Asianet Suvarna News Asianet Suvarna News

ಕರೀನಾ ಹೆಸರಿನ ಟ್ಯಾಟೂ ಅಳಿಸಿ ಹಾಕಿದ ಸೈಫ್​! ಮೂರನೇ ಮದ್ವೆಗೆ ರೆಡಿನಾ ಕೇಳ್ತಿದ್ದಾರೆ ನೆಟ್ಟಿಗರು...

ಅಮೃತಾ ಸಿಂಗ್​, ಕರೀನಾ ಕಪೂರ್​ ಬಳಿಕ ಮೂರನೇ ಮದ್ವೆಗೆ ರೆಡಿಯಾದ್ರಾ ಸೈಫ್​ ಅಲಿ ಖಾನ್​? ಕರೀನಾ ಟ್ಯಾಟೂ ಅಳಿಸಿಕೊಂಡ ನಟನಿಗೆ ನೂರೆಂಟು ಪ್ರಶ್ನೆ. ನಿಜವಾಗಿ ಆಗಿದ್ದೇನು? 

Why did Saif Ali Khan cover up his Kareena tattoo Fans wonder if there is next marriage on the way suc
Author
First Published May 15, 2024, 12:55 PM IST

ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

ಇದೀಗ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ನಡುವೆ ಭಾರಿ ಬಿರುಕು ಬಿಟ್ಟಿದೆ ಎಂಬ ಸಂಶಯ ಕಾಡುತ್ತಿದೆ. ಇದು ಭಾರಿ ಮಟ್ಟದಲ್ಲಿ ಚರ್ಚೆಯೂ ಆಗುತ್ತಿದೆ. ಇದಕ್ಕೆ ಕಾರಣ, ಸೈಫ್​ ಅಲಿ ಖಾನ್​ ಅವರು ಇಷ್ಟುದಿನ ತಮ್ಮ ಕೈ ಮೇಲೆ ಕರೀನಾ ಕಪೂರ್​ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನು ಅಳಸಿ ಹಾಕಿದ್ದಾರೆ. ಅದರ ಜಾಗದಲ್ಲಿ ತ್ರಿಶೂಲದ ಟ್ಯಾಟೂ ಕಾಣಿಸಿಕೊಂಡಿದೆ. ಇದಕ್ಕೆ ಸಕತ್​ ಟ್ರೋಲ್​ ಆಗುತ್ತಿದ್ದು, ಕರೀನಾ ಕಪೂರ್​ ಸಹವಾಸ ಸಾಕಾಗಿ, ಮತ್ತೊಂದು ಮದ್ವೆ ಆಗಲು ಹೊರಟ್ರಾ ಸೈಫ್​ ಅಲಿ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದು ಅವರ ಮುಂಬರುವ ಚಿತ್ರದ ಪ್ರಚಾರ ಇರಬಹುದು ಎಂದು ಹೇಳುತ್ತಿದ್ದರೂ, ಈ ಬಗ್ಗೆ ನಟನಿಂದ ಸ್ಪಷ್ಟನೆ ಬರಬೇಕಿದೆ. ಅಂದಹಾಗೆ, ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​.   

ಲವ್​ ಜಿಹಾದ್​ ಎಂದೇ ಇವರ ಮದುವೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಸೈಫ್​ ಅಲಿ ಖಾನ್​, ನಾನು ಎಲ್ಲ ಧರ್ಮವನ್ನೂ ಪಾಲಿಸುವವ. ಕರೀನಾ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇನೆ. ಯಾವುದೇ  ಕಾರಣಕ್ಕೂ ಆಕೆಯ ಮತಾಂತರಕ್ಕೆ ನಾನು ಬಲವಂತಗೊಳಿಸಲಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಮೆಂಟ್​ ಹಾಕಿರುವ ನೆಟ್ಟಿಗರು, ಎಲ್ಲವೂ ಸರಿ, ಹಿಂದೂಗಳನ್ನು ಮದ್ವೆಯಾಗಿರುವ ಖಾನ್​ ನಟರು ತಮ್ಮ ಹಿಂದೂ ಧರ್ಮದ ಬಗ್ಗೆ ಇಷ್ಟೆಲ್ಲಾ ಎದುರುಗಡೆ ಮಾತನಾಡುವವರು ಮಕ್ಕಳಿಗೆ ಮಾತ್ರ ಖಾನ್​ ಎನ್ನುವುದನ್ನು ಇಡಲು ಮರೆಯುವುದಿಲ್ಲ, ಭೇಷ್​ ಭೇಷ್​ ಎನ್ನುತ್ತಿದ್ದಾರೆ.
 

ರಾಖಿ ಸಾವಂತ್​ ಹೃದಯಕ್ಕೆ ಏಕಾಏಕಿ ಇದೇನಾಯ್ತು? ಆಸ್ಪತ್ರೆಗೆ ದಾಖಲಾದ ನಟಿಯ ನೋಡಿ ಫ್ಯಾನ್ಸ್​ ಶಾಕ್​!

Latest Videos
Follow Us:
Download App:
  • android
  • ios