Asianet Suvarna News Asianet Suvarna News

Kareena Kapoor: ನಂಗೆ ಅಕ್ಷಯ್ ಕುಮಾರ್‌ಗೆ ಸಿಗೋವಷ್ಟೇ ಸಂಭಾವನೆ ಸಿಗಬೇಕು ಅಂತ ಕರೀನಾ ಕಪೂರ್ ಹೇಳಿದಾಗ...

ಕೆಲವೊಮ್ಮೆ ಬಾಲಿವುಡ್ ಸೆಲೆಬ್ರಿಟಿಗಳ ಆನ್ ಸ್ಟೇಜ್ ಮಾತುಕತೆಗಳು ತಮಾಷೆಯಾಗಿರುತ್ತವೆ. ಇಲ್ಲಿ ಅಂಥದೊಂದು ಶೋನಲ್ಲಿ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ತಮ್ಮ ತಮ್ಮ ಸಂಭಾವನೆಯ ವಿಷಯ ಮಾತಾಡಿಕೊಂಡಿದ್ದು ವೈರಲ್ ಆಗಿದೆ.

 

When Kareena Kapoor said she wants to get remuneration as much as Akshay Kumar
Author
First Published Aug 12, 2024, 6:35 PM IST | Last Updated Aug 12, 2024, 7:22 PM IST

'ನಂಗೆ ಅಕ್ಷಯ್ ಕುಮಾರ್‌ಗೆ ಸಿಗುತ್ತಿರುವಷ್ಟೇ ಸಂಭಾವನೆ ಸಿಗಬೇಕು' ಅಂತ ಕರೀನಾ ಕಪೂರ್ ಹೇಳ್ತಾಳೆ. ಪಕ್ಕದಲ್ಲೇ ಅಕ್ಷಯ್ ಕುಮಾರ್ ಕೂತಿದ್ದಾನೆ. ಇನ್ನೊಬ್ಬ ಅಂಕರ್ ಇದ್ದಾಳೆ. ಆಕೆ ಅಕ್ಷಯ್ ಕುಮಾರ್ ಜೊತೆ ಕೇಳ್ತಾಳೆ- 'ಇದು ನಿಮಗೆ ಓಕೇನಾ?' ಅಂತ. ಆಗ ಅಕ್ಷಯ್ ಏನು ಹೇಳಬೇಕು? ಅಕ್ಷಯ್‌ಗೇ ಯಾಕೆ ಈ ಪ್ರಶ್ನೆ ಅಂದರೆ, ಅಕ್ಷಯ್‌ನದೇ ಆದ ಪ್ರೊಡಕ್ಷನ್ ಹೌಸ್ ಇದೆ. ಆತ ನಾಳೆ ಕರೀನಾಳನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ತನಗೆ ಸಿಗುವಷ್ಟೇ ಹಣ ಕರೀನಾಗೂ ಕೊಡಬೇಕು.

ಆದ್ರೆ ಅಕ್ಷಯ್ ಕುಮಾರ್ ಜಾಣ. ಅವನು ಹೇಳಿದ್ದು ಹೀಗಿತ್ತು- "ಓಕೆ, ಒಂದ್ ಕೆಲ್ಸ ಮಾಡೋಣ. ನಾನು ಹಾಗೂ ಕರಣ್ ಜೋಹರ್ ಜೊತೆಯಾಗಿ ಪ್ರೊಡಕ್ಷನ್ ಹೌಸ್ ಇದೆ. ನಾವು ಹಣ ಹಾಕಿ ಫಿಲಂ ಮಾಡ್ತೀವಿ. ನಾನು ಸಂಭಾವನೆ ತೆಗೆದುಕೊಳ್ಳಲ್ಲ. ಆ ಸಿನಿಮಾದಿಂದ ಬಂದ ಲಾಭದಲ್ಲಿ ಫಿಫ್ಟಿ- ಫಿಫ್ಟಿ ಮಾಡಿಕೊಳ್ಳೋಣ. ಓಕೇನಾ?" ಅಂತ. ಈಗ ಕರೀನಾ ಹಿಂಜರಿಯುತ್ತಾಳೆ. ಈಗ ಅಕ್ಷಯ್ "ಇಗೋ ಈಗ ನೀನು ಹಿಂಜರಿಯುವಂತಿಲ್ಲ'' ಎಂದು ಚುಡಾಯಿಸ್ತಾನೆ. "ನಾನು ಹೀರೋ ಆಗಿರ್ತೀನಿ, ನಾನ್ಯಾಕೆ ಹಣ ಹಾಕಲಿ? ನಾನು ಹೀರೋಯಿನ್ ಅಲ್ಲ, ಆರ್ಟಿಸ್ಟ್." ಅಂತ ಹೇಳ್ತಾಳೆ. ಅಕ್ಷಯ್ ಬಿಡೊಲ್ಲ. ಆಗ ಕರೀನಾ "ಹಾಗಾದ್ರೆ ನನ್ನ ಸೆಕ್ರೆಟರಿ ಸೋನಾಲ್ ಇದಾಳೆ, ಈ ಬಗ್ಗೆ ಅಗ್ರಿಮೆಂಟ್ ಮಾತಾಡೋಣ" ಅಂತಾಳೆ. ಆದ್ರೆ ಅಕ್ಷಯ್ ಇನ್ನೂ ಸ್ಮಾರ್ಟ್. "ಸೋನಾಲ್ ಸ್ಮಾರ್ಟ್ ಇದಾಳೆ, ಅವಳು ಈ ಡೀಲ್‌ಗೆ ಒಪ್ಪೋಲ್ಲ" ಅಂತಾನೆ ಅಕ್ಷಯ್. ಕಡೆಗೂ ಕರೀನಾ ಈ ಫಿಫ್ಟಿ - ಫಿಫ್ಟಿ ಡೀಲ್‌ಗೆ ಒಪ್ತಾಳೆ. 

ಹೀರೋ ಜೊತೆ ಲಿಪ್​ಲಾಕ್ ದೃಶ್ಯದಲ್ಲಿ ಬೆವರಿ ಹೋಗಿದ್ದೆ​, ಭಯದಿಂದ ನಡುಗುತ್ತಿದ್ದೆ ಎಂದ ಮೀನಾಕ್ಷಿ ಶೇಷಾದ್ರಿ
 

ಹಣ ತೆಗೆದುಕೊಂಡು ನಟಿಸಿ ನಡೆದುಬಿಡುವುದು ಸುಲಭ. ಅದ್ರೆ ನಿಜಕ್ಕೂ ಹಣ ಹಾಕಿ  ಸಿನಿಮಾ ಮಾಡುವುದು ಕಷ್ಟ. ನಷ್ಟವಾದರೆ ಹಾಕಿದ ಹಣವೆಲ್ಲಾ ಹೋಯಿತು, ಇದು ಕರೀನಾಗೂ ಗೊತ್ತಿದ್ದದ್ದೇ. ಆದ್ದರಿಂದಲೇ ಲಾಭವಾಗುವ ಸಾಧ್ಯಯಿದ್ದರೂ ಸಿನಿಮಾ ಬಂದ ಹಣ ಹಂಚಿಕೊಳ್ಳುವ ಉಸಾಬರಿ ಮಾತ್ರ ತನಗೆ ಬೇಡ ಎಂದು ಕರೀನಾ ಅಂಜುವುದಕ್ಕೆ ಕಾರಣ. ಅದೆಲ್ಲ ಸರಿ. ಅಕ್ಷಯ್‌ನಷ್ಟೇ ತನಗೂ ಸಂಭಾವನೆ ಬೇಕು ಎಂದು ಕರೀನಾ ಹೇಳೋಕೆ ಏನು ಕಾರಣ? ಕಾರಣವೆಂದರೆ ಅಕ್ಷಯ್‌ ಕುಮಾರ್ ಸಂಭಾವನೆ ಕರೀನಾ ಸಂಭಾವನೆಯ ಹತ್ತು ಪಟ್ಟು ಇದೆ. 

ಚಿತ್ರವೊಂದಕ್ಕೆ ₹ 10- 15 ಕೋಟಿ ಗಳಿಸುತ್ತಿರುವ ಕೆಲವೇ ಕೆಲವು ನಟಿಯರಲ್ಲಿ ಕರೀನಾ ಕಪೂರ್ ಒಬ್ಬರು. "ನನಗೆ ಅಷ್ಟು ಬೇಕು! ನನ್ನ ಪ್ರಕಾರ ಇದು ನನ್ನ ನಟನೆಗೆ ಸಂಬಂಧಿಸಿದ್ದಲ್ಲ. ನಾನು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಹಣಕ್ಕೆ ಸಂಬಂಧಿಸಿದ್ದಲ್ಲ. ನನಗೆ ಒಂದು ಪಾತ್ರ ಇಷ್ಟವಾದರೆ ಕಡಿಮೆ ಸಂಭಾವನೆಗೂ ನಟಿಸಬಲ್ಲೆ. ಇದು ನನ್ನ ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಆದು ಚಿತ್ರ ಯಾವುದು, ಆ ಪಾತ್ರ ನನಗೆ ಏನು ನೀಡುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾನೀಗ ಆ ಹಂತದಲ್ಲಿ ಇದ್ದೇನೆ ಎಂದು ನಾನು ಭಾವಿಸುತ್ತೇನೆ. ಖಂಡಿತ ದೊಡ್ಡ ಕಮರ್ಷಿಯಲ್ ಚಿತ್ರವಾಗಿದ್ದರೆ ಬಹುಶಃ ನಾನು ಏನು ಬೆಲೆ ಹೇಳಿದರೂ ಕಡಿಮೆ!" ಎಂದು ಕರೀನಾ ಒಮ್ಮೆ ಹೇಳಿದ್ದಳು. 

ಶಾರುಖ್ ಖಾನ್​ ಹೆಸರಿಗೆ ಕಪ್ಪುಚುಕ್ಕೆ: ವಿದೇಶದ ನೆಲದಲ್ಲಿ ಮರ್ಯಾದೆ ಕಳೆದುಕೊಂಡ ಬಾದ್​ಶಾಹ್​!

ಅತ್ತ ಅಕ್ಷಯ್ ಕುಮಾರ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ೬೦ ಕೋಟಿಯಿಂದ ೧೪೦ ಕೋಟಿಯವರೆಗೆ ಚಾಚಿಕೊಳ್ಳುತ್ತೆ. ಅಂದರೆ ಕರೀನಾ ಸಂಭಾವನೆಯ ಸುಮಾರು ಹತ್ತು ಪಟ್ಟು. ಈತ ವರ್ಷಕ್ಕೆ ನಲ್ಕೋ ಐದೋ ಸಿನಿಮಾ ಮಾಡುತ್ತಾನೆ. ಅಲ್ಲಿಗೆ ವರ್ಷಕ್ಕೆ ಸುಮಾರು ಐನೂರು ಕೋಟಿ ದುಡಿಯುತ್ತಾನೆ. ಬಾಲಿವುಡ್‌ನ ಗ್ಯಾರಂಟಿ ಹೀರೋಗಳಲ್ಲಿ ಅಕ್ಷಯ್ ಒಬ್ಬ.

     

Latest Videos
Follow Us:
Download App:
  • android
  • ios