ಶಾರೂಖ್ ಖಾನ್ ಪಠಾಣ್ ಲುಕ್ ವೈರಲ್..! ಹೊಸ ಸ್ಟೈಲ್ ನೋಡಿ

ಯಶ್‌ ರಾಜ್‌ ಸ್ಟುಡಿಯೋದಲ್ಲಿ ಶಾರೂಖ್ ಖಾನ್ ಹೊಸ ಲುಕ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಠಾಣ್ ಸಿನಿಮಾ ಶೂಟಿಂಗ್ ಆರಂಭವಾಗಿದ್ಯಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್

Shah Rukh Khans brand-new Pathan look is a hit online dpl

ಮುಂಬೈನ ಯಶ್‌ ರಾಜ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡ ಶಾರೂಖ್ ಖಾನ್ ಲುಕ್ ಎಲ್ಲಡೆ ವೈರಲ್ ಆಗಿದೆ. ಇದೀಗ ಇದು ಪಠಾಣ್ ಸಿನಿಮಾದ ತಯಾರಿಯಾ ಎಂಬ ಕುತೂಹಲದಲ್ಲಿದ್ದಾರೆ ಫ್ಯಾನ್ಸ್. ಪಠಾಣ್ ಸಿನಿಮಾ ಶೂಟಿಂಗ್ ನವೆಂಬರ್‌ನಲ್ಲಿ ಆರಂಭವಾಗಲಿದೆ ಎನ್ನಲಾಗಿತ್ತು. ಬಹುತೇಕ ಶೂಟಿಂಗ್ ಆರಂಭವಾದಂತಿದೆ

ಶಾರೂಖ್ ಖಾನ್ ನ್ಯೂ ಲುಕ್: ಸನ್ ಗ್ಲಾಸ್ ಹಾಕಿ ಕಾರಿನಿಂದ ಇಳಿದ ಶಾರೂಖ್ ಹೇರ್ ಸ್ಟೈಲ್ ಡಿಫರೆಂಟಾಗಿತ್ತು. ಸೈಡ್‌ನಿಂದ ಜೆಡೆ ಹೆಣೆದು ಬಿಡಲಾಗಿತ್ತು. 55 ವರ್ಷದ ನಟ ಗಡ್ಡವನ್ನೂ ಬಿಟ್ಟು ಸ್ಟೈಲಿಷ್ ಕಾಣ್ತಿದ್ರು.

ಶಾರುಖ್‌ ಖಾನ್‌ - ಹೃತಿಕ್‌ ರೋಶನ್‌: ಬಿಯರ್ಡ್‌ ಲುಕ್‌ನಲ್ಲಿ ಬಾಲಿವುಡ್‌ ಸ್ಟಾರ್ಸ್‌!

2018ರಲ್ಲಿ ಝೀರೋ ಸಿನಿಮಾ ಮಾಡಿದ್ದ ನಟನಿಗೆ ಆ ಪ್ರಾಜೆಕ್ಟ್ ಅಷ್ಟು ಯಶಸ್ಸು ತಂದುಕೊಟ್ಟಿರಲಿಲ್ಲ. ಹಾಗಾಗಿ ಬಿಗ್‌ ಸ್ಕ್ರೀನ್‌ನಲ್ಲಿ ಬಿಗ್ ಬ್ರೇಕ್ದ ಕೊಡೋ ಸಿನಿಮಾ ಇದಾಗಲಿದೆ ಎನ್ನಲಾಗುತ್ತಿದೆ. ಝೀರೋ ಸಿನಿಮಾದಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ನಟಿಸಿದ್ದರು.

ಶಾರೂಖ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ. ಬಾಲಿವುಡ್ ಬಾದ್‌ ಶಾ 55 ವರ್ಷವಾದ್ರೂ ಸಿಕ್ಕಾಪಟ್ಟೆ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಸಿನಿಮಾದಲ್ಲಿ ಶಾರೂಖ್ ಖಾನ್ ಜೊತೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾಜ್ ಪ್ರೊಡಕ್ಷನ್‌ ಸಿನಿಮಾಗೆ ಸಿದ್ಧಾರ್ಥ್‌ ಆನಂದ್ ಆಕ್ಷನ್ ಕಟ್ ಹೇಳಲಿದ್ದಾರೆ.

Latest Videos
Follow Us:
Download App:
  • android
  • ios