ಮಾತೃತ್ವ ಬದುಕಿನ ಅತ್ಯಂತ ದೊಡ್ಡ ಖುಷಿ ಎನ್ನುವ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಮನಸಿನಲ್ಲಿರುವ ಮಮತೆ ಹೇಗಿದೆ ಗೊತ್ತಾ..? ಮಗಳು ರೆನೀಯನ್ನು ಸುಶ್ಮಿತಾ 24 ವಯಸ್ಸಿನವರಿದ್ದಾಗ ದತ್ತು ಸ್ವೀಕರಿಸಿದ್ದರು. 2010ರಲ್ಲಿ ಅಲಿಶಾಳನ್ನು ದತ್ತು ಸ್ವೀಕರಿಸಿದ್ದರು.

ಆಕೆಯ ಮೊದಲ ಮಗಳು ರೆನೀಗೆ ಆಕೆಯ ನಿಜವಾದ ಪೋಷಕರನ್ನು ಹುಡುಕೋಕೆ ನೆರವಾಗುವ ಉಡುಗೋಡೆ ನೀಡೋಕೆ ನಿರ್ಧರಿಸಿದ್ದರು ಸುಶ್ಮಿತಾ. ಹಾಗೆಯೇ ರೆನೀಯ 16ನೇ ಬರ್ತ್‌ಡೇಗೆ ಇದನ್ನು ಹೇಳಿದ್ದರು. 18 ವರ್ಷವಾದ್ರೂ ತನ್ನ ಮೂಲ ಪೋಷಕರನ್ನು ನೋಡುವ ಬಗ್ಗೆ ಹೆಚ್ಚಿನ ಒಲವಿರಲಿಲ್ಲ ಆಕೆಗೆ.

ಶಾರೂಖ್ ಖಾನ್ ಪಠಾಣ್ ಲುಕ್ ವೈರಲ್..! ಹೊಸ ಸ್ಟೈಲ್ ನೋಡಿ

ಮಗಳ ಬಯಲಾಜಿಕಲ್ ಪೋಷಕರ ಹೆಸರು ಕೋರ್ಟ್‌ಗೆ ಗೊತ್ತಿದೆಯೋ ಇಲ್ಲವೋ.. ಆದರೆ ಒಂದು ಎನ್ವಲಪ್‌ನಲ್ಲಿ ಈ ಕುರಿತ ಮಾಹಿತಿ ಇದೆ. ಇದನ್ನು ನೀನು ಮಾತ್ರ 18 ವರ್ಷದ ನಂತರ ತೆರೆದು ನೋಡಬಹುದು ಎಂದು ಮಗಳಿಗೆ ಹೇಳಿದ್ದರು ಸುಶ್ಮಿತಾ.

ನನಗೆ ನನ್ನ ಮಗಳಿಗೆ ಸುಳ್ಳು ಹೇಳುವ ಮನಸಿರಲಿಲ್ಲ. ಅಲ್ಲಿ ಹೋದ ಮೇಲೆ ಆಕೆಗೆ ನೋವಾಗುವುದನ್ನು ನಾನು ಬಯಸಲಿಲ್ಲ. ನೀನ್ಯಾವಾಗ ರೆಡಿಯೋ ಆಗ ಹೋಗುವ, ನಾವು ಹೋಗಲೇ ಬೇಕು ಎಂದು ಮಗಳಿಗೆ  ಸುಶ್ಮಿತಾ ಸೇನ್. ಆದ್ರೆ ಯಾಕೆ ತನ್ನ ಮೂಲ ಪೋಷಕರನ್ನು ನೋಡಬೇಕು ಎಂದು ತಾಯಿಯನ್ನು ಪ್ರಶ್ನಿಸಿದ್ದರು ರೆನೀ.