ವಿರುಷ್ಕಾ ದಂಪತಿ ಮಗಳ ಫೋಟೋ ಕ್ಲಿಕ್: ಫೋಟೋಗ್ರಾಫರ್ ಮೇಲೆ ಸಿಟ್ಟಾಗಿರುವ ಫ್ಯಾನ್ಸ್‌!

First Published Mar 22, 2021, 5:31 PM IST

ಭಾರತದ ಮೋಸ್ಟ್‌ ಪವರ್‌ಫುಲ್‌ ಕಪಲ್‌ಗಳಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮತ್ತು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಯದ್ದೂ ಒಂದು. ಜನವರಿ 21ರಂದು ಈ ದಂಪತಿ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಇವರು ಮೀಡಿಯಾ ಹಾಗೂ ಪಾಪರಾಜಿಗಳಿಗೆ ಮಗಳ ಪೋಟೋ ಕ್ಲಿಕ್‌ ಮಾಡದಂತೆ ವಿನಂತಿಸಿ ಕೊಂಡಿದ್ದರು. ಅವರ ಪ್ರೈವೇಸಿ ಕಾಪಾಡಲು ರಿಕ್ವೆಸ್ಟ್ ಮಾಡಿ ಎಲ್ಲಾ ರಿಪೋರ್ಟ್‌ರ್ಸ್‌ಗೆ ಗಿಫ್ಟ್‌ ಹ್ಯಾಂಪರ್ಸ್‌ ಕಳುಹಿಸಿದ್ದರು. ಆದರೆ ಫೊಟೋಗ್ರಾಫರ್ಸ್‌ ಅವರ ಮನವಿ ಮೀರಿ ವಿರುಷ್ಕಾರ ಮಗಳ ಫೋಟೋ ಕ್ಲಿಕ್‌ ಮಾಡಿದ್ದು ಪೋಟೋ ವೈರಲ್‌ ಆಗಿದೆ. ಈ ಕಾರಣಕ್ಕೆ ಪಾಪರಾಜಿ ಮೇಲೆ ನೆಟ್ಟಿಗ್ಗರು  ಸಿಟ್ಟಾಗಿದ್ದಾರೆ.