ವಿಶ್ವ ಸುಂದರಿಯನ್ನೇ ಮದುವೆ ಆದ್ರೂ ಬೇರೊಂದು ಹೆಣ್ಣಿನ ಮೇಲ್ಯಾಕೆ ಕಣ್ಣು?

ಅಭಿಷೇಕ್‌ ಬಚ್ಚನ್‌ ಬಾಳಿನಲ್ಲಿ ಬಂದಿರುವ ಆ ಬೇರೊಬ್ಬ ಹೆಣ್ಣು ಯಾರಾಕೆ? ವಿಶ್ವ ಸುಂದರಿಯನ್ನೇ ಮದುವೆಯಾದರೂ ಬೇರೊಂದು ಹೆಣ್ಣಿನ ಮೇಲೆ ಆತನಿಗ್ಯಾಕೆ ಕಣ್ಣು? ಇಂಥ ಪ್ರಶ್ನೆಗಳು ಬಾಲಿವುಡ್‌ ಕುತೂಹಲಿಗರ ಮನಸ್ಸಿನಲ್ಲಿ ಮೂಡುತ್ತಲೇ ಇವೆ. 

Why Abhishek Bachchan looking in to NimratKaur When miss universe Aishwarya rai is his wife bni


ಅಭಿಷೇಕ್‌ ಬಚ್ಚನ್‌- ಐಶ್ವರ್ಯಾ ರೈ ನಡುವೆ ಎಲ್ಲಾ ಸರಿ ಇಲ್ಲ ಎಂಬ ಗಾಸಿಪ್‌ಗಳು ದಿನೇದಿನೇ ದಟ್ಟವಾಗುತ್ತಿವೆ.  ಇದರ ನಡುವೆಯೇ ಮಂಗಳವಾರ ಒಂದು ಬರ್ತ್‌ಡೇ ಪಾರ್ಟಿ. ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಮತ್ತು ತಾಯಿ ಬೃಂದಾ ರೈ ಅವರೊಂದಿಗೆ ತಮ್ಮ ಫ್ಯಾಮಿಲಿಯ ಒಬ್ಬರ ಆತ್ಮೀಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಆದರೆ ಅದರಲ್ಲಿ ಅಭಿಷೇಕ್‌ ಬಚ್ಚನ್‌ ಇರಲಿಲ್ಲ. ಅದೇ ದಿನ ಅಭಿಷೇಕ್ ಬಚ್ಚನ್ ʼಹೌಸ್‌ಫುಲ್ 5ʼ ಶೂಟಿಂಗ್‌ ಮುಗಿಸಿ ಮುಂಬೈಗೆ ಮರಳುವಾಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿ ಐಶ್ವರ್ಯ ರೈ ಇರಲಿಲ್ಲ. ಎರಡೂ ಕಾಕತಾಳೀಯ ಇರಬಹುದು. ಆದರೆ ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯ ಬೇರೆಯಾಗಲಿದ್ದಾರೆ ಎಂಬ ರೂಮರ್‌ಗಳ ನಡುವೆಯೇ ಇದು ನಡೆದಿರುವುದರಿಂದ ಹೆಚ್ಚು ಸುದ್ದಿಯಾಗಿದೆ. 

ಇಷ್ಟಕ್ಕೂ ಯಾಕೀ ಸುದ್ದಿ? ಅಭಿಷೇಕ್‌ ಬಚ್ಚನ್‌ ಬಾಳಿನಲ್ಲಿ ಬಂದಿರುವ ಆ ಬೇರೊಬ್ಬ ಹೆಣ್ಣು ಯಾರಾಕೆ? ವಿಶ್ವ ಸುಂದರಿಯನ್ನೇ ಮದುವೆಯಾದರೂ ಬೇರೊಂದು ಹೆಣ್ಣಿನ ಮೇಲೆ ಆತನಿಗ್ಯಾಕೆ ಕಣ್ಣು? ಇಂಥ ಪ್ರಶ್ನೆಗಳು ಬಾಲಿವುಡ್‌ ಕುತೂಹಲಿಗರ ಮನಸ್ಸಿನಲ್ಲಿ ಮೂಡುತ್ತಲೇ ಇವೆ. 

ಆಕೆಯ ಹೆಸರು ನಿಮ್ರತ್‌ ಕೌರ್.‌ ಚಿತ್ರರಂಗಕ್ಕೆ ಹೊಸಬಳೇನಲ್ಲ. ನೀವು ʼಲಂಚ್‌ ಬಾಕ್ಸ್‌ʼ ಸಿನಿಮಾ ನೋಡಿದ್ದರೆ ಈಕೆಯ ನೆನಪಿರುತ್ತದೆ. ಅದರಲ್ಲಿ ಇರ್ಫಾನ್‌ ಖಾನ್‌ ಜೊತೆಗೆ ನಟಿಸಿದಾಕೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಬಂಧದಲ್ಲಿ ಬಿರುಕು ಮೂಡಲು ನಿಮ್ರತ್ ಕೌರ್ ಕಾರಣವೆನ್ನುವ ಮಾತು ಮೂಡಲು ಕಾರಣವೆಂದರೆ, ಆಕೆ 'ದಸವಿ' ಚಿತ್ರದಲ್ಲಿ ಅಭಿಷೇಕ್‌ ಜೊತೆಗೆ ನಟಿಸಿದ್ದಳು. ಅದರಲ್ಲಿ ಇಬ್ಬರೂ ಗಂಡ ಹೆಂಡತಿ. 

ದಸ್ವಿ ಚಿತ್ರೀಕರಣದ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನುವ ಸುದ್ದಿ ಇದೆ.  ನಿಮ್ರತ್‌ಗೆ ಈಗ 42 ವರ್ಷ. ಆಕೆ ಮದುವೆಯಾಗದ ಸಿಂಗಲ್‌ ಲೇಡಿ. ಆದರೂ ಅಲ್ಲಿ ಇಲ್ಲಿ ಅಭಿಷೇಕ್‌ ಜೊತೆಗೆ ಸುತ್ತಾಡುತ್ತಾಳೆ, ಇಬ್ಬರೂ ವಿದೇಶಗಳಲ್ಲಿ ಒಟ್ಟಾಗಿ ಸಿಕ್ಕಿಬಿದ್ದಿದ್ದಾರೆ ಎಂಬುದು ರೂಮರ್.‌  ಈ ಸುದ್ದಿಯನ್ನು ನಂಬಿ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಮಂದಿ ನಿಮ್ರತ್ ಕೌರ್ ಅವರನ್ನು ಹೀನಾಮಾನವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಕೂಡ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ ನಿಮ್ರತ್ ಕೌರ್ ಆಗಲಿ ಪ್ರತಿಕ್ರಿಯೆ‌ ನೀಡಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಇದರಿಂದ ಆಡಿಕೊಳ್ಳೋರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಮೌನಂ ಸಮ್ಮತಿ ಲಕ್ಷಣಂ ಎಂದು ತಿಳಿಯಬೇಕಾ? ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸಂಸಾರದಲ್ಲಿ ನಿಮ್ರತ್ ಕೌರ್ ಹುಳಿ ಹಿಂಡಿದ್ದು ನಿಜಾನಾ? ಎಂದು ಹಲವರು ಕೇಳುತ್ತಿದ್ದಾರೆ. 

ಮೀಮ್‌ ಮಾಡೋರಿಗೆ, ಗಾಸಿಪ್‌ ಹಬ್ಬಿಸುವವರಿಗೆ ಇದೆಲ್ಲಾ ಸುಗ್ಗಿ. ಇಂಥ ಒಂದೊಂದು ಗಾಸಿಪ್‌ಗೂ ಕುಹಕ ಸಾವಿರಾರು ಕಾಮೆಂಟ್‌ಗಳು ಬರುತ್ತವೆ. ಉದಾಹರಣೆಗೆ ಒಂದು ಮೀಮ್-‌ "ಮನೆಯಲ್ಲಿ ಲಂಬೋರ್ಗಿನಿ ಕಾರು ಇದ್ರೂ ಬೇರೆ ಮನೆ ಟೊಯೊಟಾ ಕಾರು ಯಾಕೆ ಬೇಕು?" ಹೀಗೆ. ಇದಕ್ಕೆ ಕಾಮೆಂಟ್‌ಗಳೂ ಸಕತ್‌ ಫನ್ನಿ. "ಲಂಬೋರ್ಗಿನಿ ಮೇಂಟೇನೆನ್ಸ್‌ ತುಂಬಾ ಕಾಸ್ಟ್‌ಲೀ, ಅದಕ್ಕೇ ಟೊಯೊಟಾ ಬೆಸ್ಟ್"‌ ಅಂತ ಒಬ್ಬ. "ವೆರೈಟಿ ಬೇಕಲ್ಲಾ. ಮನೆ ಊಟ ಎಷ್ಟು ದಿನ ಮಾಡೋಕಾಗುತ್ತೆ" ಅಂತ ಇನ್ನೊಬ್ಬ. ಅಂತೂ ಆಡಿಕೊಳ್ಳೋರಿಗೆ ಇದೆಲ್ಲಾ ಹಬ್ಬ. 

ರಾಕಿ ಭಾಯ್ ಚಿಂತೆಗೀಡು ಮಾಡ್ತಿರೋ ಆ ಭಯ ಯಾವುದು! ಟಾಕ್ಸಿಕ್‌ನಲ್ಲಿ ಯಶ್ ಹಾಡ್ತಾರಂತೆ, ನಿಜಾನ?

ಇಷ್ಟಕ್ಕೂ ಅಭಿಷೇಕ್‌ ಮತ್ತು ಐಶ್ವರ್ಯ ಸಂಸಾರದಲ್ಲಿ ಎಲ್ಲ ಸರಿ ಇದೆಯಾ?  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಶುರುವಾದ ಇವರ ಡಿವೋರ್ಸ್‌ ಸುದ್ದಿ ದಿನಕ್ಕೊಂದರಂತೆ ರೂಪು ಪಡೆಯುತ್ತಿದೆ.  ಡಿವೋರ್ಸ್‌ ಆಗಿಯೇ ಬಿಟ್ಟರು ಎನ್ನುವ ರೀತಿಯಲ್ಲಿ ಇಬ್ಬರೂ ನಡೆದುಕೊಳ್ಳುತ್ತಿದ್ದಾರೆ. ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಅನಂತ್​ ಅಂಬಾನಿ ಮದುವೆಯಲ್ಲಿ ಅಮಿತಾಭ್​, ಜಯಾ, ಅಭಿಷೇಕ್ ಸೇರಿದಂತೆ ಅಮಿತಾಭ್​ ಪುತ್ರಿಯರೂ ಆಗಮಿಸಿದ್ದರು. ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಕೂಡ ಭಾಗವಹಿಸಿದ್ದರು. ಆದರೆ ಫೋಟೋಶೂಟ್​ನಲ್ಲಿ ಐಶ್ವರ್ಯ ಮತ್ತು ಆರಾಧ್ಯ ಅವರನ್ನು ಹೊರತುಪಡಿಸಿ ಉಳಿದವರು ಫೋಟೋಗೆ ಪೋಸ್​ ಕೊಟ್ಟಿದ್ದರು. ಇನ್ನೊಂದರಲ್ಲಿ ಪ್ರತ್ಯೇಕವಾಗಿ ತಾಯಿ-ಮಗಳು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದರಿಂದ ಐಶ್ವರ್ಯಾ ಮತ್ತು ಅಭಿಷೇಕ್​ ವಿಚ್ಛೇದನದ ಸುದ್ದಿಗೆ ಮತ್ತಷ್ಟು ಬಲ ತುಂಬಿದ್ದರು. 

ಆರು ತಿಂಗಳ ಕಂದನ ಮುದ್ದು ಫೋಟೋ ಶೇರ್​ ಮಾಡಿದ ನಟಿ ಅದಿತಿ ಪ್ರಭುದೇವ: ನಗುವಿಗೆ ಫ್ಯಾನ್ಸ್​ ಫಿದಾ
 

Latest Videos
Follow Us:
Download App:
  • android
  • ios