Asianet Suvarna News Asianet Suvarna News

Pathaan OTTಯಲ್ಲಿ ಯಾವಾಗ ಬರುತ್ತೆ ಪಠಾಣ್‌? ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ!

ಪಠಾಣ್‌ ಚಿತ್ರ ಥಿಯೇಟರ್‌ಗಳಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿರುವ ಬೆನ್ನಲ್ಲೇ ಒಟಿಟಿಯಲ್ಲಿ ಇದನ್ನು ವೀಕ್ಷಿಸಲು ಸಿನಿ ಪ್ರಿಯರು ಕಾಯುತ್ತಿದ್ದಾರೆ. ಹಾಗಿದ್ದರೆ ಯಾವಾಗ ರಿಲೀಸ್‌ ಆಗಲಿದೆ ಪಠಾಣ್‌? 
 

When will Bollywood Movie Pathan come on OTT Here is a sweet news for the fans
Author
First Published Feb 6, 2023, 9:29 PM IST

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಚಿತ್ರ ಪಠಾಣ್ (Pathaan) ಜನವರಿ 25 ರಂದು ಬಿಡುಗಡೆಯಾಗಿದೆ. ಇದರ  ಮೋಡಿ ಇನ್ನೂ ಕಡಿಮೆಯಾಗಿಲ್ಲ. ಚಿತ್ರ ಇನ್ನೂ ಥಿಯೇಟರ್‌ಗಳಲ್ಲಿ ರಾಕಿಂಗ್ ಮಾಡುತ್ತಿದೆ. ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿಗೂ ಹೆಚ್ಚು ವ್ಯವಹಾರ ಕುದುರಿಸಿದೆ.  ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಬಗ್ಗೆ ಹೇಳುವುದಾದರೆ, 850 ಕೋಟಿ ಗಳಿಸಿದೆ. ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಪಠಾಣ್ ಬಗ್ಗೆ ಹೊಸ ಮಾಹಿತಿ ಹೊರಬೀಳುತ್ತಿದೆ. ಇದೀಗ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬಿ-ಟೌನ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ನಂಬುವುದೇ ಆದರೆ ಪಠಾಣ್ ಬಿಡುಗಡೆಯಾದ ಮೂರು ತಿಂಗಳ ನಂತರ, ಅದು ಅಮೆಜಾನ್ ಪ್ರೈಮ್  ವಿಡಿಯೋದಲ್ಲಿ  ಸ್ಟ್ರೀಮ್ ಆಗಲಿದೆ. ಜನವರಿ 25ರಂದು ಚಿತ್ರ ಬಿಡುಗಡೆಯಾಗುವ ದಿನಾಂಕ ನಿಗದಿಯಾಗಿತ್ತು. ಆದರೆ ಜನವರಿ 24ರಂದು ಪೈರಸಿಗೆ ಬಲಿಯಾಯಿತು. ಪಠಾಣ್‌ನ ಪೈರೇಟೆಡ್ ಆವೃತ್ತಿ ಆನ್‌ಲೈನ್‌ನಲ್ಲಿ ಲಭ್ಯವಿದೆ.  ವಾಟ್ಸಾ‌ಪ್‌ಗಳಲ್ಲಿಯೂ (Whatsapp) ಈ ಚಿತ್ರ ಹರಿದಾಡುತ್ತಿದೆ. ಆದರೆ ಶಾರುಖ್ ಅವರ ಅಭಿಮಾನಿಗಳು ಚಿತ್ರವನ್ನು  ಒಟಿಟಿ (OTT)  ನೋಡಲು ಕಾಯುತ್ತಿದ್ದರೆ, ಥಿಯೇಟರ್‌ನಲ್ಲಿ ನೋಡಿದವರೂ ಮತ್ತೊಮ್ಮೆ ಒಟಿಟಿಯಲ್ಲಿ ನೋಡಲು ಕಾತರರಾಗಿದ್ದಾರೆ.

ಅಂದಹಾಗೆ, ಈಗ ಸುತ್ತುತ್ತಿರುವ ವರದಿಯನ್ನು ನಂಬುವುದೇ ಆದರೆ, ಶಾರುಖ್ ಖಾನ್ ಅವರ ಪಠಾಣ್ ಏಪ್ರಿಲ್ 25 ರಂದು OTT ನಲ್ಲಿ ಸ್ಟ್ರೀಮ್ ಆಗಲಿದೆ.  ಅಮೆಜಾನ್‌ ಪ್ರೈಮ್‌ ವಿಡಿಯೋ (Amazon Prime Video) ಈ ಆಕ್ಷನ್-ಥ್ರಿಲ್ಲರ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಪಠಾಣ್ ಈ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಅಮೆಜಾನ್ ಡಿಜಿಟಲ್ ಹಕ್ಕುಗಳನ್ನು ಭಾರೀ ಬೆಲೆ ಕೊಟ್ಟು ಪಡೆದುಕೊಂಡಿದೆ ಎಂಬ ಮಾತು ಬಿ-ಟೌನ್‌ನಲ್ಲಿ ಸುತ್ತುತ್ತಿದೆ. ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಪಠಾಣ್ ಚಿತ್ರದ ಸ್ಟ್ರೀಮಿಂಗ್ (Streaming) ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 100 ಕೋಟಿ ಬೆಲೆಗೆ ಖರೀದಿಸಿದೆ ಎನ್ನಲಾಗಿದೆ. 

ಬಾಕ್ಸ್​ ಆಫೀಸ್​ ಕಲೆಕ್ಷನ್​ ಲಿಸ್ಟ್​ ಬಿಡುಗಡೆ: ಶಾರುಖ್​ ಅಭಿಮಾನಿಗಳಿಗೆ ಭಾರೀ ನಿರಾಸೆ!

ಅಷ್ಟಕ್ಕೂ ಪಠಾಣ್‌ ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗುವ ಪೂರ್ವದಲ್ಲಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಅದೇನೆಂದರೆ, ಸಬ್​ಟೈಟಲ್​ ಮತ್ತು ಆಡಿಯೋ ಡಿಸ್ಕ್ರಿಪ್ಷನ್​ಗಳನ್ನು (Discription) ಅಳವಡಿಸಬೇಕಿದೆ. ಇದು ಪಠಾಣ್‌ಗೆ ದೆಹಲಿ ಹೈಕೋರ್ಟ್‌ ನೀಡಿರುವ ಆದೇಶ. ನಿಯಮದ ಪ್ರಕಾರ,  ಎಲ್ಲ ಸಿನಿಮಾಗಳಿಗೂ ಈ ರೀತಿ ಸಬ್​ಟೈಟಲ್​ ಮತ್ತು ಆಡಿಯೋ ಡಿಸ್ಕ್ರಿಪ್ಷನ್​ ಅಳವಡಿಸಬೇಕು ಎಂಬ ಆದೇಶವಿದೆ. ಆದರೆ ಅದನ್ನು ಯಾರೂ ಕೂಡ ಸರಿಯಾಗಿ ಪಾಲಿಸುತ್ತಿಲ್ಲ. ಬೇಷರಂ ರಂಗ್‌ ವಿವಾದದ ಹಿನ್ನೆಲೆಯಲ್ಲಿ ಪಠಾಣ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಸಂದರ್ಭದಲ್ಲಿ,  ಈ ವಿಚಾರ ಚರ್ಚೆಗೆ ಬಂದಿತ್ತು. ಆದ್ದರಿಂದ ಚಿತ್ರ ಬಿಡುಗಡೆಗೂ ಮುನ್ನವೇ ದೆಹಲಿ ಹೈಕೋರ್ಟ್‌ ಈ ಆದೇಶವನ್ನು ಹೊರಡಿಸಿತ್ತು.  ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ ಮತ್ತು ಹಿಂದಿ ಭಾಷೆಯ ಸಬ್​ಟೈಟಲ್​ ಅಳವಡಿಸುವಂತೆ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಲಾಗಿತ್ತು.  ವಿಕಲಚೇತನ (Persons with Disabilities) ಪ್ರೇಕ್ಷಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ನ್ಯಾಯಾಲಯವು ಈ ಆದೇಶ ಹೊರಡಿಸಿತ್ತು.  

ಕಿವುಡು  ಪ್ರೇಕ್ಷಕರು ಸಿನಿಮಾ ನೋಡುವಾಗ ಇಂಗ್ಲಿಷ್​ ಸಬ್​ಟೈಟಲ್​ (Sub title) ಬದಲು ಮೂಲ ಭಾಷೆಯಲ್ಲಿ ಸಬ್​ಟೈಟಲ್​ ಇದ್ದರೆ ಹೆಚ್ಚು ಅನುಕೂಲ ಆಗುತ್ತದೆ. ಅದೇ ರೀತಿ, ಕಣ್ಣು ಕಾಣಿಸದ ಪ್ರೇಕ್ಷಕರಿಗೆ ಆಡಿಯೋ ಡಿಸ್ಕ್ರಿಪ್ಷನ್​ ಇದ್ದರೆ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ವಿಕಲಚೇತನರ ಹಕ್ಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿಲಾಗಿತ್ತು. ಈ ಸಂಬಂಧ  ದೆಹಲಿ ಹೈಕೋರ್ಟ್ (High court)​ ಇದರ ಪಾಲನೆಗೆ ಆದೇಶ ಹೊರಡಿಸಿತ್ತು. ಆದರೆ ಪಠಾಣ್‌ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಇದ್ದುದರಿಂದ ಅದು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ  ಒಟಿಟಿ ವರ್ಷನ್​ನಲ್ಲಿ ಈ ಎಲ್ಲ ಸೂಚನೆಗಳನ್ನು ಪಾಲಿಸುವಂತೆ ಕೋರ್ಟ್​ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡದವರು  ಆಡಿಯೋ ಡಿಸ್ಕ್ರಿಪ್ಷನ್​ ಮತ್ತು ಸಬ್​ಟೈಟಲ್​ ಸಿದ್ಧಪಡಿಸಿ ಫೆಬ್ರವರಿ 20ರೊಳಗೆ ಸೆನ್ಸಾರ್​ ಮಂಡಳಿಗೆ ಸಲ್ಲಿಸಬೇಕಿದೆ.

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

Follow Us:
Download App:
  • android
  • ios