ಬ್ರಾಡ್ ಪಿಟ್ ಜೊತೆಗೆ ಟ್ರಾಯ್ ಎಂಬ ದೊಡ್ಡ ಹಾಲಿವುಡ್‌ ಚಿತ್ರದಲ್ಲಿ ನಟಿಸುವ ಚಾನ್ಸ್ ದೊರೆತರೂ ಐಶ್ವರ್ಯಾ ರೈ ನಿರಾಕರಿಸಿದ್ದು ಏಕೆ ಗೊತ್ತೆ?

ಬಾಲಿವುಡ್‌ನ ಸೆನ್ಸೇಷನಲ್ ನಟಿ ಐಶ್ವರ್ಯಾ ರೈ ಬಚ್ಚನ್, ಒಂದು ಹಂತದಲ್ಲಿ ಹಾಲಿವುಡ್‌ ಅತಿ ದೊಡ್ಡ ನಟ ಬ್ರಾಡ್ ಪಿಟ್ ಜೊತೆಗೆ ನಟಿಸೋಕೆ ಒಪ್ಪಲಿಲ್ಲವಂತೆ. ಅದು ಟ್ರಾಯ್ ಚಿತ್ರದ ಆಫರ್‌ ಅನ್ನು ಆಕೆ ತಿರಸ್ಕರಿಸಿದಾಗ. ಇದು ನಡೆದದ್ದು ಯಾಕೆ ಮತ್ತು ಹೇಗೆ?

ಭಾರತದ ಫೇಸ್ ನಟಿ ಐಶ್ವರ್ಯ ರೈ, ಹಾಲಿವುಡ್‌ನಲ್ಲೂ ಅನೇಕ ಫಿಲಂಗಳಲ್ಲಿ ನಟಿಸಿರುವುದು ನಿಮಗೆ ಗೊತ್ತು. ಆದರೆ ಹಾಲಿವುಡ್‌ನ ಅತಿ ದೊಡ್ಡ ಪ್ರೊಡಕ್ಷನ್ ಹೌಸ್‌ನಿಂದ ಆಕೆಗೆ ಟ್ರಾಯ್ ಫಿಲಂನಲ್ಲಿ ನಟಿಸುವಂತೆ ಆಫರ್ ಬಂತು. ಅದರಲ್ಲಿ ಬ್ರಾಡ್ ಪಿಟ್ ಹೀರೋ. ಆದರೆ ಆಕೆ ತಾನು ನಟಿಸೋಲ್ಲ ಎಂದಳು. ಅದಕ್ಕೆ ಕಾರಣ ಬಾಲಿವುಡ್‌ನಲ್ಲಿ ಅಕೆಯ ಬಿಗಿಯಾದ ಶಡ್ಯೂಲ್. ಆ ಸಂದರ್ಭದಲ್ಲಿ ಆಕೆ ಎಷ್ಟು ಪ್ಯಾಕ್ ಆಗಿದ್ದಳೆಂದರೆ. ಅತ್ತಿತ್ತ ತಿರುಗಿ ನೋಡೋಕೂ ಆಕೆಗೆ ಪುರುಸೊತ್ತು ಇರಲಿಲ್ಲ. ಹತ್ತಾರು ಫಿಲಂಗಳು ಆಕೆ ಕಾಲ್‌ಶೀಟ್‌ ಪಡೆದಿದ್ದವು. ಅದನ್ನೇ ತನಗೆ ಮ್ಯಾನೇಜ್ ಮಾಡಲು ಸಾಧ್ಯವಾ ಇಲ್ಲವಾ ಅನ್ನುವ ಕನ್‌ಫ್ಯೂಶನ್ ಆಕೆಯಲ್ಲಿತ್ತು. ಇಂಥ ಹೊತ್ತಿನಲ್ಲಿ ಹಾಲಿವುಡ್‌ಗೆ ಸಮಯ ಕೊಡೋಕೆ ಆಕೆಗೆ ಸಾಧ್ಯವೇ ಇರಲಿಲ್ಲ.

ವೂಲ್ಫ್‌ಗ್ಯಾಂಗ್ ಪೀಟರ್ಸನ್ ನಿರ್ದೇಶನದ ಟ್ರಾಯ್ ಚಿತ್ರದಲ್ಲಿ ಆಕೆ ಬ್ರೈಸೀಸ್ ಪಾತ್ರ ಮಾಡಬೇಕಾಗಿತ್ತು. ಎರಿಕ್ ಬನಾ, ಆರ್ಲಾಂಡೋ ಬ್ಲೂಮ್, ಡಯಾನಾ ಕ್ರುಗರ್ ಮುಂತಾದವರೆಲ್ಲ ಅದರ ಪಾತ್ರವರ್ಗದಲ್ಲಿದ್ದರು. ಐಶ್ ನಿರಾಕರಿಸಿದ ಬಳಿಕ ಆ ಪಾತ್ರ ರೋಸ್ ಬೈರ್ನ್ ಪಾಲಾಯಿತು.

ಅಭಿಷೇಕ್ ಎಲ್ಲೂ ಸಲ್ಲದ ನಟ, ಚಂದದ ಹೆಂಡ್ತಿ ಇದ್ದಾಳಷ್ಟೆ ಎಂದ ನೆಟ್ಟಿಗ ...

ಐಶ್‌ ಜೊತೆ ನಟಿಸಲು ಸ್ವತಃ ಬ್ರಾಡ್ ಪಿಟ್‌ ಕೂಡ ಕುತೂಹಲ, ನಂತರ ಆಕೆ ಬರುವುದಿಲ್ಲ ಎಂದು ಗೊತ್ತಾದಾಗ ನಿರಾಸೆ ವ್ಯಕ್ತಪಡಿಸಿದ್ದನಂತೆ. 'ನಟಿಸುವ ಅವಕಾಶ ಸಿಕ್ಕಿದರೆ, ಐಶ್ವರ್ಯ ಜೊತೆ ನಟಿಸೋಕೆ ನನಗೆ ತುಂಬಾ ಆಸಕ್ತಿಯಿದೆ. ಆಕೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದಾಳೆ. ಆಕೆ ಬಾಲಿವುಡ್‌ನ ಖ್ಯಾತಿ ನಟಿ ಹಾಗೂ ಆಕೆ ಪಶ್ಚಿಮದಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾಳೆ. ಆಕೆಯ ಸ್ಟೈಲ್, ಸೌಂದರ್ಯ ಮತ್ತು ಅಭಿನಯಕ್ಕೆ ಹೆಸರಾಗಿದ್ದಾಳೆ. ಟ್ರಾಯ್‌ ಆಕೆಯನ್ನು ಮಿಸ್ ಮಾಡಿಕೊಂಡಿದೆ,' ಎಂದು ಹೇಳಿದ್ದ ಬ್ರಾಡ್.

ಬಾಲಿವುಡ್‌ನಲ್ಲಿನ ಆಕ್ಟಿಂಗ್ ಶೆಡ್ಯೂಲ್‌ಗೂ ಹಾಲಿವುಡ್‌ನ ಆಕ್ಟಿಂಗ್ ಶೆಡ್ಯೂಲ್‌ಗೂ ತುಂಬಾ ಅಂತರವಿದೆ. ಅದನ್ನು ಐಶ್ವರ್ಯ ರೈ ಹೇಳುತ್ತಾಳೆ. ಆಕೆಗೆ ವಿಸ್ಮಯಕಾರಿ ಅನಿಸಿದ್ದು ಲಾಕಿಂಗ್ ಆಫ್ ಪಿರಿಯೆಡ್. ಹಾಲಿವುಡ್‌ನಲ್ಲಿ ಒಂದು ಪಾತ್ರ ಒಪ್ಪಿಕೊಂಡರೆ, ಆ ಅವಧಿಯಲ್ಲಿ ಇನ್ಯಾವ ಫಿಲಂನಲ್ಲೂ ನಟಿಸುವಂತಿಲ್ಲ. ಹತ್ತು ತಿಂಗಳೋ, ಒಂದು ವರ್ಷವೋ, ಎರಡು ವರ್ಷವೋ- ಹೀಗೆ ಅಷ್ಟು ಅವಧಿಯಲ್ಲಿ ಲಾಕ್ ಮಾಡಿಕೊಂಡು ಬಿಡಬೇಕು. ಆ ಪಾತ್ರ ಸಂಪೂರ್ಣ ಮುಗಿದ ಬಳಿಕವೇ ಬೇರೆ ಪಾತ್ರಗಳಲ್ಲಿ ನಟಿಸಲು ಶುರು ಮಾಡಬಹುದು. ಒಂದು ಪಾತ್ರವನ್ನು ಆ ನಟ ಅಥವಾ ನಟಿ ಜೀವಿಸಬೇಕು. ಆದರೆ ಬಾಲಿವುಡ್‌ನಲ್ಲಿ ಹಾಗಲ್ಲ. ಏಕಕಾಲಕ್ಕೆ ಹತ್ತಾರು ಪಾತ್ರಗಳಲ್ಲಿ ನಟಿಸಲು ಒಪ್ಪಿಕೊಂಡುಬಿಡಬಹುದು. ಹೀರೋ ಅಥವಾ ಹೀರೋಯಿನ್‌ನ ಸಮಯದ ಲಭ್ಯತೆಯ ಮೇಲೆ ಇಲ್ಲಿನ ಶೂಟಿಂಗ್ ಶೆಡ್ಯೂಲ್‌ಗಳು ನಿರ್ಧಾರವಾಗುತ್ತವೆ. ನಟ ಅಥವಾ ನಟಯರು ತಮ್ಮ ಕಾಲ್‌ ಶೀಟ್ ಕೊಡುತ್ತಾರೆ. ಒಂದೇ ದಿನ ಅವರು ಎರಡು ಬೇರೆ ಬೇರೆ ಫಿಲಂಗಳಲ್ಲಿ ನಟಿಸಬಹುದು. ಹಾಲಿವುಡ್‌ನಲ್ಲಿ ಶೂಟಿಂಗ್ ಶೆಡ್ಯೂಲನ್ನು ಪ್ರೊಡಕ್ಷನ್ ಕಂಪನಿಗಳೇ ನಿರ್ಧರಿಸುತ್ತವೆ.

ಶ್ರೀಲಂಕಾದ ನಿರೋಶನ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ರಾ ಐಶ್ವರ್ಯಾ ರೈ? ...

ಐಶ್‌ಗೆ ಇದು ಚೆನ್ನಾಗಿಯೇ ಗೊತ್ತು. ಆಕೆ ಹಾಲಿವುಡ್‌ನ ಪ್ರೈಡ್ ಆಂಡ್ ಪ್ರಿಜುಡೀಸ್‌ ಫಿಲಂನಲ್ಲಿ ನಟಿಸಿದ್ದರಿಂದ ಈ ನಿಯಮಾವಳಿಗಳು ಆಕೆಗೆ ಗೊತ್ತಿದ್ದವು. ಇದನ್ನು ಒಪ್ಪಿಕೊಂಡರೆ ಬಾಲಿವುಡ್‌ನ ಯಾವುದೇ ಫಿಲಂನಲ್ಲಿ ನಟಿಸುವುದು ಅಸಾಧ್ಯವಾಗಿಬಿಡುತ್ತದೆ. ಆ ಸಮಯದಲ್ಲಿ ಆಕೆ ಬಾಲಿವುಡ್‌ನ ಬಹು ಬೇಡಿಕೆಯ ತಾರೆ ಆಗಿದ್ದಳು. ಹೀಗಾಗಿಯೇ ಒಪ್ಪಿಕೊಳ್ಳಲಿಲ್ಲ.

ಹಾಲಿವುಡ್‌ನಲ್ಲಿ ಐಶ್‌ ಪ್ರೈಡ್ ಆಂಡ್ ಪ್ರಿಜುಡೀಸ್, ದಿ ಮಿಸ್ಟ್ರೆಸ್ ಆಫ್ ಸ್ಪೈಸಸ್, ದಿ ಲಾಸ್ಟ್ ಲೀಜನ್ ಹಾಗೂ ದಿ ಪಿಂಕ್ ಪ್ಯಾಂಥರ್-2 ಫಿಲಂಗಳಲ್ಲಿ ನಟಿಸಿದ್ದಾರೆ. 2018ರ ಫ್ಯಾನಿ ಖಾನ್‌ ಫಿಲಂನಲ್ಲಿ ನಟಿಸಿದ್ದೇ ಕೊನೆ. ಸದ್ಯ ಮಣಿರತ್ನಂನ ಪೊನ್ನಿಯಿನ್ ಸೆಲ್ವನ್ ಫಿಲಂನಲ್ಲಿ ನಟಿಸುತ್ತಿದ್ದಾಳೆ.

ಮಾಧುರಿ -ಐಶ್ವರ್ಯಾ: ಹೇಗೆ ಕಾಣುತ್ತಾರೆ ನೋಡಿ ಬಾಲಿವುಡ್‌ ನಟಿಯರು ಮೇಕಪ್‌ ಇಲ್ಲದೆ! ...