ರಜನೀಕಾಂತರನ್ನು ಭಿಕ್ಷುಕ ಎಂದು ತಿಳಿದ ಮಹಿಳೆ ನೀಡಿದ್ರು 10 ರೂಪಾಯಿ! ಮುಂದೇನಾಯ್ತು?

ರಜನೀಕಾಂತ್​ ಅವರನ್ನು ಭಿಕ್ಷುಕ ಎಂದು ತಿಳಿದಿದ್ದ ಮಹಿಳೆಯರೊಬ್ಬರು ಅವರಿಗೆ 10 ರೂಪಾಯಿ ಭಿಕ್ಷೆ ನೀಡಿದ್ರಂತೆ. ಮುಂದೇನಾಯ್ತು?
 

A woman who thought Rajinikanth as a beggar gave him 10 rupees

ರಜನೀಕಾಂತ್​ ಯಾರು ಎಂದು ಕೇಳಿದರೆ ಬಹುಶಃ ಅವರ ಹೆಸರು ಕೇಳದವರು ಅಪರೂಪ ಎಂದೇ ಹೇಳಬಹುದು.  ಯಜಮಾನ (ತಲೈವಾ) ಎಂದೇ ಗುರುತಿಸಿಕೊಂಡಿರೋ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರ ಬಗ್ಗೆ ಕೆದಕಿದ್ದಷ್ಟೂ ಹೊಸ ಹೊಸ ವಿಷಯಗಳು ಬರುತ್ತಲೇ ಇರುತ್ತವೆ.  72ನೇ ವಯಸ್ಸಿನಲ್ಲಿಯೂ ಜೈಲರ್​ ಚಿತ್ರದ ಮೂಲಕ ಹಲವು ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದ್ದಾರೆ ಎಂದರೆ ಅವರ ತಾಕತ್ತು ಎಷ್ಟು ಎನ್ನುವುದು ಕಾಣಸಿಗುತ್ತದೆ.  ಅವರು ಎಲ್ಲರಿಗೂ ಇಷ್ಟವಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಅವರ ವ್ಯಕ್ತಿತ್ವ. ಎಷ್ಟೇ ದೊಡ್ಡ ಸ್ಟಾರ್​ ಆದರೂ ತಮ್ಮ ಹಿಂದಿನ ಕಷ್ಟದ ದಿನಗಳನ್ನು ಅವರು ಎಂದಿಗೂ ಮರೆತೇ ಇಲ್ಲ. ಮೊನ್ನೆ ತಾನೆ ಬೆಂಗಳೂರಿಗೆ ಭೇಟಿ ನೀಡಿ ತಾವು ಕೆಲಸ ಮಾಡಿದ ಜಯನಗರ ಬಿಎಂಟಿಸಿ ಬಸ್ ಡಿಪೋದಲ್ಲಿ ಅಡ್ಡಾಡಿದ್ದರು. ಅಲ್ಲಿನ ಸಿಬ್ಬಂದಿ ಜೊತೆ ಮಾತನಾಡಿ ಫೋಟೊ ಕ್ಲಿಕ್ಕಿಸಿಕೊಂಡಿರೋದೂ ಇದಕ್ಕೊಂದು ಸಾಕ್ಷಿ.  ಬೆಂಗಳೂರಿನ ನಂಟು ಇರುವ ರಜನಿಕಾಂತ್​ ಅವರು ಎಂದಿಗೂ ಈ ನಂಟು ಹಾಗೂ ಆ ದಿನಗಳ ಕಷ್ಟದ ಸ್ಥಿತಿಯನ್ನು ಮರೆತೂ ಇಲ್ಲ, ತಮ್ಮ ಜೊತೆ ಕೆಲಸ ಮಾಡಿದವರನ್ನೂ, ಮಾಡುತ್ತಿರುವವರನ್ನು ಅಷ್ಟೇ ಆತ್ಮೀಯವಾಗಿ ಮಾತನಾಡಿಸುತ್ತಾರೆ. 

 ರಜನಿಕಾಂತ್​ ಅವರ ಇನ್ನೊಂದು ವ್ಯಕ್ತಿತ್ವ ಎಂದರೆ ಅವರೊಬ್ಬ ದಾನಿ ಎನ್ನುವುದು. ರಜನೀಕಾಂತ್‌ ಅವರ ಒಟ್ಟು ಆಸ್ತಿ ಮೌಲ್ಯ 365 ಕೋಟಿ ರುಪಾಯಿ. ಪ್ರತಿ ಸಿನಿಮಾಕ್ಕೆ ಸುಮಾರು 50 ರಿಂದ 55  ಕೋಟಿ ಯಷ್ಟು ಸಂಭಾವನೆ ಪಡೆಯುತ್ತಾರೆ. ಇದನ್ನು ಗಮನಿಸಿದರೆ ಇವರ ಆಸ್ತಿ ಇನ್ನೂ ಹೆಚ್ಚಾಗಬೇಕಿತ್ತು. ರಜನಿಕಾಂತ್ ಬಳಿ ಕೋಟಿಗಳಿಗೆ ಬೆಲೆ ಬಾಳುವಂತಹ  ಮರ್ಸಿಡಿಸ್ ಜಿ ವ್ಯಾಗನ್, ರೋಲ್ಸ್ ರಾಯ್ಸ್ ಘೋಸ್ಟ್ , ರೋಲ್ಸ್ ರಾಯ್ಸ್ ಫ್ಯಾಂಟಮ್, ಕಸ್ಟಮ್ ನಿರ್ಮಿತ ಲಿಮೋಸಿನ್ ಕಾರುಗಳಿವೆ. ಇದರ ಬೆಲೆಗಳನ್ನು ಗಮನಿಸಿದರೂ ಇವರ ಆಸ್ತಿಯ ಮೊತ್ತ ಕಡಿಮೆ ಎಂದೇ ಹೇಳಬೇಕು. ಆದರೆ ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಇವರು ತಮ್ಮ ಆಸ್ತಿಯನ್ನು ಅದೆಷ್ಟೋ ಮಂದಿಗೆ ದಾನ ಮಾಡಿದ್ದಾರೆ. 

ರಾಜ್ಯಪಾಲರ ಹುದ್ದೆ ಅಲಂಕರಿಸಲಿದ್ದಾರೆಯೇ ನಟ ರಜನೀಕಾಂತ್​? ಸಹೋದರ ಕೊಟ್ಟರು ಈ ಸುಳಿವು

ಅದರಂತೆಯೇ ಇದೀಗ ಅವರ ಕುರಿತು ಇಂಟರೆಸ್ಟಿಂಗ್​ ವಿಷಯವೊಂದು ತಿಳಿದುಬಂದಿದೆ. ಅದೇನೆಂದರೆ, ರಜನೀಕಾಂತ್​ ಅವರನ್ನು  ಭಿಕ್ಷುಕನೆಂದು ತಿಳಿದ ಮಹಿಳೆಯೊಬ್ಬರು 10 ರೂಪಾಯಿ ನೀಡಿದ್ದರಂತೆ! ಹೌದು. ಇವರನ್ನು ನೋಡಿದ ಮಹಿಳೆಯೊಬ್ಬರು ದೇವಸ್ಥಾನದ ಎದುರು 10 ರೂಪಾಯಿ ಹಾಕಿದ್ದರಂತೆ. ಅದಕ್ಕೆ ಕಾರಣವೂ ಇದೆ. ರಜನೀಕಾಂತ್​ ಅವರ ಲುಕ್ಕು ತೆರೆಯ ಮೇಲೆ ಬೇರೆಯದ್ದೇ ರೀತಿ ಇರುತ್ತದೆ. ಆದರೆ ಅವರು ಅಸಲಿ ಜೀವನದಲ್ಲಿ ಹೇಗೆ ಇದ್ದೇವೋ ಹಾಗೆಯೇ ಇರುತ್ತಾರೆ. ಮೇಕಪ್ಪೂ ಇರುವುದಿಲ್ಲ, ತಲೆಯ ಮೇಲೆ ಕೂದಲು ಇಲ್ಲ. ಪಂಚೆ ಸುತ್ತಿ ಹೋದರೆ ಅವರು ರಜನೀಕಾಂತ್​ ಎಂದು ಗುರುತಿಸುವುದೇ ಎಷ್ಟೋ ಮಂದಿಗೆ ಕಷ್ಟ.
 
 ಅಷ್ಟಕ್ಕೂ ಈ ಘಟನೆ ನಡೆದಿರುವುದು ರಜನಿಕಾಂತ್‌ ಹಿಮಾಲಯದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ. ಅವರು ಆಗಾಗ್ಗೆ ಇಲ್ಲಿ ಭೇಟಿ ನೀಡುವುದು ಮಾಮೂಲು. ಈಚೆಗೆ ಜೈಲರ್ ಚಿತ್ರದ ಬಿಡುಗಡೆ ದಿನವೂ ಇವರು ಹಿಮಾಲಯದಲ್ಲಿದ್ದರು. ಆದರೆ ಈ ಘಟನೆ ನಡೆದದ್ದು ಕೆಲ ವರ್ಷಗಳ ಹಿಂದೆ. ಆಗ ಇವರು ಹಿಮಾಲಯದಲ್ಲಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದರು. ತಮ್ಮ ಎಂದಿನ ಸರಳ ಉಡುಗೆ-ತೊಡುಗೆ ತೊಟ್ಟು ದೇವಸ್ಥಾನದ ಕಂಬದ ಬಳಿ ಕುಳಿತಿದ್ದರಂತೆ.  ಆಗ ಆ ದೇವಾಲಯಕ್ಕೆ ಭೇಟಿ ನೀಡಿದ ಮಹಿಳೆಯೊಬ್ಬರು ದೇಗುಲದ ಕಂಬದ ಪಕ್ಕ ಕುಳಿತಿರುವ ಇವರನ್ನು ಭಿಕ್ಷುಕ ಎಂದು ಭಾವಿಸಿ 10 ರೂಪಾಯಿ ನೀಡಿದ್ದರಂತೆ! 

'ಮಿಸ್​ ಬಿಕಿನಿ ಇಂಡಿಯಾ'ಗೆ ಕಾಂಗ್ರೆಸ್​ ಟಿಕೆಟ್​ ಕೊಟ್ರೆ ಹೀಗೆಲ್ಲಾ ಆಗೋದಾ? ಮೊನ್ನೆ ಹಲ್ಲೆ, ಇಂದು ಪಕ್ಷದಿಂದ್ಲೇ ಔಟ್​!

ಇದನ್ನು ಅಲ್ಲಿದ್ದ ಯುವತಿಯೊಬ್ಬರು ನೋಡುತ್ತಿದ್ದರು. ಅವರಿಗೆ ಇವರು ರಜನೀಕಾಂತ್​ ಎಂದು ತಿಳಿದಿತ್ತು. ಯುವತಿ ಮಹಿಳೆಗೆ ಸತ್ಯ ಹೇಳುವ ಮೊದಲೇ ರಜನೀಕಾಂತ್​ ಅವರು ಮಹಿಳೆಗೆ ಏನೂ ಹೇಳದೇ ಅಲ್ಲಿಂದ ಎದ್ದು ಕಾರಿನ ಕಡೆ ಹೋದರಂತೆ. ಯುವತಿ ಮಹಿಳೆಗೆ ವಿಷಯ ಹೇಳಿದಾಗ, ಆಕೆ ಪಶ್ಚಾತ್ತಾಪಪಟ್ಟು ಕಾರಿನೆಡೆಗೆ ಹೋದರಂತೆ. ರಜನಿಕಾಂತ್‌ ಬಳಿಗೆ ತೆರಳಿ ಕ್ಷಮೆ ಯಾಚಿಸಿದ್ದಾರೆ. ರಜನಿಕಾಂತ್‌ ಅದಕ್ಕೆ ಸಹಜ ನಗುವಿನ ಮೂಲಕವೇ ಪ್ರತಿಕ್ರಿಯೆ ನೀಡಿದ್ದರಂತೆ. ಈ ವಿಷಯವನ್ನು ಯುವತಿ ಈಗ ಬಹಿರಂಗಪಡಿಸಿದ್ದಾರೆ. 
  
 

Latest Videos
Follow Us:
Download App:
  • android
  • ios