ರಣಬೀರ್-ಆಲಿಯಾ ವೆಡ್ಡಿಂಗ್ ಆ್ಯನಿವರ್ಸರಿ: ಮಾಜಿ ಪ್ರಿಯತಮನಿಗಾಗಿ ಕಣ್ಣೀರಿಟ್ಟ ನಟಿ ಕತ್ರೀನಾ
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾಗುವ ಮುನ್ನ ರಣಬೀರ್ ಕತ್ರಿನಾ ಕೈಫ್ ಜೊತೆ ಸಂಬಂಧದಲ್ಲಿದ್ದರು. ಅವರ ಹಳೆಯ ಸಂದರ್ಶನವೊಂದು ಈಗ ವೈರಲ್ ಆಗಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಇಂದು ಅಂದರೆ ಏಪ್ರಿಲ್ 14 ರಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ರಣಬೀರ್ (Ranbir Kapoor) ಈಗ ಆಲಿಯಾ ಜೊತೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ, ಆದರೆ ಅವರ ಹೆಸರು ಅನೇಕ ನಟಿಯರೊಂದಿಗೆ ಈ ಹಿಂದೆ ಥಳಕು ಹಾಕಿಕೊಂಡಿದ್ದವು. ಅವುಗಳಲ್ಲಿ ಒಂದು ಹೆಸರೆಂದರೆ ಅದು ಕತ್ರಿನಾ ಕೈಫ್. ಕತ್ರಿನಾ ಕೈಫ್ ಜೊತೆ ಮದುವೆ ಆಗುತ್ತೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇವರಿಬ್ಬರು ಬೇರೆಯಾಗಿದ್ದು ಏಕೆ ಎಂಬುದು ಇಂದಿಗೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇತ್ತೀಚೆಗೆ ರಣಬೀರ್ ಅವರ ತಾಯಿ ನೀತು ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದು ಕತ್ರಿನಾ ಸಲುವಾಗಿ ಎಂದೇ ಎಲ್ಲರೂ ಊಹಿಸಿದ್ದರು. ಕತ್ರಿನಾ ಅವರ ತಾಯಿಯೂ ಉತ್ತರ ನೀಡಿದಾಗ ಇದು ಹೆಚ್ಚು ಚರ್ಚೆಯಾಗಿತ್ತು. ಅಂದಿನಿಂದ ರಣಬೀರ್ ಕತ್ರಿನಾ ಅಫೇರ್ ಮತ್ತು ಬ್ರೇಕಪ್ ಸುದ್ದಿ ಶರವೇಗದಲ್ಲಿ ಹಬ್ಬಿತ್ತು.
ಚಿತ್ರರಂಗವು ಅನೇಕ ಆನ್ ಆಫ್ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಚಲನಚಿತ್ರಗಳಲ್ಲಿ ಕೆಲಸ ಮಾಡುವಾಗ, ಕೆಲವರು ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸುತ್ತಾರೆ, ಕೆಲವರು ತಮ್ಮ ಬಾಂಧವ್ಯವನ್ನು ಸಂಬಂಧವಾಗಿ ಪರಿವರ್ತಿಸುತ್ತಾರೆ, ಕೆಲವರು ಅನೇಕ ವರ್ಷಗಳಿಂದ ಡೇಟಿಂಗ್ ಮಾಡಿದರೂ ಒಂದಾಗಲು ಸಾಧ್ಯವಿಲ್ಲ. ಇದೇ ಕಥೆ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್. ಇಬ್ಬರೂ ಹಲವು ವರ್ಷಗಳ ಕಾಲ ಲಿವ್ ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು, ಆದರೆ ರಣಬೀರ್ ಆಲಿಯಾ ಭಟ್ ಅವರನ್ನು ವಿವಾಹವಾದರು ಮತ್ತು ಕತ್ರಿನಾ (Katrina Kaif) ವಿಕ್ಕಿ ಕೌಶಲ್ ಅವರನ್ನು ವರಿಸಿದರು. ಬ್ರೇಕಪ್ ಆದ ನಂತರವೂ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಎಂದು ಕತ್ರಿನಾ ಹೇಳಿದ್ದರೂ ಈ ನೋವಿನಿಂದ ಹೊರಬರುವುದು ಅಷ್ಟು ಸುಲಭವಾಗಿರಲಿಲ್ಲ.
ಮೊದಲ ವಿವಾಹ ವಾರ್ಷಿಕೋತ್ಸವ: ರಣಬೀರ್ ಜೊತೆಯ ಅಪರೂಪದ ಫೋಟೋ ಹಂಚಿಕೊಂಡ ಆಲಿಯಾ!
ಮಿಡ್ ಡೇಗೆ ನೀಡಿದ ಹಳೆಯ ಸಂದರ್ಶನವೊಂದು ಇದೀಗ ವೈರಲ್ ಆಗಿದೆ. ರಣಬೀರ್ ಆಲಿಯಾ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಇದೀಗ ಪುನಃ ವೈರಲ್ ಆಗುತ್ತಿದೆ. ಇದರಲ್ಲಿ ಕತ್ರಿನಾ ಕೈಫ್ ಬ್ರೇಕಪ್ (Break up) ಬಗ್ಗೆ ಹೇಳಿದ್ದರು. 'ಆ ಸಮಯದಲ್ಲಿ ನಾನು ಅನುಭವಿಸಿದ್ದ ನೋವು ನನ್ನ ಜೀವನದ ಅತ್ಯಂತ ಕಷ್ಟಕರವಾದ ಹಂತವಾಗಿತ್ತು. ನಾನು ಈ ವಿಘಟನೆಯನ್ನು ಅನುಭವಿಸುತ್ತಿರುವಾಗ, ನನ್ನ ಸಹೋದರಿಗೂ ಇದೇ ರೀತಿಯ ನೋವು ಉಂಟಾಗಿತ್ತು. ಇಬ್ಬರ ಜೀವನದಲ್ಲಿಯೂ ಏನೋ ನೋವು ಕಾಡಿತ್ತು. ನಮ್ಮ ವಿಷಯ ಸಾರ್ವಜನಿಕಗೊಂಡಿದ್ದರಿಂದ ಅಪಾರ ನೋವುಂಟು ಆಗಿತ್ತು ಎಂದು ಕತ್ರಿನಾ ಹೇಳಿದ್ದರು. ನಾವಿಬ್ಬರೂ ಒಂದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಆ ಸಮಯದಲ್ಲಿ ನನ್ನ ಸ್ನೇಹಿತರು ಸಹ ನನಗೆ ಬಲವಾದ ಬೆಂಬಲವನ್ನು ನೀಡಿದರು ಎಂದಿದ್ದ ಕತ್ರೀನಾ, 'ಆ ಅಧ್ಯಾಯದ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಈ ಅನುಭವದಿಂದ ಹೊರಬಂದು, ನಾನು ಸಾಕಷ್ಟು ಪ್ರಬುದ್ಧಳಾಗಿದ್ದೇನೆ ಎಂದಿದ್ದರು.
ರಣಬೀರ್ ಕಪೂರ್ ಕತ್ರಿನಾ ಕೈಫ್ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ (Live in Relation) ವಾಸಿಸಲು ಪ್ರಾರಂಭಿಸಿದಾಗ, ಅವರ ತಂದೆ ಮತ್ತು ಹಿರಿಯ ನಟ ರಿಷಿ ಕಪೂರ್ ಕೂಡ ಸಂತೋಷವಾಗಿರಲಿಲ್ಲ ಎಂದೇ ಹೇಳಲಾಗುತ್ತಿದೆ. ಮಗನ ಈ ನಿರ್ಧಾರಕ್ಕೆ ತುಂಬಾ ಕೋಪ ಬಂದಿತ್ತು. ಅದೇ ಸಮಯದಲ್ಲಿ, ನೀತು ಕಪೂರ್ ಅವರು ತಮ್ಮ ಮಗನ ಸಂಬಂಧಗಳು, ಅವರ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದಿರುವ ರೀತಿ ಕೂಡ ಸ್ಪಷ್ಟವಾಗಿದೆ.
Wedding Anniversary ದಿನ ಶಾಕಿಂಗ್ ಹೇಳಿಕೆ ಕೊಟ್ಟ ರಣಬೀರ್ ಕಪೂರ್
ಅಂದಹಾಗೆ ಕತ್ರಿನಾ ಅವರಿಗೆ ಆರು ಸಹೋದರಿಯರು. ಸ್ಟೆಫನಿ, ಕ್ರಿಸ್ಟಿನ್, ನಟಾಚಾ ಅಕ್ಕಂದಿರಾದರೆ, ಸೆಬಾಸ್ಟಿನ್ ಕತ್ರಿನಾ ಅವರ ಸಹೋದರ. ಇಸಬೆಲ್ಲಾ, ಮೆಲಿಸ್ಟಾ ಮತ್ತು ಸೋನಿಯಾ ತಂಗಿಯಂದಿರು. ಕತ್ರಿನಾ ತಾಯಿ ಸುಝೇನ್ ಟರ್ಕೋಟ್. ಕತ್ರಿನಾ ಸಹೋದರಿ ಇಸಬೆಲ್ಲಾ ಕೈಫ್ (Isbella Kaif) ಮಾತ್ರ ಸಿನಿಮಾ ಲೋಕಕ್ಕೆ ಬಂದಿದ್ದು ಜನರಿಗೆ ಪರಿಚಿತವಾಗಿದ್ದಾರೆ. ಇಸಬೆಲ್ಲಾ ಈ ವರೆಗೆ ಸುಸ್ವಾಗತಂ, ಖುಷ್ಮದೀದ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿ ಕತ್ರಿನಾ ಮಾತನಾಡಿದ್ದು ಕೂಡ ಇಸಬೆಲ್ಲಾ ಅವರ ಜೀವನದ ಕುರಿತು ಎನ್ನಲಾಗುತ್ತಿದೆ.