ನಿಮಗೆ ಹಿಂದೂ ಹೆಸರು ಹೊಳೆಯಲ್ಲಿಲ್ಲವೇ? ಯಾಕೆ ಈ ದುವಾ? ದೀಪಿಕಾ-ರಣ್‌ವೀರ್ ಟ್ರೋಲ್
ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮಗಳಿಗೆ 'ದುವಾ' ಎಂದು ಹೆಸರಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಹಿಂದೂ ಪೋಷಕರು ಮಗಳಿಗೆ ಇಸ್ಲಾಮಿಕ್ ಹೆಸರಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪುತ್ರಿಯ ಹೆಸರು 'ದುವಾ' ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೀಪಾವಳಿಯ ಸಂಭ್ರಮದಲ್ಲಿ ಮುದ್ದು ಮಗಳ ಕೋಮಲ ಪಾದಗಳ ಫೋಟೋ ಹಂಚಿಕೊಂಡಿದ್ದ ರಣ್‌ವೀರ್-ದೀಪಿಕಾ ಈಕೆ ನಮ್ಮ ಪ್ರಾರ್ಥನೆ ಫಲವಾಗಿ ಜನಿಸಿದವಳು. ಹಾಗಾಗಿ ದುವಾ ಎಂದು ಹೆಸರಿಡಲಾಗಿದೆ. ಅಷ್ಟು ಮಾತ್ರವಲ್ಲದೇ ಮಗಳ ಹೆಸರಿನ ಜೊತೆ ಮೊದಲು ತಾಯಿಯ ಸರ್ ನೇಮ್ ಸೇರಿಸಿದ್ದು, ಅಭಿಮಾನಿಗಳಿಗೆ ಇಷ್ಟವಾಗಿತ್ತು. ಸಾಮಾನ್ಯವಾಗಿ ಮಕ್ಕಳ ಹೆಸರಿನೊಂದಿಗೆ ತಂದೆಯ ಹೆಸರು ಇರಿಸಲಾಗುತ್ತದೆ. ಆದರೆ ಸ್ಟಾರ್ ಕಪಲ್ 'ದುವಾ ಪಡುಕೋಣೆ ಸಿಂಗ್' ಎಂದು ನಾಮಕರಣ ಮಾಡಿದ್ದಾರೆ. ತಾಯಿಯ ಹೆಸರಿನ ನಂತ್ರ ಸಿಂಗ್ ಎಂದು ಇರಿಸಲಾಗಿದೆ.
ಈ ಎಲ್ಲಾ ಬೆಳವಣಿಗೆ ನಡುವೆ 'ದುವಾ' ಅನ್ನೋದು ಇಸ್ಲಾಂ ಹೆಸರು. ಹಿಂದೂ ಪೋಷಕರಾದ ನಿಮಗೆ ಬೇರೆ ಯಾವ ಹೆಸರು ಸಿಕ್ಕಿಲ್ಲವೇ? ದುವಾ ಅಂದ್ರೆ ಪ್ರಾರ್ಥನೆ. ಯಾಕೆ ಮಗಳಿಗೆ ಪ್ರಾರ್ಥನಾ ಎಂದು ಹೆಸರಿಡಲಿಲ್ಲ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಒಂದಿಷ್ಟು ಮಂದಿಯಂತೂ ಇನ್ನೂ ಸಮಯವಿದ್ದು, ಮಗಳ ಹೆಸರನ್ನು ಪ್ರಾರ್ಥನಾ ಅಥವಾ ಬೇರೆ ಯಾವುದಾದರೂ ಹಿಂದೂ ಹೆಸರನ್ನು ಇರಿಸಿ ಎಂದು ಬಿಟ್ಟಿ ಸಲಹೆಯನ್ನು ನೀಡಿದ್ದಾರೆ. ಈ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ಸ್ಟಾರ್ ದಂಪತಿಯ ಅಭಿಮಾನಿಳು, ತಮ್ಮ ಮಗಳಿಗೆ ಏನು ಹೆಸರಿಡಬೇಕು ಎಂಬುವುದು ಪೋಷಕರ ನಿರ್ಧಾರ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಆಲೋಚನೆಗೆ ಯಾವ ಹಿಂದೂ ಹೆಸರು ಹೊಳೆಯಲ್ಲಿಲ್ಲವೇ? ಯಾಕೆ ಈ ದುವಾ? ನೀವಿಬ್ಬರು ಹಿಂದೂ ಅನ್ನೋದನ್ನು ಮರೆತಿದ್ದೀರಾ? ದುವಾ ಬದಲು ಪ್ರಾರ್ಥನಾ ಎಂಬ ಹೆಸರಿಡಬಹುದಿತ್ತು. ಹಿಂದೂ ದೇವತೆಗಳ ಹೆಸರುಗಳದ್ದವು. ಈಗ ದುವಾ ಜೊತೆಗೆ ಬೇಕಿದ್ರೆ 'ಖಾನ್' ಎಂದು ಸೇರಿಸಿಕೊಳ್ಳಿ. ಮಗಳಿಗೆ ಇಸ್ಲಾಂ ಎಂದು ಹೆಸರಿಟ್ಟಾಯ್ತು. ಈಗ ನೀವಿಬ್ಬರೂ ಸಹ ಮೊಹಮ್ಮದ್ ಮತ್ತು ಆಯೇಶಾ ಎಂದು ಹೆಸರನ್ನು ಬದಲಿಸಿಕೊಳ್ಳಿ ಎಂದು ಹೀಗೆ ನೂರಾರು ಕಮೆಂಟ್‌ಗಳು ದುವಾ ಫೋಟೋಗೆ ಬಂದಿವೆ.
ಇದನ್ನೂ ಓದಿ: "ರಣ್‌ಬೀರ್ ಕಪೂರ್ ಹೆಚ್ಚು ಬಳಸೋ ಕಾಂಡೋಮ್ ಗಿಫ್ಟ್ ಕೊಡ್ತೀನಿ" ನಟಿ ಹೇಳಿಕೆ ವೈರಲ್
ದುವಾ ಅನ್ನೋದು ಇಸ್ಲಾಂ ಪದವಾಗಿದ್ದು, ಅರೇಬಿಕ್ ಮೂಲದಿಂದ ಬಂದಿದೆ. ಅಲ್ಲಾಹುವಿನ ಮುಂದೆ ಪ್ರಾರ್ಥನೆ ಅಥವಾ ಮನವಿ ಅಥವಾ ಕೋರಿಕೆ ಸಲ್ಲಿಸುವುದನ್ನು ದುವಾ ಎಂದು ಕರೆಯಲಾಗುತ್ತದೆ. ದುವಾ ಅನ್ನೋದು ಮುಸ್ಲಿಂ ಸಮುದಾಯದ ಪ್ರಾರ್ಥನೆಯ ಒಂದು ಪ್ರಮುಖ ಭಾಗವಾಗಿದೆ. ಅಲ್ಲಾಹುವಿನ ಜೊತೆ ಮುಸ್ಲಿಂ ಸಮುದಾಯವರು ಸಂವಹನ ನಡೆಸುವ ಭಾಗವೂ ದುವಾ ಆಗಿದೆ. ಮುಸಲ್ಮಾನರು ತಮ್ಮ ಮಕ್ಕಳಿಗೆ ಅದರಲ್ಲಿಯೂ ಹೆಣ್ಣು ಮಗುವಿಗೆ ಆಧ್ಯಾತ್ಮಿಕತೆ ಮತ್ತು ಸಕಾರಾತ್ಮಕತೆಯ ಮೌಲ್ಯ ಹೊಂದಿರುವ ಪದವಾಗಿರುವ ದುವಾ ಎಂದು ಹೆಸರಿಡುತ್ತಾರೆ. ಮುಸ್ಲಿಮರ ಪವಿತ್ರ ಗ್ರಂಥವಾಗಿರುವ ಕುರಾನ್‌ನಲ್ಲಿಯೂ ದುವಾ ಎಂಬ ಪದದ ಉಲ್ಲೇಖವಿದೆ.
ಇಷ್ಟೆಲ್ಲಾ ನಕಾರಾತ್ಮಕ ಕಮೆಂಟ್‌ಗಳು ಬಂದರೂ ದೀಪಿಕಾ ಅಥವಾ ರಣ್‌ವೀರ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರೊಂದಿಗೆ ರಣ್‌ಬೀರ್ ಕಪೂರ್-ಆಲಿಯಾ ಭಟ್ ಮಗಳು ಹೆಸರು ರಹಾ, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಪುತ್ರಿ ವಮಿಕಾ ಹೆಸರಿನ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸೈಫ್ ಅಲಿ ಖಾನ್ -ಕರೀನಾ ಕಪೂರ್ ಪುತ್ರ ತೈಮೂರ್ ಹೆಸರು ಸಹ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮಗಳ ಮೊದಲ ಫೋಟೋ ಹಂಚಿಕೊಂಡು, ಪುತ್ರಿಯ ಹೆಸರು ಬಹಿರಂಗಪಡಿಸಿದ ರಣವೀರ್-ದೀಪಿಕಾ!