Asianet Suvarna News Asianet Suvarna News

ಸಿನಿಮಾದಲ್ಲಿ ಬಿಝಿ ಇರುವಾಗ್ಲೇ ಚಡ್ಡಿ ಧರಿಸಿ 'ರಜನೀಕಾಂತ್' ರಸ್ತೆ ಮೇಲೆ ಓಡಾಡಿದ್ಯಾಕೆ? ಫ್ಯಾನ್ಸ್​ ಶಾಕ್​

ಸಿನಿಮಾದಲ್ಲಿ ಬಿಜಿ ಇರುವಾಗಲೇ  ಚಡ್ಡಿ ಧರಿಸಿ 'ರಜನೀಕಾಂತ್' ರಸ್ತೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. 
 

While busy in the movie Rajinikanth appeared on the road wearing shorts suc
Author
First Published Oct 22, 2023, 12:38 PM IST

ನಟ ರಜನೀಕಾಂತ್​ ತೀರಾ ಸರಳ ವ್ಯಕ್ತಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಬೆಳ್ಳಿ ಪರದೆಗಾಗಿ ಬಣ್ಣ ಹಚ್ಚಿದರೆ ಯುವಕರನ್ನೂ ನಾಚಿಸುವಂಥ ನಟನೆಗೆ ಈಗಲೂ ಅವರು ಸೈ. ವಯಸ್ಸು 72 ಆದರೂ ಕುಗ್ಗದ ಉತ್ಸಾಹ ಅವರದ್ದು. ಇತ್ತೀಚೆಗೆ ಬಿಡುಗಡೆಯಾದ ಜೈಲರ್​ ಚಿತ್ರ ನೋಡಿದರೆ ನಿಜಕ್ಕೂ ರಜನೀಕಾಂತ್​ ಅವರಿಗೆ ಇಷ್ಟು ವಯಸ್ಸಾಗಿದ್ದು ಹೌದಾ ಎಂದು ಪ್ರಶ್ನೆ ಕೇಳುವವರೇ ಎಲ್ಲ.  72ನೇ ವಯಸ್ಸಿನಲ್ಲಿಯೂ ಜೈಲರ್​ ಚಿತ್ರದ ಮೂಲಕ ಹಲವು ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದ್ದಾರೆ ಎಂದರೆ ಅವರ ತಾಕತ್ತು ಎಷ್ಟು ಎನ್ನುವುದು ಕಾಣಸಿಗುತ್ತದೆ.  ಅವರು ಎಲ್ಲರಿಗೂ ಇಷ್ಟವಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಅವರ ವ್ಯಕ್ತಿತ್ವ. ಎಷ್ಟೇ ದೊಡ್ಡ ಸ್ಟಾರ್​ ಆದರೂ ತಮ್ಮ ಹಿಂದಿನ ಕಷ್ಟದ ದಿನಗಳನ್ನು ಅವರು ಎಂದಿಗೂ ಮರೆತೇ ಇಲ್ಲ. ಮೊನ್ನೆ ತಾನೆ ಬೆಂಗಳೂರಿಗೆ ಭೇಟಿ ನೀಡಿ ತಾವು ಕೆಲಸ ಮಾಡಿದ ಜಯನಗರ ಬಿಎಂಟಿಸಿ ಬಸ್ ಡಿಪೋದಲ್ಲಿ ಅಡ್ಡಾಡಿದ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿರೋದೂ ಇದಕ್ಕೊಂದು ಸಾಕ್ಷಿ.  ಬೆಂಗಳೂರಿನ ನಂಟು ಇರುವ ರಜನಿಕಾಂತ್​ ಅವರು ಎಂದಿಗೂ ಈ ನಂಟು ಹಾಗೂ ಆ ದಿನಗಳ ಕಷ್ಟದ ಸ್ಥಿತಿಯನ್ನು ಮರೆತೂ ಇಲ್ಲ, ತಮ್ಮ ಜೊತೆ ಕೆಲಸ ಮಾಡಿದವರನ್ನೂ, ಮಾಡುತ್ತಿರುವವರನ್ನು ಅಷ್ಟೇ ಆತ್ಮೀಯವಾಗಿ ಮಾತನಾಡಿಸುತ್ತಾರೆ. 


ಅದೇನೇ ಇದ್ದರೂ, ಪರದೆಯ ಆಚೆಗೆ ಬಂದಾಗ ನಟನದ್ದು ತೀರಾ ಸೀದಾಸಾದಾ ವ್ಯಕ್ತಿತ್ವ. ಇದೀಗ ನಟ ಬರ್ಮೂಡಾ ಧರಿಸಿ ರಸ್ತೆಯ ಮೇಲೆ ಓಡಾಡುತ್ತಿರುವ ವಿಡಿಯೋ ಒಂದು ಸಕತ್​ ವೈರಲ್​ ಆಗುತ್ತಿದೆ. ಅಬ್ಬಬ್ಬಾ ರಜನೀಕಾಂತ್​ ಅವರು ಹೀಗೆಲ್ಲಾ ಓಡಾಡ್ತಾರಾ ಎಂದು ಅಂದುಕೊಂಡವರೇ ಹಲವರು.

ರಜನೀಕಾಂತರನ್ನು ಭಿಕ್ಷುಕ ಎಂದು ತಿಳಿದ ಮಹಿಳೆ ನೀಡಿದ್ರು 10 ರೂಪಾಯಿ! ಮುಂದೇನಾಯ್ತು?

ಖುದ್ದು ರಜನೀಕಾಂತ್​ ಅವರ ಫ್ಯಾನ್ಸ್ ಕೂಡ ಶಾಕ್​ ಆಗಿದ್ದಾರೆ.  ಸೂಪರ್‌ಸ್ಟಾರ್‌ ಸರಳತೆಯನ್ನು ಹೊಗಳಿ ಬಹಳಷ್ಟು ಜನರು ಆ ವಿಡಿಯೋ ಶೇರ್‌ ಮಾಡಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.  ನಟ ಈ ಪರಿ ಸರಳತೆ ಮೆರೆದಿದ್ದರೂ ಅದೇನೂ ಅಚ್ಚರಿಯೇನಿಲ್ಲ. ಆದರೆ ಅಸಲಿಗೆ ಈ ವಿಡಿಯೋದಲ್ಲಿ ಇರುವವರು ರಜನೀಕಾಂತ್​ ಅಲ್ಲವೇ ಅಲ್ಲ. ಅವರನ್ನು ಹೋಲುವ ಇನ್ನೋರ್ವ ವ್ಯಕ್ತಿ. ಜಗತ್ತಿನಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎಂದು ಹೇಳಲಾಗುತ್ತದೆ. ಕೆಲವರನ್ನು ನೋಡಿದಾಗ ಇದು ನಿಜ ಎಂದು ಅನ್ನಿಸುವುದು ಉಂಟು. ಇನ್ನು ಕೆಲವು ನಟ-ನಟಿಯರನ್ನು ಹೋಲುವವರನ್ನೂ ನೋಡಿದ್ದೇವೆ. ಅದೇ ರೀತಿ ಈಗ ರಜನೀಕಾಂತ್​ ಅವರನ್ನು ಹೋಲುವ ವ್ಯಕ್ತಿಯ ವಿಡಿಯೋ ವೈರಲ್​ ಆಗಿದೆ. 

 
ಇದೀಗ ಆ ವೈರಲ್‌ ವಿಡಿಯೋದ ರಹಸ್ಯ ಬಹಿರಂಗಗೊಂಡಿದೆ. ಅವರು ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅಲ್ಲ. ಥೇಟ್‌ ಅವರನ್ನೇ ಹೋಲುವ ಸುಧಾಕರ್‌ ಪ್ರಭು ಅವರ ವಿಡಿಯೋ. ಕೇರಳದ ಫೋರ್ಟ್‌ ಕೊಚ್ಚಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಅವರು ರಜಿನಿಕಾಂತ್‌ ಅವರನ್ನೇ ಹೋಲುತ್ತಿದ್ದಾರೆ. ಈ ವಿಷಯವನ್ನು ಮಲಯಾಳಂ ಯೂಟ್ಯೂಬರ್‌ ಒಬ್ಬರು ಬಹಿರಂಗಪಡಿಸಿದ್ದಾರೆ. ಸುಧಾಕರ್​ ಪ್ರಭು ಅವರು ಥೇಟ್​ ರಜನೀಕಾಂತ್​ ಅವರಂತೆಯೇ ಹೋಲುತ್ತಿದ್ದಾರೆ. ಅವರನ್ನು ತಾವು ಹೋಲುತ್ತೇವೆ ಎಂದು ತಿಳಿದ ತಕ್ಷಣ, ಸುಧಾಕರ್​ ಅವರು ರಜನೀ ಅವರಂತೆಯೇ ಹೇರ್​ಸ್ಟೈಲ್​ ಮಾಡಿಕೊಂಡಿರುವ ಕಾರಣ, ಇಬ್ಬರೂ ಸೇಮ್​  ಟು ಸೇಮ್​ ಕಾಣಿಸುತ್ತಾರೆ. 

ರಾಜ್ಯಪಾಲರ ಹುದ್ದೆ ಅಲಂಕರಿಸಲಿದ್ದಾರೆಯೇ ನಟ ರಜನೀಕಾಂತ್​? ಸಹೋದರ ಕೊಟ್ಟರು ಈ ಸುಳಿವು

 

ಕೆಲ ದಿನಗಳ ಹಿಂದಷ್ಟೇ ರಜನೀಕಾಂತ್​ ಅವರ ಕುರಿತು ಇಂಟರೆಸ್ಟಿಂಗ್​ ವಿಷಯವೊಂದು ತಿಳಿದುಬಂದಿತ್ತು. ಅದೇನೆಂದರೆ, ರಜನೀಕಾಂತ್​ ಅವರನ್ನು  ಭಿಕ್ಷುಕನೆಂದು ತಿಳಿದ ಮಹಿಳೆಯೊಬ್ಬರು 10 ರೂಪಾಯಿ ನೀಡಿದ್ದರಂತೆ! ಹೌದು. ಇವರನ್ನು ನೋಡಿದ ಮಹಿಳೆಯೊಬ್ಬರು ದೇವಸ್ಥಾನದ ಎದುರು 10 ರೂಪಾಯಿ ಹಾಕಿದ್ದರಂತೆ. ಅದಕ್ಕೆ ಕಾರಣವೂ ಇದೆ. ರಜನೀಕಾಂತ್​ ಅವರ ಲುಕ್ಕು ತೆರೆಯ ಮೇಲೆ ಬೇರೆಯದ್ದೇ ರೀತಿ ಇರುತ್ತದೆ. ಆದರೆ ಅವರು ಅಸಲಿ ಜೀವನದಲ್ಲಿ ಹೇಗೆ ಇದ್ದೇವೋ ಹಾಗೆಯೇ ಇರುತ್ತಾರೆ. ಮೇಕಪ್ಪೂ ಇರುವುದಿಲ್ಲ, ತಲೆಯ ಮೇಲೆ ಕೂದಲು ಇಲ್ಲ. ಪಂಚೆ ಸುತ್ತಿ ಹೋದರೆ ಅವರು ರಜನೀಕಾಂತ್​ ಎಂದು ಗುರುತಿಸುವುದೇ ಎಷ್ಟೋ ಮಂದಿಗೆ ಕಷ್ಟ. ಹಿಮಾಲಯಕ್ಕೆ ಹೋಗಿದ್ದ ಸಮಯದಲ್ಲಿ ಮಹಿಳೆ ದುಡ್ಡು ಕೊಟ್ಟಿದ್ದರಂತೆ. ನಂತರ ಇವರು ರಜನೀಕಾಂತ್​ ಎಂದು ಗೊತ್ತಾಗಿ ಕ್ಷಮೆ ಕೋರಿದ್ದರಂತೆ. 
 

Follow Us:
Download App:
  • android
  • ios