಎಂಬುದು ಶಾರುಕ್ ಉವಾಚ.