ಸ್ವರ್ಗದಲ್ಲಿ ಮಾಡಿದ ಜೋಡಿ ಅಂತ ವಿರುಷ್ಕಾರನ್ನು ಅಭಿಮಾನಿಗಳು ಹೊಗಳೋದು ಸುಮ್ಮನೆ ಅಲ್ಲ. ಇವರ ರೊಮ್ಯಾಂಟಿಕ್ ಮೊಮೆಂಟ್, ಬಾಂಡಿಂಗ್ ಮತ್ತು ಲವ್ ಹಾಗಿದೆ. ಸ್ಟಾರ್ ಸೆಲೆಬ್ರಿಟಿ ಕಪಲ್‌ಗಳಲ್ಲಿ ಯಾವತ್ತೂ ಸುದ್ದಿಯಲ್ಲಿರುವ ಕಪಲ್ ಇವರು. ಇವರಿಗೆ ಅಭಿಮಾನಿಗಳೂ ಹೆಚ್ಚಿದ್ದಾರೆ.

ಇಬ್ಬರಿಗೂ ಮಾಧ್ಯಮದಿಂದ ದೂರ ಉಳಿಯುವುದು ಇಷ್ಟವಾದರೂ ತಮ್ಮ ಫ್ಯಾನ್ಸ್ ಜೊತೆಗೆ ಕೆಲವೊಂದು ಫೋಟೋ, ವಿಡಿಯೋಗಳನ್ನು ತಪ್ಪದೆ ಶೇರ್ ಮಾಡುತ್ತಾರೆ. ಇನ್ನು ಮಗಳು ವಮಿಕಾ ವಿಚಾರದಲ್ಲಿಯೂ ಹೆಚ್ಚು ಖಾಸಗಿತನ ಮೈಂಟೇನ್ ಮಾಡುತ್ತಿದ್ದಾರೆ ವಿರುಷ್ಕಾ.

ವಿರುಷ್ಕಾ ದಂಪತಿ ಮಗಳ ಫೋಟೋ ಕ್ಲಿಕ್: ಫೋಟೋಗ್ರಾಫರ್ ಮೇಲೆ ಸಿಟ್ಟಾಗಿರುವ ಫ್ಯಾನ್ಸ್‌!

2017ರಲ್ಲಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಈ ಜೋಡಿ. ನಂತರ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ವಿವಾಹದ ಬಗ್ಗೆ ತಿಳಿಸಿದ್ದರು. ಅನುಷ್ಕಾರ 33ನೇ ಬರ್ತ್‌ಡೇಯಲ್ಲಿ ಕೊಹ್ಲಿ ತನ್ನ ಪತ್ನಿಗಾಗಿ ಹಾಡು ಹಾಡಿದ ವಿಡಿಯೋ ವೈರಲ್ ಆಗಿದೆ.

ಮದುವೆ ಪಾರ್ಟಿಯಲ್ಲಿ ಮೇರೇ ಮೆಹಬೂಬ್ ಖಯಾಮತ್ ಹೋಗಿ ಹಾಡನ್ನು ಹಾಡಿದ್ದಾರೆ ಕೊಹ್ಲಿ. ಪತಿಯ ಹಾಡನ್ನು ಕೇಳಿ ಕಣ್ಣೀರಾಗಿದ್ದಾರೆ ಅನುಷ್ಕಾ. ಕಾರ್ಯಕ್ರಮದಲ್ಲಿ ಭಾಗಿಯಾದವರು ವಿಡಿಯೋ ಶೂಟ್ ಮಾಡಿದ್ದು, ಇದರಲ್ಲಿ ಅನುಷ್ಕಾ ಕಣ್ತುಂಬಿಕೊಂಡಿರುವುದನ್ನು ಕಾಣಬಹುದು. ಜನವರಿ 11ರಂದು ಈ ಸ್ಟಾರ್ ಕಪಲ್ ಮೊದಲ ಮಗು ವಮಿಕಾಳನ್ನು ಸ್ವಾಗತಿಸಿದ್ದಾರೆ.