ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಬಯೋಪಿಕ್ 'ವೈಟ್' ಚಿತ್ರದಲ್ಲಿ ವಿಕ್ರಾಂತ್ ಮಾಸಿ ಗುರೂಜಿ ಪಾತ್ರ ನಿರ್ವಹಿಸಲಿದ್ದಾರೆ. ಕೊಲಂಬಿಯಾದ ಶೀತಲ ಸಮರಕ್ಕೆ ವಿರಾಮ ಹಾಡಿದ ಘಟನೆ ಕಥಾವಸ್ತುವಿನ ಮುಖ್ಯಾಂಶ. ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭ.
ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಜೀವನಾಧಾರಿತ ಬಯೋಪಿಕ್ ‘ವೈಟ್’ ಚಿತ್ರೀಕರಣಕ್ಕೆ ಸಜ್ಜಾಗಿದೆ. ಬಾಲಿವುಡ್ ನಟ ವಿಕ್ರಾಂತ್ ಮಾಸಿ ಈ ಚಿತ್ರದಲ್ಲಿ ಗುರೂಜಿ ಪಾತ್ರವನ್ನು ನಿರ್ವಹಿಸಲಿದ್ದು, ಈ ಮಹತ್ವದ ಪಾತ್ರಕ್ಕಾಗಿ ತೀವ್ರ ತಯಾರಿ ನಡೆಸುತ್ತಿದ್ದಾರೆ. ಕೊಲಂಬಿಯಾದ ಶೀತಲ ಸಮರಕ್ಕೆ ಶಾಂತಿಯ ಸಂದೇಶದ ಮೂಲಕ ವಿರಾಮ ಹಾಡಿದ ಗುರೂಜಿಯವರ ಬದುಕಿನ ಪ್ರಮುಖ ಘಟನೆ ಈ ಚಿತ್ರದ ಕಥಾನಕದ ಕೇಂದ್ರಬಿಂದುವಾಗಲಿದೆ.
ಈ ಬಗ್ಗೆ ಮಾತನಾಡಿರುವ ವಿಕ್ರಾಂತ್ ಮಾಸಿ, 'ಗುರೂಜಿಯವರಂತಾಗಲು ಸಾಧ್ಯವಿಲ್ಲ. ಆದರೆ, ಒಬ್ಬ ನಟನಾಗಿ ಅವರ ಜೀವನವನ್ನು ಪರದೆಯ ಮೇಲೆ ಜೀವಂತವಾಗಿಸಲು ಪ್ರಯತ್ನಿಸುತ್ತೇನೆ. ಈ ಪಾತ್ರ ನಿರ್ವಹಿಸುವುದು ನನಗೆ ಹೆಮ್ಮೆಯ ಕ್ಷಣವಾಗಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಇನ್ಟ್ಯೂಷನ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರೇರಿತರಾದ ವಿಕ್ರಾಂತ್ ಮಸ್ಸಿ
ಈ ಬಯೋಪಿಕ್‌ಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಮಹಾವೀರ್ ಜೈನ್ ಮತ್ತು ಸಿದ್ಧಾರ್ಥ್ ಆನಂದ್ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಈ ಚಿತ್ರವು ಗುರೂಜಿಯವರ ಜೀವನದ ಸಂದೇಶವನ್ನು ಜಾಗತಿಕವಾಗಿ ತಲುಪಿಸುವ ನಿರೀಕ್ಷೆಯಲ್ಲಿದೆ.


